Saturday, July 14, 2018

ಚಾಣೂರನು / Chaanooranu

ಸಾಹಿತ್ಯ   : ಶ್ರೀ ಸಾಯಿ ಸರ್ವೇಶ್  
ಗಾಯಕರು: ಶ್ರೀ ರವಿ ಬಸರೂರ್

ಚಾಣೂರನು, ಅತಿ ಕ್ರೂರನೂ,  ಘನಘೋರನು,  ನಾ ಕಂಡ ಅಸುರ ನೀನೆ ನಾ
ನಿಸ್ಸೀಮನು, ಧೀಮಂತನು, ಏಕೈಕನು, ಜನಧನಿಯ ಉಸಿರು ನೀನೆ ನಾ
ಓ ಸಿಡಿಲಾಗಿ ಕಂಡ ನೀನು, ಜಗ ಬೆಳಗೊ ದೀಪ ಏನು, ಏನೆಂದು ನಿನ್ನ ತಿಳಿಯಲಿ
ಓ ಧಗಧಗಸೊ ಜ್ವಾಲೆ ನೀನು, ತಂಪಾದ ಸೋನೆ ಏನು, ಏನೆಂದು ನಿನ್ನ ಅಳೆಯಲಿ
ರಾಕ್ಷಸನೂ ನೀನೆ ನಾ, ರಕ್ಷಕನು ನೀನೆ ನಾ
ರಾಕ್ಷಸನೂ ನೀನೆ ನಾ, ರಕ್ಷಕನು ನೀನೆ ನಾ
ರಾಕ್ಷಸನೂ ನೀನೆ ನಾ, ರಕ್ಷಕನು ನೀನೆ ನಾ

ಹರಿದಾದ ಬದುಕನು ಹುಡುಕಿ, ನವಿರಾದ ನೂಲನು ಬಳಸಿ
ಹಸನಾಗಿ ಹೆಣೆದು ಕೊಡುವ ನೇಕಾರನೇ
ಮಾಳಿಗೆಯು ಸೋರುವ ಮುನ್ನ, ಛಾವಣಿಯ ಹಾಸುವ ನೀನು
ಶತಕೋಟಿ ಮನಗಳು ಹರಸೋ ನೇತಾರನೇ

ಧರಣಿ ತೂಕದ ಭುಜದ ಬಲವನು
ಜನರ ಒಳಿತಿಗೆ ತೋರಿ ಮೆರೆವನು

ಹಿತವನು ಬಯಸುವ ಕಟು ರಾಕ್ಷಸನೂ ನೀನೆ ನಾ, ರಕ್ಷಕನು ನೀನೆ ನಾ
ರಾಕ್ಷಸನೂ ನೀನೆ ನಾ, ರಕ್ಷಕನು ನೀನೆ ನಾ

ಕಡಲಿಂದ ಆವಿ ಆಗಿ, ಕಾರ್ಮೋಡದಂತೆ ಸಾಗಿ
ಬರುಡಾದ ಭೂಮಿಗೆ ಸುರಿವ ಜಲಧಾರೆಯೋ
ಕಟುಕರ ನೆತ್ತರು ಹರಿಸಿ
ಬಡವರ ಕಂಬನಿ ಒರೆಸಿ
ಕುಸಿದಂತಹ ಬಾಳಿನ ನೊಗಕೆ ಹೆಗಲಾದೆಯೋ

ದುರಳ ಜನರಿಗೆ ಸಜೆಯ ವಿಧಿಸುವ
ಹಸಿದ ಜನರಿಗೆ ಸುಧೆಯ ಹರಿಸುವ
ಹಿತವನು ಬಯಸುವ ಕಟು ರಾಕ್ಷಸನೂ ನೀನೆ ನಾ, ರಕ್ಷಕನು ನೀನೆ ನಾ

ರಾಕ್ಷಸನೂ ನೀನೆ ನಾ, ರಕ್ಷಕನು ನೀನೆ ನಾ

ನೀನೆ ರಾಮ, ನೀನೆ ಶ್ಯಾಮ / Neene Raama Neene Shyaama

ಸಾಹಿತ್ಯ   : ವಿ. ನಾಗೇಂದ್ರ ಪ್ರಸಾದ್ 
ಗಾಯಕರು: ಶ್ರೀ ಶಂಕರ್ ಮಹಾದೇವನ್ 
ಸಂಗೀತ : ಅರ್ಜುನ್ ಜನ್ಯ  
ನೀನೆ ರಾಮ, ನೀನೆ ಶ್ಯಾಮ, ನೀನೆ ಅಲ್ಲ, ನೀನೆ ಎಸು
ನೀನೆ  ಕರ್ಮ, ನೀನೆ ಧರ್ಮ, ನೀನೆ ಮರ್ಮ, ನೀನೆ ಪ್ರೇಮ

ನಿಮ್ಮ ಜೀವದ ಮಾಲೀಕ ನಾನು, ನಿಮ್ಮ ಪಾಲಿನ ಸೇವಕ ನಾನು
ನನಗೇನು ಹೆಸರಿಲ್ಲ, ಹೆಸರಲ್ಲಿ ನಾನಿಲ್ಲ
ಕಣಕಣ ಕಣದೊಳಗೆ ಕುಳಿತಿರುವೆ
ಮುಕುಂದ, ಮುರಾರೇ, ಮುಕುಂದ, ಮುರಾರೇ
ಮುಕುಂದ, ಮುರಾರೇ, ಮುಕುಂದ, ಮುರಾರೇ

ನೀನೆ ರಾಮ, ನೀನೆ ಶ್ಯಾಮ, ನೀನೆ ಅಲ್ಲ, ನೀನೆ ಎಸು

ಗುಡಿಯ ಕಟ್ಟಿದ, ಬಡವನೆದೆಯ ಗುಡಿಯಲಿರುವೆ ನಾನು
ಬೆಳೆಯ ನಡುವೆ ರೈತ ಬಸಿದ ಬೆವರಲಿರುವೆ ನಾನು
ಕೆಲಸ ನಿನದೆ, ಫಲವು ನಿನದೆ, ಛಲದ ಒಡೆಯ ನೀನು
ಇದನು ಮರೆತು, ನನಗೆ ನಮಿಸಿ, ಶ್ರಮವ ಪಡುವೆ ನೀನು
ಬಿಡು ಮತಗಳ ಜಗಳ, ಇದೆ ಕೆಲಸವು ಬಹಳ
ನನ್ನ ಒಲಿಸಲು ಮರುಳ, ಇರೊ ಮಾರ್ಗವು ಸರಳ

ನನ್ನ ಸೇರಲು ದಾರಿಯು ನೂರು
ಅದಕೇತಕೆ ಈ ತಕರಾರು
ಅಣುಅಣು ಅಣುವೊಳಗೆ ಕುಳಿತಿರುವೆ
ಮುಕುಂದ, ಮುರಾರೇ, ಮುಕುಂದ, ಮುರಾರೇ
ಮುಕುಂದ, ಮುರಾರೇ, ಮುಕುಂದ, ಮುರಾರೇ

ಮೌಲಾ, ಮೇರೆ ಮೌಲಾ, ಮೇರೆ ಮೌಲಾ, ಮೌಲಾ
ಮೌಲಾ, ಮೇರೆ ಮೌಲಾ, ಮೇರೆ ಮೌಲಾ, ಮೌಲಾ ಅಲ್ಲ

ಯುಗದ ಯುಗದ, ಮೃಗದ ಖಗದ ಉಸಿರಲ್ಲಿರುವೆ ನಾನು
ಕಡಲ ಅಲೆಯ, ಮಳೆಯ ಹನಿಯ, ಪರಮಾಣುವೇ ನಾನು
ಹೊಸದು ಹೊಸದು, ಹೆಸರ ಹೊಸೆದು ಕರೆವೆ ನನ್ನ ನೀನು
ನನಗು ನಿನಗು, ನಡುವೆ ನೀನೆ ಗೋಡೆ ಕಟ್ಟಿದವನು ನೀನು
ನಾ ಇರುವೆನು ಒಳಗೆ
ನೀ ಹುಡುಕಿದೆ ಹೊರಗೆ
ಬಿಚ್ಚು ಮದದ ಉಡುಗೆ
ನಡೆ ಬೆಳಕಿನ ಕಡೆಗೆ
ನಿಮ್ಮ ಜೀವದ ಮಾಲೀಕ ನಾನು, ನಿಮ್ಮ ಪಾಲಿನ ಸೇವಕ ನಾನು
ಕಣಕಣ ಕಣದೊಳಗೆ ನಾನಿರುವೆ
ಮುಕುಂದ, ಮುರಾರೇ, ಮುಕುಂದ, ಮುರಾರೇ
ಮುಕುಂದ, ಮುರಾರೇ, ಮುಕುಂದ, ಮುರಾರೇ
ನೀನೆ ರಾಮ, ನೀನೆ ಶ್ಯಾಮ, ನೀನೆ ಅಲ್ಲ, ನೀನೆ ಎಲ್ಲ 

Wednesday, January 10, 2018

ಪಿಳ್ಳಂಗೋವಿಯ ಚೆಲ್ವ ಕೃಷ್ಣನ / Pillangoviya Chelva Krishnana

ಸಾಹಿತ್ಯ    : ಪುರಂದರದಾಸರು 
ಗಾಯಕರು: ಶ್ರೀ ವಿದ್ಯಾಭೂಷಣ 

ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ
ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ
ರಂಗನ ಎಲ್ಲಿ ನೋಡಿದಿರಿ
ಪಿಳ್ಳಂಗೋವಿಯ  ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ
ರಂಗನ ಎಲ್ಲಿ ನೋಡಿದಿರಿ
ಎಲ್ಲಿ ನೋಡಿದರಲ್ಲಿ ತಾನಿಲ್ಲದಿಲ್ಲವೆಂದು ಬಲ್ಲಜಾಣರೆ
ಎಲ್ಲಿ ನೋಡಿದರಲ್ಲಿ ತಾನಿಲ್ಲದಿಲ್ಲವೆಂದು ಬಲ್ಲಜಾಣರೆ
ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ
 
ನಂದಗೋಪನ  ಮಂದಿರಂಗಳ ಸಂದುಗೊಂದಿನಲಿ
ನಂದಗೋಪನ  ಮಂದಿರಂಗಳ ಸಂದುಗೊಂದಿನಲಿ
ಚೆಂದಚೆಂದದ ಗೋಪಬಾಲರ  ವೃಂದವೃಂದದಲಿ
ಚೆಂದಚೆಂದದ ಗೋಪಬಾಲರ  ವೃಂದವೃಂದದಲಿ
ಸುಂದರಾಂಗದ ಸುಂದರಿ..ಯರ  ಹಿಂದುಮುಂದಿನಲಿ
ಸುಂ..ದರಾಂಗದ ಸುಂದರಿ..ಯರ  ಹಿಂದುಮುಂದಿನಲಿ
ಅಂದದಾಕಳ-ಕಂದಕರುಗಳ ಮಂದೆಮಂದೆಯಲಿ ....

ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ
ರಂಗನ ಎಲ್ಲಿ ನೋಡಿದಿರಿ

ಈ ಚರಾಚರದೊಳಗೆ ಅಜಾಂಡದ ಆಚೆಈಚೆಯಲಿ
ಈ ಚರಾಚರದೊಳಗೆ ಅಜಾಂಡದ ಆಚೆಈಚೆಯಲಿ
ಕೇಚರೇಂದ್ರನ ಸುತನ ರಥದ ಅಚ್ಛ ಪೀಠದಲಿ
ಕೇಚರೇಂದ್ರನ ಸುತನ ರಥದ ಅಚ್ಛ ಪೀಠದಲಿ
ನಾಚದೆ ಮಾಧವ ಕೇಶವ ಎಂಬ ವಾಚಕಂಗಳಲಿ
ನಾಚದೆ ಮಾಧವ ಕೇಶವ ಎಂಬ ವಾಚಕಂಗಳಲಿ
ವೀಚುಕೊಂಡದ ಪುರಂದರವಿಠ್ಠಲನ ಲೋಚನಾಗ್ರದಲಿ
ಪಿಳ್ಳಂಗೋವಿಯ ಚೆಲ್ವ ಕೃಷ್ಣನ  ಎಲ್ಲಿ ನೋಡಿದಿರಿ
ರಂಗನ ಎಲ್ಲಿ ನೋಡಿದಿರಿ
ಎಲ್ಲಿ ನೋಡಿದರಲ್ಲಿ ತಾನಿಲ್ಲದಿಲ್ಲವೆಂದು ಬಲ್ಲ ಜಾಣರೆ
ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ
ಎಲ್ಲಿ ನೋಡಿದಿರಿ .... ಎಲ್ಲಿ ನೋಡಿದಿರಿ.... ಆಆ


 ಪದಗಳಾರ್ಥ:

 ವೀಚುಕೊಂಡದ = ಮರೆಯಾಗದೆ ಇರುವ
 ಕೇಚರ = ಬಾವುಟವನ್ನು ಹೊತ್ತ್ತ ಪಡೆ
 ಕೇಚರೇಂದ್ರನ ಸುತ = ಇಂದ್ರನ ಮಗ = ಅರ್ಜುನ
 ಅಜಾಂಡ = ಬ್ರಹ್ಮಾಂಡ, ವಿಶ್ವ
 ವಾಚಕ =ಕಾವ್ಯವನ್ನು ರಾಗವಾಗಿ ಓದುವವನು,ಗಮಕಿ
 ಲೋಚನಾಗ್ರ = ಕಣ್ಣ ಮುಂದೆ 

Friday, October 20, 2017

ನೀಡು ಶಿವ ನೀಡದಿರೂ ಶಿವ/ Needu Shiva Needadiroo Shiva

"ನೀಡು ಶಿವ ನೀಡದಿರೂ ಶಿವ" 

ಸಾಹಿತ್ಯ     : ಶ್ರೀ ಹಂಸಲೇಖ 
ಗಾಯಕರು : ಕೆ.ಎಸ್. ಚಿತ್ರ 
ಚಲನಚಿತ್ರ : ಗಾನಯೋಗಿ ಪಂಚಾಕ್ಷರ ಗವಾಯಿ 

ಧ್ವನಿಸುರಳಿಯ ಕೊಂಡಿ / Hear the song 

ನೀಡು ಶಿವ ನೀಡದಿರೂ ಶಿವ
ನೀಡು ಶಿವ ನೀಡದಿರೂ ಶಿವ
ಬಾಗುವುದು ನನ್ನ ಕಾಯ

ನೀಡು ಶಿವ ನೀಡದಿರೂ ಶಿವ
ಬಾಗುವುದು ನನ್ನ ಕಾಯ

ನೀಡು ಶಿವ ನೀಡದಿರೂ ಶಿವ
ಬಾಗುವುದು ನನ್ನ ಕಾಯ

ನಾನೇಕೆ ಅಂಜಲಿ ನೀ ನನ್ನ ಅಂಬಲಿ
ನೀಡು ಶಿವ ನೀಡದಿರೂ ಶಿವ
ಬಾಗುವುದು ನನ್ನ ಕಾಯ

ಶೃಂಗಾರ ಕೃತಕ  ಬಂಗಾರ ಕ್ಷಣಿಕ
ಬಾಳಲ್ಲಿ ಬಡಿವಾರ ಏಕೆ
ಶೃಂಗಾರ ಕೃತಕ  ಬಂಗಾರ ಕ್ಷಣಿಕ
ಬಾಳಲ್ಲಿ ಬಡಿವಾರ ಏಕೆ

ನೀನಿತ್ತ ಕಾಯ ......
ನೀನಿತ್ತ ಕಾಯ, ನಿನ್ನ ಕೈಯೆ ಮಾಯ
ಆಗೋದು ಹೋಗೋದು ನಾ ಕಾಣೆನೆ

ನೀಡು ಶಿವ ನೀಡದಿರೂ ಶಿವ
ಬಾಗುವುದು ನನ್ನ ಕಾಯ
ನಾನೇಕೆ ಅಂಜಲಿ ನೀ ನನ್ನ ಅಂಬಲಿ
ನೀಡು ಶಿವ ನೀಡದಿರೂ ಶಿವ
ಬಾಗುವುದು ನನ್ನ ಕಾಯ

ಮಾಳಿಗೆ ಕೊಟ್ಟರು, ಮರದಡಿಯೇ ಇಟ್ಟರು
ನಾನಂತು ನಿನ್ನನ್ನಲಾರೆ
ಮಾಳಿಗೆ ಕೊಟ್ಟರು, ಮರದಡಿಯೇ ಇಟ್ಟರು
ನಾನಂತು ನಿನ್ನನ್ನಲಾರೆ
ಸಾರಂಗ ಮನಕೆ.........
ಆ ಆ ಆ 
ಸಾರಂಗ ಮನಕೆ ನೂರಾರು ಬಯಕೆ
ಮುಂದಿಟ್ಟು ಒಲಿಸೋದು ನಾ ಕಾಣೆನೆ

ನೀಡು ಶಿವ ನೀಡದಿರೂ ಶಿವ
ಬಾಗುವುದು ನನ್ನ ಕಾಯ
ನಾನೇಕೆ ಅಂಜಲಿ ನೀ ನನ್ನ ಅಂಬಲಿ
ನೀಡು ಶಿವ ನೀಡದಿರೂ ಶಿವ
ಬಾಗುವುದು ನನ್ನ ಕಾಯ
ಬಾಗುವುದು ನನ್ನ ಕಾಯ
ಬಾಗುವುದು ನನ್ನ ಕಾಯ

ಓಂ ಬ್ರಹ್ಮಾನಂದ ಓಂಕಾರ/ Om Brahmaananda Omkara

"ಓಂ ಬ್ರಹ್ಮಾನಂದ ಓಂಕಾರ "

ಸಾಹಿತ್ಯ    : ಶ್ರೀ ಹಂಸಲೇಖ  
ಗಾಯಕರು: ಡಾ. ರಾಜ್ ಕುಮಾರ್
ಚಲನಚಿತ್ರ : ಓಂಧ್ವನಿಸುರಳಿಯ ಕೊಂಡಿ / Hear the song 

ಓಂ ಓಂ
ಓಂ ಬ್ರಹ್ಮಾನಂದ ಓಂಕಾರ
ಆತ್ಮಾನಂದ ಸಾಕಾರ
ಓಂ ವೇದಾಂತರ್ಯ ಝೇಂಕಾರ
ಆಧ್ಯಾತ್ಮಾಭಿ ಮಧುಸಾರ

ಹೇ ದಿನಕರ ಶುಭಕರ ಧರೆಗೆ ಬಾ
ಈ ಧರಣಿಯ ದೇಗುಲ ಬೆಳಗು ಬಾ
ನೀಗಿಸು ಬಾಳಿನ ಅಹಂ ಅಹಂ ಅಹಂ ಅಹಂ
ಮಾನಸ ಮಂದಿರ ತುಂಬು ಓಂಕಾರ ನಾದ ಓಂ

ಓಂ ಬ್ರಹ್ಮಾನಂದ ಓಂಕಾರ
ಆತ್ಮಾನಂದ ಸಾಕಾರ
ಓಂ ವೇದಾಂತರ್ಯ ಝೇಂಕಾರ
ಆಧ್ಯಾತ್ಮಾಭಿ ಮಧುಸಾರ

ನಗುವ ಮನಸೇ ಸಾಕು ನಮಗೆ ಹಗಲುಗನಸೆ ಬೇಡ
ಮನೆಯ ತುಂಬಾ ಪ್ರೀತಿ ಸಾಕು, ಬೆಳ್ಳಿ ಚಿನ್ನ ಬೇಡ
ತಂದೆತಾಯೆ ದೈವ, ಗುರುವೇ ನಮ್ಮ ಜೀವ
ಎಂಬ ದಿವ್ಯ ಮಂತ್ರ ನಮ್ಮ ಹೃದಯ ತುಂಬಿಸು.....
ಆ ಆ ಆ ಆಆ

ಹೇ ದಿನಕರ ಶುಭಕರ ಧರೆಗೆ ಬಾ
ಈ ಧರಣಿಯ ದೇಗುಲ ಬೆಳಗು ಬಾ

ಸತ್ಯ ಹೇಳೋ ಕನ್ನಡಿ ಅಂತೆ, ಅಂತರಂಗ ಮಾಡು
ದಯೆ ತೋರೊ ಧರಣಿ ಅಂತ, ಮನೋಧರ್ಮ ನೀಡು
ನೊಂದ ಎಲ್ಲ ಜೀವ, ನನ್ನದೆಂಬ ಭಾವ
ಬಾಳಿನಲ್ಲಿ ತುಂಬೋ ವಿದ್ಯವಿನಯ ಕರುಣಿಸೋ...
ಆ ಆ ಆ ಆಆ

ಹೇ ದಿನಕರ ಶುಭಕರ ಧರೆಗೆ ಬಾ
ಈ ಧರಣಿಯ ದೇಗುಲ ಬೆಳಗು ಬಾ
ನೀಗಿಸು ಬಾಳಿನ ಅಹಂ ಅಹಂ ಅಹಂ ಅಹಂ
ಮಾನಸ ಮಂದಿರ ತುಂಬು ಓಂಕಾರ ನಾದ ಓಂ

ಓಂ ಬ್ರಹ್ಮಾನಂದ ಓಂಕಾರ
{ಆ ಆ ಆ ಆಆ }
ಆತ್ಮಾನಂದ ಸಾಕಾರ
ಓಂ ವೇದಾಂತರ್ಯ ಝೇಂಕಾರ {ಆ ಆ ಆ ಆಆ }
ಆಧ್ಯಾತ್ಮಾಭಿ ಮಧುಸಾರ  {ಆ ಆ ಆ ಆಆ }

Friday, September 22, 2017

ಸೋರುತಿಹುದು ಮನೆಯ ಮಾಳಿಗಿ / Sorutihudu Maneya Maaligi

"ಸೋರುತಿಹುದು ಮನೆಯ ಮಾಳಿಗಿ"

ಸಾಹಿತ್ಯ    : ಸಂತ ಶಿಶುನಾಳ ಶರೀಫ  
ಗಾಯಕರು: ಶ್ರೀ ಸಿ.ಅಶ್ವಥ್
ಸೋರುತಿಹುದು ಮನೆಯ ಮಾಳಿಗಿ  
ಸೋರುತಿಹುದು ಮನೆಯ ಮಾಳಿಗಿ 
ಅಜ್ಞಾನದಿಂದ 
ಅಜ್ಞಾನದಿಂದ ಸೋರುತಿಹುದು ಮನೆಯ ಮಾಳಿಗಿ 

ಮಾಳಿಗಿ ಮಾಳಿಗಿ ಸೋರುತಿಹುದು ಮನೆಯ ಮಾಳಿಗಿ
ಓ ಮಾಳಿಗಿ ಮಾಳಿಗಿ ಸೋರುತಿಹುದು ಮನೆಯ ಮಾಳಿಗಿ

ಸೋರುತಿಹುದು ಮನೆಯ ಮಾಳಿಗಿ ದಾರುಗಟ್ಟಿ ಮಾಳ್ಪರಿಲ್ಲ 
ಸೋರುತಿಹುದು ಮನೆಯ ಮಾಳಿಗಿ ದಾರುಗಟ್ಟಿ ಮಾಳ್ಪರಿಲ್ಲ 
ಕಾಳಕತ್ತಲೆ ಒಳಗೆ ನಾನು, ಮೇಲಕ್ಕೇರಿ ಹೋಗಲಾರೆ 
ಸೋರುತಿಹುದು ಸೋರುತಿಹುದು ಸೋರುತಿಹುದು ಮನೆಯ ಮಾಳಿಗಿ

ಓ ಮಾಳಿಗಿ ಮಾಳಿಗಿ ಸೋರುತಿಹುದು ಮನೆಯ ಮಾಳಿಗಿ
ಓ ಮಾಳಿಗಿ ಮಾಳಿಗಿ ಸೋರುತಿಹುದು ಮನೆಯ ಮಾಳಿಗಿ

ಮುರುಕು ತೊಲೆಯು, ಹುಳುಕು ಜಂತಿ, ಕೊರೆದು ಸರಿದು, ಕೀಲ ಸಡಲಿ
ಮುರುಕು ತೊಲೆಯು, ಹುಳುಕು ಜಂತಿ, ಕೊರೆದು ಸರಿದು, ಕೀಲ ಸಡಲಿ 
ಹರಕು ಚಪ್ಪರ ಜೇರು ಗಿಂಡಿ ಮೇಲಕ್ಕೇರಿ ಮೆಟ್ಟಲಾರೆ 
ಸೋರುತಿಹುದು ಸೋರುತಿಹುದು ಸೋರುತಿಹುದು ಮನೆಯ ಮಾಳಿಗಿ

ಓ ಮಾಳಿಗಿ ಮಾಳಿಗಿ ಸೋರುತಿಹುದು ಮನೆಯ ಮಾಳಿಗಿ
ಓ ಮಾಳಿಗಿ ಮಾಳಿಗಿ ಸೋರುತಿಹುದು ಮನೆಯ ಮಾಳಿಗಿ

ಓ ಕಾಂತೆ ಕೇಳೆ ತರುಣದಿಂದ, ಬಂತು ಕಾಣೆ ಹುಬ್ಬಿ ಮಳೆಯು 
ಎಂತೋ ಶಿಶುನಾಳದೀಶ ತಾನು 
ಎಂತೋ ಶಿಶುನಾಳದೀಶ ತಾನು 
ನಿಂತು ಪೊರೆವನು ಎಂದು ನಂಬಿದೆ 

ಸೋರುತಿಹುದು ಮನೆಯ ಮಾಳಿಗಿ  
ಸೋರುತಿಹುದು ಮನೆಯ ಮಾಳಿಗಿ 
ಅಜ್ಞಾನದಿಂದ 
ಅಜ್ಞಾನದಿಂದ ಸೋರುತಿಹುದು ಮನೆಯ ಮಾಳಿಗಿ 

ಮಾಳಿಗಿ ಮಾಳಿಗಿ ಸೋರುತಿಹುದು ಮನೆಯ ಮಾಳಿಗಿ
ಓ ಮಾಳಿಗಿ ಮಾಳಿಗಿ ಸೋರುತಿಹುದು ಮನೆಯ ಮಾಳಿಗಿ
ಓ ಮಾಳಿಗಿ ಮಾಳಿಗಿ ಸೋರುತಿಹುದು ಮನೆಯ ಮಾಳಿಗಿ
ಓ ಮಾಳಿಗಿ ಮಾಳಿಗಿ ಸೋರುತಿಹುದು ಮನೆಯ ಮಾಳಿಗಿ

Monday, August 7, 2017

ಒಬ್ಬನೇ, ಒಬ್ಬನೇ .... ಮಂಜುನಾಥನೊಬ್ಬನೇ/ Obbane Obbane Manjunathanobbane


ಸಾಹಿತ್ಯ ಹಾಗು ಸಂಗೀತ ಸಂಯೋಜಕರು : ಶ್ರೀ ಹಂಸಲೇಖ 
ಗಾಯಕರು : ಶ್ರೀ ಎಸ್.ಪಿ.ಬಾಲಸುಬ್ರಮಣ್ಯಂ 


ಧ್ವನಿಸುರಳಿಯ ಕೊಂಡಿ / Hear the song 


ಒಬ್ಬನೇ....  ಒಬ್ಬನೇ .... ಮಂಜುನಾಥನೊಬ್ಬನೇ
ಒಬ್ಬನೇ, ಒಬ್ಬನೇ .... ಮಂಜುನಾಥನೊಬ್ಬನೇ
ಒಬ್ಬನೇ, ಒಬ್ಬನೇ .... ಮಂಜುನಾಥನೊಬ್ಬನೇ

ಜ್ಞಾನಕು, ಧ್ಯಾನಕು ಒಬ್ಬನೇ
ಭಕ್ತಿಗು, ಮುಕ್ತಿಗು ಒಬ್ಬನೇ ಅವನೊಬ್ಬನೇ
ಒಬ್ಬನೇ....  ಒಬ್ಬನೇ .... ಮಂಜುನಾಥನೊಬ್ಬನೇ

ನೀನೊಂದು ಕಲ್ಲು ಎಂದೆ, ನೀನೆಲ್ಲೂ ಇಲ್ಲವೆಂದೆ
ಮಂಜುನಾಥ, ಮಂಜುನಾಥ
ನೀನೇ ನನ್ನ ಬಳಿಗೆ ಬಂದು, ನಿನ್ನಲ್ಲೇನೇ ಇರುವೆನೆಂದೇ
ನನ್ನ ಕಣ್ಣ ತೆರೆತೆರೆದು, ಒಳಗಣ್ಣ ತೋರಿಸಿದೆ
ಮಂಜುನಾಥ, ಮಂಜುನಾಥ
ನನ್ನ ಪಾಪ ತೊಳೆಯಲೆಂದು ಗಂಗೆಯಂತೆ ಭೂಮಿಗಿಳಿದೆ
ಪೊರೆಯನು ತೆರೆಯಲು ಒಬ್ಬನೇ
ಪೊರೆಯಲು ನಮ್ಮನು, ಒಬ್ಬನೇ, ಹರನೊಬ್ಬನೇ
ಒಬ್ಬನೇ....  ಒಬ್ಬನೇ .... ಮಂಜುನಾಥನೊಬ್ಬನೇ

ಶಂಕರ ಶಂಕರ ಹರಹರ ಶಂಕರ
ಮುರಹರ ಭವಹರ ಶಶಿಧರ ಶುಭಕರ
ಜಯಜಯ ಶಂಭೋ ಜಯಜಯ ಚಂದ್ರಧರ
ಜಯಜಯ ಶಂಭೋ ಜಯಜಯ ಗಂಗಧರ

ತಂದೆಯಿಲ್ಲದೋನೆ ಎಂದೆ , ತಂದೆಯಾಗಿ ನೀನು ಬಂದೆ
ಮಂಜುನಾಥ, ಮಂಜುನಾಥ
ನಾನು ಅನ್ನೋ ಅಹಂಕಾರ, ಸುಟ್ಟು ಭಸ್ಮ ಮಾಡಿದೋನೇ
ಮಂಜನ್ನು ದೀಪ ಮಾಡಿ, ಹೊಸ ಜನ್ಮವನ್ನೇ ತಂದೆ
ಮಂಜುನಾಥ, ಮಂಜುನಾಥ
ಅರಿವಿಗೇನೇ ಗುರುವು ಆದ, ಗುರುಗಳ ಗುರು ಇವನೇ
ಸತ್ಯವೂ, ನಿತ್ಯವೂ ಒಬ್ಬನೇ
ಧರ್ಮವೂ, ದೈವವೂ ಒಬ್ಬನೇ
ಶಿವನೊಬ್ಬನೇ ........

ಶಂಕರ ಶಂಕರ ಹರಹರ ಶಂಕರ
ಮುರಹರ ಭವಹರ ಶಶಿಧರ ಶುಭಕರ
ಜಯಜಯ ಶಂಭೋ ಜಯಜಯ ಚಂದ್ರಧರ
ಶಂಕರ......
ಜಯಜಯ ಶಂಭೋ ಜಯಜಯ ಗಂಗಧರ
ಮುರಹರ
ಜಯಜಯ ಶಂಭೋ ಜಯಜಯ ಗೌರಿವರ
ಶಂಭೋ
ಜಯಜಯ ಶಂಭೋ ಜಯಜಯ ಗೌರಿವರ
ಹರಹರ
ಮಂಜುನಾಥ, ಮಂಜುನಾಥ
ಮಂಜುನಾಥ, ಮಂಜುನಾಥ
ಮಂಜುನಾಥ, ಮಂಜುನಾಥ
ಮಂಜುನಾಥ, ಮಂಜುನಾಥ