Friday, June 23, 2017

ಆಡಿಸಿ ನೋಡು, ಬೀಳಿಸಿ ನೋಡು, ಉರುಳಿ ಹೋಗದು / Aadisi nodu Beelisi nodu

ಸಾಹಿತ್ಯ: ಚಿ.ಉದಯಶಂಕರ್ 
ಗಾಯಕರು: ಪಿ.ಬಿ.ಶ್ರೀನಿವಾಸ್ 
ಕಲಾವಿದರು: ಡಾ.ರಾಜ್ ಕುಮಾರ್ 









ಧ್ವನಿಸುರಳಿಯ ಕೊಂಡಿ / Hear the song 


"ಕೊಟ್ಟಿದ್ದನ್ನ ನೆನಸ್ಕೊಬಾರ್ದು, ಕೊಡೋದನ್ನ ಮರಿಬಾರ್ದು" 

"ತತ್ವ ಅಡಗಿರುವ ಬೊಂಬೆ"

ಆಡಿಸಿ ನೋಡು, ಬೀಳಿಸಿ ನೋಡು, ಉರುಳಿ ಹೋಗದು   
ಆಡಿಸಿ ನೋಡು, ಬೀಳಿಸಿ ನೋಡು, ಉರುಳಿ ಹೋಗದು
ಏನೇ ಬರಲಿ, ಯಾರಿಗು ಸೋತು, ತಲೆಯ ಬಾಗದು
ಎಂದಿಗೂ ನಾನು, ಹೀಗೆ ಇರುವೆ, ಎಂದು ನಗುವುದು, ಹೀಗೆ ನಗುತಲಿರುವುದು
ಆಡಿಸಿ ನೋಡು, ಬೀಳಿಸಿ ನೋಡು, ಉರುಳಿ ಹೋಗದು

ಗುಡಿಸಲೇ ಆಗಲಿ, ಅರಮನೆಯಾಗಲಿ, ಆಟ ನಿಲ್ಲದು
ಹಿರಿಯರೆ ಇರಲಿ, ಕಿರಿಯರೆ ಬರಲಿ, ಭೇಧ ತೋರದು
ಗುಡಿಸಲೇ ಆಗಲಿ, ಅರಮನೆಯಾಗಲಿ, ಆಟ ನಿಲ್ಲದು
ಹಿರಿಯರೆ ಇರಲಿ, ಕಿರಿಯರೆ ಬರಲಿ, ಭೇಧ ತೋರದು
ಕಷ್ಟವೋ ಸುಖವೊ ಅಳುಕದೆ ಆಡಿ, ತೂಗುತಿರುವುದು ತೂಗುತಿರುವುದು
ಆಡಿಸಿ ನೋಡು, ಬೀಳಿಸಿ ನೋಡು, ಉರುಳಿ ಹೋಗದು

ಮೈಯನೆ ಹಿಂಡಿ, ನೊಂದರು ಕಬ್ಬು, ಸಿಹಿಯ ಕೊಡುವುದು
ತೇಯುತಲಿದ್ದರು ಗಂಧದ ಪರಿಮಳ, ತುಂಬಿ ಬರುವುದು
ಮೈಯನೆ ಹಿಂಡಿ, ನೊಂದರು ಕಬ್ಬು, ಸಿಹಿಯ ಕೊಡುವುದು
ತೇಯುತಲಿದ್ದರು ಗಂಧದ ಪರಿಮಳ, ತುಂಬಿ ಬರುವುದು
ತಾನೆ ಉರಿದರು ದೀಪವು ಮನೆಗೆ, ಬೆಳಕ ತರುವುದು.. ದೀಪ ಬೆಳಕ ತರುವುದು..
ಆಡಿಸಿ ನೋಡು, ಬೀಳಿಸಿ ನೋಡು, ಉರುಳಿ ಹೋಗದು

ಆಡಿಸುವಾತನ ಕೈಚಳಕದಲಿ, ಎಲ್ಲ ಅಡಗಿದೆ
ಆತನ ಕರುಣೆಯ ಜೀವವ ತುಂಬಿ, ಕುಣಿಸಿ ನಲಿಸಿದೆ
ಆಡಿಸುವಾತನ ಕೈಚಳಕದಲಿ, ಎಲ್ಲ ಅಡಗಿದೆ
ಆತನ ಕರುಣೆಯ ಜೀವವ ತುಂಬಿ, ಕುಣಿಸಿ ನಲಿಸಿದೆ
ಆ ಕೈ ಸೋತರೆ, ಬೊಂಬೆಯ ಕಥೆಯು, ಕೊನೆಯಾಗುವುದೇ ಕೊನೆಯಾಗುವುದೇ
ಆಡಿಸಿ ನೋಡು, ಬೀಳಿಸಿ ನೋಡು, ಉರುಳಿ ಹೋಗದು
ಏನೇ ಬರಲಿ, ಯಾರಿಗು ಸೋತು, ತಲೆಯ ಬಾಗದು
ಎಂದಿಗೂ ನಾನು, ಹೀಗೆ ಇರುವೆ, ಎಂದು ನಗುವುದು, ಹೀಗೆ ನಗುತಲಿರುವುದು
ಆಡಿಸಿ ನೋಡು, ಬೀಳಿಸಿ ನೋಡು, ಉರುಳಿ ಹೋಗದು

No comments:

Post a Comment