ಸಾಹಿತ್ಯ : ಶ್ರೀ ಕಡಕೋಳ ಮಡಿವಾಳಪ್ಪನವರು
ಗಾಯಕರು : ಶರಣಪ್ಪ ಗೋನಾಲ್ & ಪ್ರತಿಭಾ ಗೋನಾಲ್
ಧ್ವನಿಸುರಳಿಯ ಕೊಂಡಿ / Hear the song
ಮಾಯೆಯ ಮುಸುಕಿನಾಗ ನಂಬಾಳ್ ನೆಡ್-ದೈತಿ,
ಯಾವ್ದು ಸ್ಥಿರ ಅಲ್ಲ ಅಂತ ಗೊತ್ತಿದ್ರು, ಗುದ್ದಾಟ ನೆಡ್-ದೈತಿ,
ಹೊಲ ಮನಿ ಹೆಂಡ್ತಿ ಮಕ್ಳು ಅಂತ ಬ್ರಾಂತಿ ತುಂಬೈತಿ
ಯಾಕ ಮಾಡತಿದಿ ಒಣ ಚಿಂತಿ, ನಿನಗ
ಬಡುಕೊಂಡೈತೋ ಒಣ ಭ್ರಾಂತಿ ||
ಪ ||
ಅದಕ ಜೋತುಕೊಂಡು ನೀ ಕುಂತಿ, ನಾಳೆ
ಯಮನು ಕೇಳಿದ್ರೆ ಏನಂತಿ
|| ಅ.ಪ ||
ಮನೆಯ ಕಟ್ಟಿಸಿದಿ ಮಾಳಿಗಿ, ನಿನಗ
ಹೋಗೋದು ಬಂತಲ್ಲೋ ನಾಳಿಗಿ
ಗೊಂಗ್ಡಿದು ಮಾಡ್ಯಾರ ಜೋಳಿಗಿ,
ನಿನಗ ಇಟ್ಟು ಬಂದು ಉಣ್ತಾರಲ್ಲೊ ಹೋಳಿಗಿ || ೧ ||
ಹೆಂಡರು ಮಕ್ಕಳು ಸಂಪತ್ತು, ನೀ
ಹುಟ್ಟಿದಾಗ ಅದು ಎಲ್ಲಿತ್ತು
ನಟ್ಟ ನಡುವೆ ಗಂಟು ಬಿಚ್ಚಿಟ್ಟು,
ನೀ ತಿಳಿದುನೋಡು ಅದರೊಳು ಕುಂತು || ೨ ||
ಸಂಕಷ್ಟ ಪಡುತಿದಿ ಸಾಯೋದುಕ, ಅದು
ಲಟಪಟ ಉಣ್ಣಲ್ಲೋ ಮಾಯೋದುಕ
ದತ್ತಗುರು ಮಹಂತಾನೆ ಬಲ್ಲ, ಅವನ
ಹೊರೆತು ಮತ್ಯಾರಿಲ್ಲ
|| ೩ ||
ಪದಗಳಾರ್ಥ:
ಗೊಂಗಡಿ
: ಹಾಸಿಗೆ, ಮೆತ್ತೆ, ಕ್ವಿಲ್ಟು, ರಜಾಯಿ, ಕವುದಿ, ತಡಿ
=======================================================
Saahitya : Sri Kadakola
Madivaalappa
Singers : Sri Sharanappa Gonal &
Prathibha Gonal
mAyeya musukinAga naMbAL neD daiti,
yAvdu sthira alla anta gottidru, guddATa
neD daiti,
hola mani henDti makLu anta brAnti
tuMbaiti
yAka mADatidi oNa chinti, ninaga
baDukonDaito oNa bhrAnti || pa ||
adaka jotukonDu nI kunti, nALe yamanu
keLidre enanti || a.pa ||
maneya kaTTisidi mALigi, ninaga hogodu
bantallo nALigi
gongDidu mADyAra joLigi, ninaga iTTu bandu
uNtArallo hoLigi || 1 ||
henDaru makkaLu saMpattu, nI huTTidAga adu
ellittu
naTTa naDuve ganTu bichchiTTu, nI tiLidu
noDu adaroLu kuntu || 2 ||
sankaShTa paDutidi sAyoduka, adu laTapaTa
uNNallo mAyoduka
dattaguru mahantAne balla, avana horetu
matyArilla || 3 ||
Thank you Girish.
ReplyDelete