Thursday, August 13, 2020

ರಾಮ : ನಿನ್ನ ನಾಮ ಇದ್ದರೆ ಸಾಕೋ / Rama : Ninna naama iddare saako

ಸಾಹಿತ್ಯ     : ಶ್ರೀ ಪುರಂದರದಾಸರು
ಗಾಯಕರು : ಶ್ರೀ ಪುತ್ತೂರು ನರಸಿಂಹ ನಾಯಕ
ರು


ಧ್ವನಿಸುರಳಿಯ ಕೊಂಡಿ / Hear the song 
 

ನಿನ್ನ ನಾಮ ಇದ್ದರೆ ಸಾಕೋ                             || ಪ ||

ಮುನಿದರೆ ಮುನಿ ಶ್ರೀರಾಮ ನಿನ್ನಾಣೆ                      || ಅ.ಪ ||

 

ಹೊದ್ದಿದ ಪಾಪವನ್ನೆಲ್ಲ

ಛಿನ್ನ ಛಿದ್ರವ ಮಾಡಿ ಖಂಡಿಸಿ ಬಿಡುವ

ಎದ್ದರೆ ಸಂಗಡ ಬರುವ

ಎನ್ನ ಮುದ್ದಿಸಿ ಮುಂದೆ ಮುಕುತಿಯ ಕೊಡುವ          || ೧ ||

 

ಸಾರೆ ಸಂಗಡ ಬರುವ

ಎನ್ನ ಸೇರಿದ ಪಾಪ ಕೋಪದಿ ತರಿವ

ಝಾಡಿಸಿ ಕರ್ಮವ ಕಳೆವ

ಎನ್ನ ಕೂಡಿಕೊಂಡು ವೈಕುಂಠಕೆ ನಡೆವ                   || ೨ ||

 

ಪರಮಾನಂದವನೀವ

ನಿನ್ನ ಸ್ಮರಣೆಯೆಂಬುದು ಎನ್ನ ಜೀವಕೆ ಜೀವ

ವರವಕೊಡುವುದೊಂದು ಭಾವ

ಈ ಪರಿ ಪುಸಿಯಲ್ಲ ಶ್ರೀ ಪುರಂದರವಿಠಲ                || ೩ ||

 

ಭಾವಾರ್ಥ:

ಹೊದಿದ್ದ  : ಅಂಟಿಕೊಂಡಿದ್ದ

ಛಿನ್ನ        : ನಾಶಗೊಳಿಸಿದ, ಕತ್ತರಿಸಿದ;ತುಂಡುಮಾಡಿದ

ಛಿದ್ರ        : ರಂದ್ರ, ಬಿರುಕು, ದೌರ್ಬಲ್ಯ

ಸಾರೆ        : ಹತ್ತಿರ, ಅಂಚು, ಬಳಿ

ಝಾಡಿಸಿ  : ಕೊಡಹಿ, ಹೊಡೆದೋಡಿಸಿ, ದಬಾಯಿಸಿ 

ಈವ        : ಕೊಡುವ

ಪುಸಿ        : ಹುಸಿ, ಸುಳ್ಳು

ಪರಮಾನಂದವನೀವ = ಪರಮಾನಂದವನು + ಈವ


ಸಾರೆ ಸಂಗಡ ಬರುವ :

ಸಾರೆ- ನಡೆ.. ನಾವು ಸ್ವಲ್ಪ ಅವನೆಡೆ ನಡೆದರೆ, ಅವನು ನಮ್ಮ ಸಂಗಡವೇ ಬಂದು ಬಿಡುವ


ಛಿನ್ನ ಛಿದ್ರವ ಮಾಡಿ ಖಂಡಿಸಿ ಬಿಡುವ :

ಅಂಟಿಕೊಂಡಿದ್ದ ಪಾಪವನ್ನೆಲ್ಲಾ ನಾಶಗೊಳಿಸಿ ಬಿಡುವವನು


  **ಕಲಿಯುಗದಲ್ಲಿ ಹರಿನಾಮ ಸ್ಮರಣೆಯೊಂದೇ ಪರಮಮುಖ್ಯ ಸಾಧನ**

                                    
                                            ***  ಜೈ ಶ್ರೀರಾಮ್ ***

===================================================


Saahitya  : Sri Purandaradaasaru 
Singer      : Sri Putturu Narasimha Nayakaru

ninna nAma iddare sAko                               || pa ||

munidare muni shrIrAma ninnANe                   || a.pa ||

 

hoddida pApavanella

Chinna Chidrava mADi khanDisi biDuva

eddare sangaDa baruva

enna muddisi munde mukutiya koDuva            || 1 ||

 

sAre sangaDa baruva

enna serida pApa kopadi tariva

jhADisi karmava kaLeva

enna kUDikonDu vaikunThake naDeva            || 2 ||

 

paramAnandavanIva

ninna smaraNeyeMbudu enna jIvak jIva

varavakoDuvudondu bhAva

I pari pusiyalla shrI purandaraviThala            || 3 ||


                                 ***  Jai Sri Ram ***

1 comment: