ಸಾಹಿತ್ಯ : ಚಿ.ಉದಯಶಂಕರ್
ಗಾಯಕರು : ಡಾ. ರಾಜ್ ಕುಮಾರ್
ಧ್ವನಿಸುರಳಿಯ ಕೊಂಡಿ / Hear the song
ಚಿಂತೆ ಏಕೆ ಮನವೆ
ಗುರು ರಾಘವೇಂದ್ರನಿರಲು || ಪ ||
ಚಿಂತೆ ಕಳೆದು ನಿಶ್ಚಿಂತೆಯಿಂದ
ಇರುವಂತೆ ಮಾಡುವ ಚಿಂತಾಮಣಿಯಿರೆ || ಅ.ಪ ||
ಭೀತಿ ಏಕೆ ಮನವೆ
ಗುರುರಾಯ ಬಳಿಯಲಿ ಇರಲು
ಭೀತಿ ಕಳೆದು ನಿರ್ಭೀತಿಯಿಂದ
ಇರುವಂತೆ ಮಾಡುವ ಗುರುರಾಯನಿರಲು || ೧ ||
ದುಃಖ ಏತಕೆ ಮನವೆ
ಸದ್ಗುರು ನಾಮ ನಿನ್ನಲ್ಲಿರಲು
ದುಃಖ ಕಳೆದು ಸುಖ ನೀಡಲೆಂದೇ
ಗುರುಸಾರ್ವಭೌಮನು ಇರುವಾಗ ನಿನಗೆ || ೨ ||
ಮುಳುಗ ಬೇಡ ಮನವೇ ಆಸೆಯ ಕಡಲಲ್ಲಿ ನೀನು
ತಾವರೆ ಎಲೆಯು ಜಲರಾಶಿಯಲ್ಲಿ
ಇರುವಂತೆ ನೀನಿರೆ
ಗುರುರಾಯ ಮೆಚ್ಚುವ || ೩ ||
================================================
Saahitya : Sri Chi Udayashankar
Singer : Sri Dr Rajkumar
chinte eke manave
guru rAghavendraniralu || pa ||
chinte kaeLdu nishchinteyinda
iruvante mADuva chintAmaNiyire || a.pa ||
bheeti eke manave
gururAya baLiyali iralu
bheeti kaLedu nirbhItiyinda
iruvante mADuva gururAyaniralu || 1 ||
duHkha etake manave
sadguru nAma ninnalliralu
duHkha kaLedu sukha nIDalende
gurusArvabhaumanu iruvAga ninage || 2 ||
muLuga beDa manave Aseya kaDalalli nInu
tAvare eleyu jalarAshiyalli
iruvante neenire
gururAya mechchuva || 3 ||
No comments:
Post a Comment