Tuesday, July 5, 2016

ನಾ ನಿನಗೆ, ನೀನೆನಗೆ ಜೇನಾಗುವಾ…Naa Ninage, Nee Nanage Jenaaguva

ಸಾಹಿತ್ಯ      : ರಾಷ್ಟ್ರಕವಿ ಕುವೆಂಪು  
ಗಾಯಕರು  : ಚಿಂತನ್ ವಿಕಾಸ್ 
ಸಂಗೀತ     : ಅಜನೀಶ್ ಲೋಕನಾಥ್ 














ಧ್ವನಿಸುರಳಿಯ ಕೊಂಡಿ / Hear the song 

ನಾ ನಿನಗೆ, ನೀನೆನಗೆ  ಜೇನಾಗುವಾ…
ನಾ ನಿನಗೆ, ನೀನೆನಗೆ  ಜೇನಾಗುವಾ…
ರಸದೇವ ಗಂಗೆಯಲಿ ಮೀನಾಗುವ, ಹೂವಾಗುವ,  ಹಣ್ಣಾಗುವ,  ಪ್ರತಿರೂಪಿ ಭಗವತಿಗೆ ಮುಡಿಪಾಗುವ

ಶಿವನೆನ್ನ ಸುಖಕೆ ಸುಖಿ ಶಿವನಿನ್ನ ಸುಖಕೆ ಸುಖಿ
ಶಿವ ಶಿವೆಯರ ಸುಖವ ಸವಿವಖಿಲ ಲೋಕ ಸುಖಿ
ಬಾ ಬಾರ ಬಾರಾ ಸಖಿ

ವಿರಹದುರಿಯನು ಕುದಿಸಿ ಹಾಲು ಪುಣ್ಯವ ಹಾಸಿ
ಹೂವು ಸುಖವನೆ ಹೊದಿಸಿ ಮಿಲನ ಮಧುವನು ಸೂಸಿ
ಬಾ ಬಾರ ಬಾರಾ ಸಖಿ

ನಾ ನಿನಗೆ, ನೀನೆನಗೆ  ಜೇನಾಗುವಾ…
ನಾ ನಿನಗೆ, ನೀನೆನಗೆ  ಜೇನಾಗುವಾ…
ರಸದೇವ ಗಂಗೆಯಲಿ ಮೀನಾಗುವ, ಹೂವಾಗುವ,  ಹಣ್ಣಾಗುವ,  ಅತಿರೂಪಿ ಭಗವತಿಗೆ ಮುಡಿಪಾಗುವ
ಬಾ ಬಾರ ಬಾರಾ ಸಖಿ
ಬಾ ಬಾರ ಬಾರಾ ಸಖಿ

ಬಾ ಬಾರ ಬಾರಾ ಸಖಿ

Sunday, November 1, 2015

ಕರ್ನಾಟಕದ ಇತಿಹಾಸದಲಿ / Karnatakada Itihaasadali

ಸಾಹಿತ್ಯ    : ಆರ್.ಎನ್.ಜಯಗೋಪಾಲ್
ಗಾಯಕರು : ಎಸ್.ಪಿ.ಬಾಲಸುಬ್ರಮಣ್ಯಂ
ಚಲನಚಿತ್ರ : ಕೃಷ್ಣ ರುಕ್ಮಿಣಿ











ಧ್ವನಿಸುರಳಿಯ ಕೊಂಡಿ / Hear the song 

ಕರ್ನಾಟಕದ ಇತಿಹಾಸದಲಿ
ಬಂಗಾರದ ಯುಗದ ಕಥೆಯನ್ನು
ಹಾಡುವೆ ಕೇಳಿ ನಾ ಹಾಡುವೆ ಕೇಳಿ
ಹಾಡುವೆ ಕೇಳಿ ನಾ ಹಾಡುವೆ ಕೇಳಿ
ಕರ್ನಾಟಕದ ಇತಿಹಾಸದಲಿ

ಜ್ಞಾನದ ಜ್ಯೋತಿಯು ವಿದ್ಯಾರಣ್ಯರು ಅನುಗ್ರಹಗೈದ ಭೂಮಿಯಿದು
ಜ್ಞಾನದ ಜ್ಯೋತಿಯು ವಿದ್ಯಾರಣ್ಯರು ಅನುಗ್ರಹಗೈದ ಭೂಮಿಯಿದು
ಹಕ್ಕ ಬುಕ್ಕರು ಆಳಿದರಿಲ್ಲಿ
ಹರುಷದ ಮಳೆಯನ್ನು ಎಲ್ಲೂ ಚೆಲ್ಲಿ
ವಿಜಯದ ಕಹಳೆಯ ಊದಿದರು
ವಿಜಯನಗರ ಸ್ಥಾಪನೆ ಮಾಡಿದರು

ಕರ್ನಾಟಕದ ಇತಿಹಾಸದಲಿ
ಬಂಗಾರದ ಯುಗದ ಕಥೆಯನ್ನು
ಹಾಡುವೆ ಕೇಳಿ ನಾ ಹಾಡುವೆ ಕೇಳಿ
ಹಾಡುವೆ ಕೇಳಿ ನಾ ಹಾಡುವೆ ಕೇಳಿ

ಗಂಡರ ಗಂಡ ಧೀರ ಪ್ರಚಂಡ ಕೃಷ್ಣದೇವರಾಯ ಆಳಿದ ವೈಭವದೆ
ಗಂಡರ ಗಂಡ ಧೀರ ಪ್ರಚಂಡ ಕೃಷ್ಣದೇವರಾಯ ಆಳಿದ ವೈಭವದೆ
ಕಲಿಗಳ ನಾಡು ಕವಿಗಳ ಬೀಡು
ಕಲಿಗಳ ನಾಡು ಕವಿಗಳ ಬೀಡು
ಎನಿಸಿತು ಹಂಪೆಯು ಆ ದಿನದೆ
ಕನ್ನಡ ಬಾವುಟ ಹಾರಿಸಿದ
ಮಧುರೆವರೆಗು ರಾಜ್ಯವ ಹರಡಿಸಿದ
ಕರ್ನಾಟಕದ ಇತಿಹಾಸದಲಿ

ಸಂಗೀತ ನಾಟ್ಯಗಳ ಸಂಗಮವಿಲ್ಲೇ ಶಿಲ್ಪಾಕಲೆಗಳ ತಾಣವಿದೆ
ಸಂಗೀತ ನಾಟ್ಯಗಳ ಸಂಗಮವಿಲ್ಲೇ ಶಿಲ್ಪಾಕಲೆಗಳ ತಾಣವಿದೆ
ಭುವನೇಶ್ವರಿಯ ತವರೂರಿಲ್ಲೇ, ಯತಿಗಳ ದಾಸರ ನೆಲೆನಾಡಿಲ್ಲೇ
ಪಾವನ ಮಣ್ಣಿದು ಹಂಪೆಯದು, ಯುಗಯುಗ ಅಳಿಯದ ಕೀರ್ತಿಯಿದು
ಕನ್ನಡ ಭೂಮಿ, ಕನ್ನಡ ನುಡಿಯು, ಕನ್ನಡ ಪ್ರೀತಿ ಎಂದೆಂದೂ ಬಾಳಲಿ
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಗೆಲ್ಗೆ

Saturday, July 25, 2015

ಹೊಸ ಬಾಳಿಗೆ ನೀ ಜೊತೆಯಾದೆ / Hosabaalige Baalige nee Joteyaade

ಸಾಹಿತ್ಯ:  ಚಿ.ಉದಯಶಂಕರ
ಗಾಯಕರು: ಎಸ್.ಪಿ.ಬಾಲಸುಬ್ರಮಣ್ಯಂ, ಎಸ್.ಜಾನಕಿ
ಚಲನಚಿತ್ರ: ನಾ ನಿನ್ನ ಬಿಡಲಾರೆ










ಧ್ವನಿಸುರಳಿಯ ಕೊಂಡಿ / Hear the song 


ಹೊಸ ಬಾಳಿಗೆ ನೀ ಜೊತೆಯಾದೆ, ಹೊಸ ಆನಂದ ನೀನಿಂದು ತಂದೆ ।।೨।।
ಹೊಸ ರಾಗ,  ಹೊಸ ತಾಳ, ಹೊಸ ಭಾವಗೀತೆಯೆ ನೀನಾದೆ
ಹೊಸ ಬಾಳಿಗೆ ನೀ ಜೊತೆಯಾದೆ, ಹೊಸ ಆನಂದ ನೀನಿಂದು ತಂದೆ
ಹೊಸ ಆನಂದ ನೀನಿಂದು ತಂದೆ

ಹೊಸ ರಾತ್ರಿ ಮೂಡಿಬಂದು, ಹೊಸ ಆಸೆ ನೂರು ತಂದು
ಹೊಸ ಸ್ನೇಹದಿಂದ ಬೆಸೆದು, ಹೊಸ ರಾಗ ಮೀಟಿ ಇಂದು
ಹಿತ ನೀಡಿದೆ, ಸುಖ ತೋರಿದೆ, ಮನಸಲ್ಲಿ ಉಲ್ಲಾಸ ತಂದು
ಹೊಸ ಬಾಳಿಗೆ ನೀ ಜೊತೆಯಾದೆ, ಹೊಸ ಆನಂದ ನೀನಿಂದು ತಂದೆ
ಹೊಸ ಆನಂದ ನೀನಿಂದು ತಂದೆ

ಆ ಆ ಆ

ನಸುನಾಚಿದಾಗ ಮೊಗವು, ಕೆಂಪಾದ ಹೊನ್ನ ಹೂವು
ಆ ಆ ಆ
ನಡೆವಾಗ ನಿನ್ನ ನಡುವು, ಲತೆಯಂತೆ ಆಡೊ ಚೆಲುವು
ಕಣ್ತುಂಬಿತು, ಮನ ತುಂಬಿತು, ಅನುರಾಗ ನನ್ನಲ್ಲಿ ತಂದು
ಹೊಸ ಬಾಳಿಗೆ ನೀ ಜೊತೆಯಾದೆ, ಹೊಸ ಆನಂದ ನೀನಿಂದು ತಂದೆ
ಹೊಸ ಆನಂದ ನೀನಿಂದು ತಂದೆ

ಹೂಮಂಚ ಹೀಗೆ ಇರಲಿ, ಈ ಮಲ್ಲಿಗೆ ಬಾಡದಿರಲಿ,
ಈ ರಾತ್ರಿ ಜಾರದಿರಲಿ, ಹಗಲೆಂದು ಮೂಡದಿರಲಿ,
ಬೆಳದಿಂಗಳ ಈ ಬೊಂಬೆ, ಬಳಿಯಲ್ಲಿ ಎಂದೆಂದು ಇರಲಿ

ಹೊಸ ಬಾಳಿಗೆ ನೀ ಜೊತೆಯಾದೆ, ಹೊಸ ಆನಂದ ನೀನಿಂದು ತಂದೆ
ಹೊಸ ರಾಗ,
ಹೊಸ ತಾಳ,
ಹೊಸ ಭಾವಗೀತೆಯೆ ನೀನಾದೆ
ಹೊಸ ಬಾಳಿಗೆ ನೀ ಜೊತೆಯಾದೆ, ಹೊಸ ಆನಂದ ನೀನಿಂದು ತಂದೆ
ಹೊಸ ಆನಂದ ನೀನಿಂದು ತಂದೆ

Sunday, May 10, 2015

ಅಮ್ಮ ಅಮ್ಮ ಅಮ್ಮ ನನ್ನಮ್ಮ

ಅಮ್ಮ ಅಮ್ಮ ಅಮ್ಮ ನನ್ನಮ್ಮ ।।೨।।
ನಾ ಅಮ್ಮ ಎಂದಾಗ ಏನೋ ಸಂತೋಷವು ।।೨।।
ನಿನ್ನ ಕಂಡಾಗ ಮನಕೇನೋ ಆನಂದವು
ಅಮ್ಮ ಅಮ್ಮ ಅಮ್ಮ ನನ್ನಮ್ಮ

ಹಾಲಿನ ಸುಧೆಯು ನಿನ್ನೆಯ ಮನಸು, ಜೇನಿನ ಸವಿಯು ನಿನ್ನ ಮಾತು ।।೨।।
ಪುಣ್ಯದ ಫಲವೋ ದೇವರ ವರವೋ ಸೇವೆಯ ಭಾಗ್ಯ ನನ್ನದಾಯ್ತು
ಅಮ್ಮ ಅಮ್ಮ ಅಮ್ಮ ನನ್ನಮ್ಮ

ತಾಯಿಯ ಮಮತೆ ಕಂಡ ದೇವನು ಅಡಿಗಿದ ಎಲ್ಲೋ ಮರೆಯಾಗಿ ।।೨।।
ತಾಯಿಯ ಶಾಂತಿಗೆ ಧರಣಿಯು ನಾಚಿ ಮೌನದಿ ನಿಂತಳು ತಲೆಬಾಗಿ
ಅಮ್ಮ ಅಮ್ಮ ಅಮ್ಮ ನನ್ನಮ್ಮ ।।೨।।
ನಾ ಅಮ್ಮ ಎಂದಾಗ ಏನೋ ಸಂತೋಷವು ।।೨।।
ನಿನ್ನ ಕಂಡಾಗ ಮನಕೇನೋ ಆನಂದವು
ಅಮ್ಮ ಅಮ್ಮ ಅಮ್ಮ ನನ್ನಮ್ಮ
ಅಮ್ಮ ಅಮ್ಮ ಅಮ್ಮ ನನ್ನಮ್ಮ
ಅಮ್ಮ ನನ್ನಮ್ಮ
ಮ್ ಮ್ ಮ್ ಮ್

Friday, April 17, 2015

ಇದುವರೆಗೆ ನೀನೆನ್ನ ಕೈ ಹಿಡಿದು ನಡೆಸಿರುವೆ / Iduvarege Neenenna Kai hididu Nadesiruve

ಸಾಹಿತ್ಯ    : ರಾಷ್ಟ್ರಕವಿ ಕುವೆಂಪು   
ಗಾಯಕರು: ಶ್ರೀ ಶಶಿಧರ ಕೋಟೆ 






ಇದುವರೆಗೆ ನೀನೆನ್ನ ಕೈ ಹಿಡಿದು ನಡೆಸಿರುವೆ ಇನ್ನಾದರು ನನ್ನ ಕೈ ಬಿಡದಿರು
ಇನ್ನಾದರು ನನ್ನ ಕೈ ಬಿಡದಿರು
ಇದುವರೆಗೆ ನೀನೆನ್ನ ಕೈ ಹಿಡಿದು ನಡೆಸಿರುವೆ ಇನ್ನಾದರು ನನ್ನ ಕೈ ಬಿಡದಿರು
ಇನ್ನಾದರು ನನ್ನ ಕೈ ಬಿಡದಿರು
ಅಂದಿನಂತೆಯೆ ಇಂದು ನಾನೊಂದು ಶಿಶು ಎಂದು ಎಂದಿಗೂ ಕೈ ಬಿಡದೆ ಸಲಹೈ ಗುರು ।।೨।।
ಇದುವರೆಗೆ ನೀನೆನ್ನ ಕೈ ಹಿಡಿದು ನಡೆಸಿರುವೆ ಇನ್ನಾದರು ನನ್ನ ಕೈ ಬಿಡದಿರು
ಇನ್ನಾದರು ನನ್ನ ಕೈ ಬಿಡದಿರು

ವೈರಾಗ್ಯ ಒಂದು ಕಡೆ, ತನ್ನ ಮಹಿಮೆಯ ತೋರಿ ಕೈಚಾಚಿ ಕರೆಯುತ್ತಿದೆ ।।೨।।
ಸೌಂದರ್ಯ ಒಂದು ಕಡೆ, ತನ್ನ ಮೋಹವ ಬೀರಿ ಮೈ ಚಾಚಿ ಸೆಳೆಯುತ್ತಿದೆ ।।೨।।
ಇದುವರೆಗೆ ನೀನೆನ್ನ ಕೈ ಹಿಡಿದು ನಡೆಸಿರುವೆ ಇನ್ನಾದರು ನನ್ನ ಕೈ ಬಿಡದಿರು
ಇನ್ನಾದರು ನನ್ನ ಕೈ ಬಿಡದಿರು

ಒಂದು ಕಡೆ ಸ್ವಾತಂತ್ರ್ಯ ಒಂದು ಕಡೆ ಮಾಧುರ್ಯ ನಡುವಿಹೆನು ಬಟ್ಟೆಗೆಟ್ಟು
ಮುಕ್ತಿಯನ್ನೋಪ್ಪಲೋ ? ಮಾಯೆಯನ್ನಪ್ಪಲೋ ? ತಿಳಿದ ನೀನನ್ನನಟ್ಟು ।।೨।।
ಇದುವರೆಗೆ ನೀನೆನ್ನ ಕೈ ಹಿಡಿದು ನಡೆಸಿರುವೆ ಇನ್ನಾದರು ನನ್ನ ಕೈ ಬಿಡದಿರು
ಅಂದಿನಂತೆಯೆ ಇಂದು ನಾನೊಂದು ಶಿಶು ಎಂದು ಎಂದಿಗೂ ಕೈ ಬಿಡದೆ ಸಲಹೈ ಗುರು
ಎಂದಿಗೂ ಕೈ ಬಿಡದೆ ಸಲಹೈ ಗುರು ।।೨।।

ಧ್ವನಿಸುರಳಿಯ ಕೊಂಡಿ / Hear the song 

ಕ್ಲಿಷ್ಟ ಪದಗಳಾರ್ಥ:
-----------------
ಬಟ್ಟೆಗೆಟ್ಟು : ದಾರಿತಪ್ಪಿ

Wednesday, April 15, 2015

ದಾರಿ ತೋರೆನಗೆ ಗುರುವೇ / Daari torenage guruve

ಸಾಹಿತ್ಯ: ರಾಷ್ಟ್ರಕವಿ ಕುವೆಂಪು  
ಗಾಯಕರು: ಶ್ರೀ ಶಿವಮೊಗ್ಗ ಸುಬ್ಬಣ್ಣ



















ಧ್ವನಿಸುರಳಿಯ ಕೊಂಡಿ / Hear the song 

ದಾರಿ ತೋರೆನಗೆ ಗುರುವೇ ದಾರಿ ತೋರೆನಗೆ ।।೨।।
ದಾರಿ ತೋರೆನಗೆ ಗುರುವೇ

ಕವಲೊಡೆದ ಹಾದಿಗಳು, ಕವಿದಿಹುದು ಕತ್ತೆಲೆಯು, ಕಿವಿಗೊಟ್ಟು ಕೇಳಿದರೆ, ಕರೆವ ದನಿಯಿಲ್ಲ ।।೨।।
ಕಣ್ಣಿಟ್ಟು ನೋಡಿದರೆ ಹೊಳೆವ ಸೊಡರಿಲ್ಲ ।।೨।।
ದಾರಿ ತೋರೆನಗೆ ಗುರುವೇ ದಾರಿ ತೋರೆನಗೆ
ದಾರಿ ತೋರೆನಗೆ ಗುರುವೇ

ತಿಮಿರವನು ಕುಡಿ ಕುಡಿದು ಮುಳುಗಿಹವು ಮೂರ್ಚೆಯಲಿ, ಬನಬಯಲು ಭುವಿಬಾನು ಹೊಳೆಕೆರೆಗಳೆಲ್ಲ ।।೨।।
ಭೀಕರದ ಮೌನದಲಿ ಬಗೆಹರಿವುದಿಲ್ಲ ।।೨।।
ದಾರಿ ತೋರೆನಗೆ ಗುರುವೇ ದಾರಿ ತೋರೆನಗೆ
ದಾರಿ ತೋರೆನಗೆ ಗುರುವೇ

ಹೆಪ್ಪುಗಟ್ಟಿಹುದಿರುಳು ಮರಳಿನಲಿ ಕೆಸರಿನಲಿ, ಮುಂದೆ ತೆರಳಿದ ಜನರ ಹೆಜ್ಜೆಗಳ ಕಾಣೆ ।।೨।।
ಕತ್ತಲಲಿ ಕೈಹಿಡಿದು ಕಾಯುವರ ಕಾಣೆ ।।೨।।
ದಾರಿ ತೋರೆನಗೆ ಗುರುವೇ ದಾರಿ ತೋರೆನಗೆ
ದಾರಿ ತೋರೆನಗೆ ಗುರುವೇ


ಕ್ಲಿಷ್ಟ ಪದಗಳಾರ್ಥ:
-----------------

ಸೊಡರು :  ದೀಪ
ತಿಮಿರ   :  ಕತ್ತಲು, ಅಂಧಕಾರ

Saturday, February 7, 2015

ಸೌಂದರ್ಯವೆನ್ನ ಹರಿ ಸೌಂದರ್ಯವೆನ್ನ ಹರ / Soundaryavenna hari Soundaryavenna hara

ಸಾಹಿತ್ಯ    : ರಾಷ್ಟ್ರಕವಿ ಕುವೆಂಪು   
ಗಾಯಕರು: ಶ್ರೀ ಸಿ.ಅಶ್ವಥ್

















ಧ್ವನಿಸುರಳಿಯ ಕೊಂಡಿ / Hear the song 

ಸೌಂದರ್ಯವೆನ್ನ ಹರಿ ಸೌಂದರ್ಯವೆನ್ನ ಹರ ಸೌಂದರ್ಯವೆನ್ನ ಅವ್ಯಕ್ತ ಬ್ರಹ್ಮ 
ಸೌಂದರ್ಯವೆನ್ನ ಅವ್ಯಕ್ತ ಬ್ರಹ್ಮ ।।೨।।
ಸೌಂದರ್ಯವೆ ಪುಣ್ಯ ಸೌಂದರ್ಯವೆ ಸ್ವರ್ಗ ।।೨।।
ಸೌಂದರ್ಯವೆ ನನ್ನ ಚರಮ ಮೋಕ್ಷ ।।೨।।

ಸೌಂದರ್ಯವಿಲ್ಲದಿಹ ಲೋಕರೌರವ ನರಕ 
ಸೌಂದರ್ಯವಿರೆ ನರಕವದುವೇ ನಾಕ 
ಸೌಂದರ್ಯಕಿಂತಲದಿ ಕಟರ ದೇವರು ಇಲ್ಲ 
ಸೌಂದರ್ಯವಿಲ್ಲದಿರೆ ದೇವರಿಲ್ಲ ।।೨।।

ನನ್ನಾತ್ಮ ಸೌಂದರ್ಯ ನಿನ್ನಾತ್ಮ ಸೌಂದರ್ಯ
ನಾನಿಲ್ಲ ನೀನಿಲ್ಲ ಸೌಂದರ್ಯಮಿಹುದೆಲ್ಲ 
ಸೌಂದರ್ಯವಾನಂದ ಸೌಂದರ್ಯವೈಶ್ವರ್ಯ ।।೨।।
ವಿಶ್ವಕ್ಕೆ ತಾಯೂರು ಬಲ್ಲೆಯೇನ್ಸೌಂದರ್ಯ ।।೨।।