ಸಾಹಿತ್ಯ : ಶ್ರೀ ಪುರಂದರದಾಸರು
ಗಾಯಕರು : ಶ್ರೀ ವಿದ್ಯಾಭೂಷಣ
ಧ್ವನಿಸುರಳಿಯ ಕೊಂಡಿ / Hear the song
ರಾಮ ರಾಮ ರಾಮ ಎನ್ನಿರೊ || ಪ ||
ಇಂತಹ ಸ್ವಾಮಿಯ ನಾಮವ ಮರೆಯದಿರೊ || ಅ.ಪ ||
ತುಂಬಿದ ಪಟಣಕ್ಕೆ ಒಂಬತ್ತು ಬಾಗಿಲು
ಸಂಭ್ರಮದ ಅರಸರು ಐದು ಮಂದಿ
ಡಂಭಕತನದಿಂದ ತಿರುಗುವ ಕಾಯದಿ
ನಂಬಿ ನೆಚ್ಚಿ ನೀವು ಕೆಡಬೇಡಿರೊ || ೧ ||
ನೆಲೆಯಲ್ಲದೀಕಾಯ ಎಲುಬಿನ ಪಂಜರ
ಹೊಲಿದು ಸುತ್ತಿದ ಚರ್ಮದ ಹೊದಿಕೆ
ಮಲಮೂತ್ರಂಗಳು ಕೀವುಕ್ರಿಮಿಗಳಿಂದ
ಭರಿತ ದೇಹವ ನೆಚ್ಚಿ ಕೆಡಬೇಡಿರೊ || ೨ ||
ಹರಬ್ರಹ್ಮ ಸುರರಿಂದ ವಂದಿತನಾಗಿರ್ಪ
ಹರಿಸರ್ವೋತ್ತಮನೊಬ್ಬ ಕಾಣಿರೊ
ಪುರಂದರವಿಠಲನ ಭಜನೆಯ ಮಾಡಿರೊ
ದುರಿತ ಪರ್ವತವೆಲ್ಲ ಪರಿಹಾರವೊ || ೩ ||
ಕ್ಲಿಷ್ಟ ಪದಗಳಾರ್ಥ:
ತುಂಬಿದ ಪಟಣಕ್ಕೆ ಒಂಬತ್ತು ಬಾಗಿಲು : ಮಾನವ ದೇಹದ ನವ ರಂಧ್ರಗಳು
ಸಂಭ್ರಮದ ಅರಸರು ಐದು ಮಂದಿ : ಪಂಚೇಂದ್ರೀಯಗಳು
ಡಂಭಕತನ : ಬೂಟಾಟಿಕೆ
ಕಾಯ : ದೇಹ**ಕಲಿಯುಗದಲ್ಲಿ ಹರಿನಾಮ ಸ್ಮರಣೆಯೊಂದೇ ಪರಮಮುಖ್ಯ ಸಾಧನ**
*** ಜೈ ಶ್ರೀರಾಮ್ ***
Saahitya : Sri Purandaradaasaru
Singer : Sri Vidhyabhushana
rAma rAma rAma enniro || pa ||
intaha swAmiya nAmava maryadiro || a.pa ||
tuMbida paTaNakke oMbattu bAgilu
intaha swAmiya nAmava maryadiro || a.pa ||
tuMbida paTaNakke oMbattu bAgilu
saMbhramada arasaru aidu mandi
DaMbhakatanadinda tiruguva kAyadi
naMbi nechchi nIvu keDabeDiro || 1 ||
neleyalladIkAya elubina panjara
holidu suttida charmada hodike
malamUtrangaLu kIvukrimigaLinda
bharita dehava nechchi keDabeDiro || 2 ||
harabrahma surarinda vanditanAgirpa
harisarvottamanobba kANiro
purandaraviThalana bhajaneya mADiro
durita parvatavella parihAravo || 3 ||
DaMbhakatanadinda tiruguva kAyadi
naMbi nechchi nIvu keDabeDiro || 1 ||
neleyalladIkAya elubina panjara
holidu suttida charmada hodike
malamUtrangaLu kIvukrimigaLinda
bharita dehava nechchi keDabeDiro || 2 ||
harabrahma surarinda vanditanAgirpa
harisarvottamanobba kANiro
purandaraviThalana bhajaneya mADiro
durita parvatavella parihAravo || 3 ||
*** Jai Sri Ram ***
No comments:
Post a Comment