Tuesday, June 6, 2017

ಬೊಂಬೆ ಹೇಳುತೈತೆ / Bombe helutaite

ಸಾಹಿತ್ಯ : ಸಂತೋಷ್ ಆನಂದರಾಮ್
ಗಾಯಕರು : ಶ್ರೀ ವಿಜಯಪ್ರಕಾಶ್
ಸಂಗೀತ ಸಂಯೋಜಕರು : ವಿ.ಹರಿಕೃಷ್ಣ



ಧ್ವನಿಸುರಳಿಯ ಕೊಂಡಿ / Hear the song 


ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ 
ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ

ಹೊಸ ಬೆಳಕೊಂದು, ಹೊಸಿಲಿಗೆ ಬಂದು
ಬೆಳಗಿದೆ ಮನೆಯ ಮನಗಳ ಇಂದು
ಆರಾಧಿಸೋ, ರಾರಾಜಿಸೋ ರಾಜರತ್ನನು
ಆಡಿಸಿಯೇ ನೋಡು, ಬೀಳಿಸಿಯೇ ನೋಡು
ಎಂದು ಸೋಲದು, ಸೋತು ತಲೆಯಬಾಗದು

ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ

ಗುಡಿಸಲೆ ಆಗಲಿ ಅರಮನೆಯಾಗಲಿ ಆಟವೆ ನಿಲ್ಲದು, ಎಂದು ಆಟ ನಿಲ್ಲದು
ಹಿರಿಯರೆ ಇರಲಿ ಕಿರಿಯರೆ ಬರಲಿ ಬೇಧವೆ ತೋರದು, ಎಂದು ಬೇಧ ತೋರದು
ಎಲ್ಲ ಇದ್ದು, ಏನೂ ಇಲ್ಲದ ಹಾಗೆ ಬದುಕಿರುವ,
ಆಕಾಶ ನೋಡದ ಕೈಯೆ ನೆನದು ಪ್ರೀತಿ ಹಂಚಿರುವ
ಜೊತೆಗಿರು ನೀನು ಅಪ್ಪನ ಹಾಗೆ
ಹಣ್ಣೆಲೆ ಕಾಯೋ ವಿನಯದಿ ಹೀಗೆ
ನಿನ್ನನು ಪಡೆದ ನಾವು ಪುನೀತ ಬಾಳು ನಗುನಗುತ

ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ

ತಾನೇ ಉರಿದು ಮನೆಗೆ ಬೆಳಕು ಕೊಡುವ ದೀಪವಿದು, ನಂದಾದೀಪವೇ ಇದು
ಆಡಿಸುವಾತನ ಕರುಣೆಯ ಮೇಲೆ ನಮ್ಮ ಪಾತ್ರವು, ಸಮಯದ ಸೂತ್ರ ಅವನದು
ಒಂದು ಮುತ್ತಿನ ಕಥೆಯ ಹೇಳಿತು ಈ ಬೊಂಬೆ
ಆ ಕಥೆಯಲ್ಲಿದ್ದ ರಾಜನಂಗೆ, ನೀನು ಬಂದೆ
ಯೋಗವು ಒಮ್ಮೆ, ಬರುವುದು ನಮಗೆ
ಯೋಗ್ಯತೆ ಒಂದೇ, ಉಳಿವುದು ಕೊನೆಗೆ
ಸೂರ್ಯನೊಬ್ಬ ಚಂದ್ರನೊಬ್ಬ ರಾಜನು ಒಬ್ಬ, ಈ ರಾಜನು ಒಬ್ಬ
ಆಡಿಸಿಯೇ ನೋಡು, ಬೀಳಿಸಿಯೇ ನೋಡು
ಎಂದು ಸೋಲದು, ಸೋತು ತಲೆಯಬಾಗದು

ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ

No comments:

Post a Comment