ಸಾಹಿತ್ಯ:
ಗಾಯಕರು: ಶ್ರೀ ಶಿವಮೊಗ್ಗ ಸುಬ್ಬಣ್ಣ
ಧ್ವನಿಸುರಳಿಯ ಕೊಂಡಿ / Hear the song
ಆನಂದಮಯ ಈ ಜಗಹೃದಯ; ಏತಕೆ ಭಯ ಮಾಣೊ?
ಸೂರ್ಯೋದಯ ಚಂದ್ರೋದಯ; ದೇವರ ದಯ ಕಾಣೊ
ಆನಂದಮಯ ಈ ಜಗಹೃದಯ
ಬಿಸಿಲಿದು ಬರಿ ಬಿಸಿಲಲ್ಲವೊ; ಸೂರ್ಯನ ಕೃಪೆ ಕಾಣೊ
ಸೂರ್ಯನು ಬರಿ ರವಿಯಲ್ಲವೊ; ಆ ಭ್ರಾಂತಿಯ ಮಾಣೊ
ಬಿಸಿಲಿದು ಬರಿ ಬಿಸಿಲಲ್ಲವೊ; ಸೂರ್ಯನ ಕೃಪೆ ಕಾಣೊ
ಸೂರ್ಯನು ಬರಿ ರವಿಯಲ್ಲವೊ; ಆ ಭ್ರಾಂತಿಯ ಮಾಣೊ
ರವಿವದನವೆ ಶಿವಸದನವೊ; ಬರಿ ಕಣ್ಣದು ಮಣ್ಣೊ
ಶಿವನಿಲ್ಲದೆ ಸೌಂದರ್ಯವೆ; ಶವಮುಖದ ಕಣ್ಣೊ
ರವಿವದನವೆ ಶಿವಸದನವೊ; ಬರಿ ಕಣ್ಣದು ಮಣ್ಣೊ
ಶಿವನಿಲ್ಲದೆ ಸೌಂದರ್ಯವೆ; ಶವಮುಖದ ಕಣ್ಣೊ
ಉದಯದೊಳೇನ್ ಹೃದಯವ ಕಾಣ್; ಅದೇ ಅಮೃತದ ಹಣ್ಣೊ
ಶಿವಕಾಣದೆ ಕವಿ ಕುರುಡನೊ; ಶಿವ ಕಾವ್ಯದ ಕಣ್ಣೊ
ಉದಯದೊಳೇನ್ ಹೃದಯವ ಕಾಣ್; ಅದೇ ಅಮೃತದ ಹಣ್ಣೊ
ಶಿವಕಾಣದೆ ಕವಿ ಕುರುಡನೊ; ಶಿವ ಕಾವ್ಯದ ಕಣ್ಣೊ
ಆನಂದಮಯ ಈ ಜಗಹೃದಯ; ಏತಕೆ ಭಯ ಮಾಣೊ?
ಸೂರ್ಯೋದಯ ಚಂದ್ರೋದಯ; ದೇವರ ದಯ ಕಾಣೊ
ಆನಂದಮಯ ಈ ಜಗಹೃದಯ
Bahala chandada kavite...nanage ishtavaada haadu...good work Girish :-)
ReplyDeleteಧನ್ಯವಾದಗಳು ಶೃತಿ :)
Deleteಧನ್ಯವಾದಗಳು. ಕವಿ, ಗಾಯಕ, ಸಾಹಿತ್ಯ, ಸ್ವನಿಸುರುಳಿ ಎಲ್ಲವನ್ನೂ ಕೊಟ್ಟಿದ್ದಕ್ಕೆ.
ReplyDeleteThis comment has been removed by the author.
ReplyDeleteಸಾರಾಂಶವನ್ನೂ ಕೊಟ್ಟಿದ್ದಿದ್ರೆ ಚೆನ್ನಾಗಿರುತ್ತಿತ್ತು 🤗.
ReplyDelete