ಗಾಯಕರು: ಶ್ರೀ ಬಾಲಮುರಳಿಕೃಷ್ಣ
ಧ್ವನಿಸುರಳಿಯ ಕೊಂಡಿ / Hear the song

ಆದದ್ದೆಲ್ಲಾ ಒಳಿತೆ ಆಯಿತು
ದಂಡಿಗೆ ಬೆತ್ತ ಹಿಡಿಯುವುದಕ್ಕೆ ಮಂಡೆ ಬಾಗಿ ನಾಚುತಲಿದ್ದೆ ।।೨।।
ಹೆಂಡತಿ ಸಂತತಿ ಸಾವಿರವಾಗಲಿ ।।೨।।
ದಂಡಿಗೆ ಬೆತ್ತ ಹಿಡಿಸಿದಳಯ್ಯ
ಆದದ್ದೆಲ್ಲಾ ಒಳಿತೆ ಆಯಿತು ನಮ್ಮ ಶ್ರೀಧರನ ಸೇವೆ ಮಾಡಲು ಸಾಧನ ಸಂಪತ್ತಾಯಿತು
ಆದದ್ದೆಲ್ಲಾ ಒಳಿತೆ ಆಯಿತು
ಗೋಪಾಳ ಬುಟ್ಟಿ ಹಿಡಿಯುವುದಕ್ಕೆ ಭೂಪತಿ ಎಂದು ಗರ್ವಿಸುತ್ತಿದ್ದೆ ।।೨।।
ಆ ಪತ್ನಿ ಕುಲ ಸಾವಿರವಾಗಲಿ ।।೨।।
ಗೋಪಾಳ ಬುಟ್ಟಿ ಹಿಡಿಸಿದಳಯ್ಯ
ಆದದ್ದೆಲ್ಲಾ ಒಳಿತೆ ಆಯಿತು ನಮ್ಮ ಶ್ರೀಧರನ ಸೇವೆ ಮಾಡಲು ಸಾಧನ ಸಂಪತ್ತಾಯಿತು ।।೨।।
ಆದದ್ದೆಲ್ಲಾ ಒಳಿತೆ ಆಯಿತು