Monday, November 19, 2018

ತಲ್ಲಣಿಸದಿರು ಕಂಡ್ಯ ತಾಳು ಮನವೆ / Tallanisadiru kandya taalu manave

ಸಾಹಿತ್ಯ    : ಶ್ರೀ ಕನಕದಾಸರು  
ಗಾಯಕರು: ಶ್ರೀ ವಿದ್ಯಾಭೂಷಣರು 





ತಲ್ಲಣಿಸದಿರು ಕಂಡ್ಯ ತಾಳು ಮನವೆ                   || ಪ ||
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ        || ಅ.ಪ ||

ಬೆಟ್ಟದಾ ತುದಿಯಲ್ಲಿ ಹುಟ್ಟಿದಾ ವೃಕ್ಷಕ್ಕೆ
ಕಟ್ಟೆಯನ್ನು ಕಟ್ಟಿ ನೀರೆರೆದವರು ಯಾರೊ
ಪುಟ್ಟಿಸಿದ ದೇವ ತಾ ಹೊಣೆಗಾರನಾಗಿರಲು
ಗಟ್ಯಾಗಿ ರಕ್ಷಿಪನು ಇದಕೆ ಸಂಶಯವಿಲ್ಲ                || ೧ ||

ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲ
ಅಡಿಗಡಿಗೆ ಆಹಾರ ಇತ್ತವರು ಯಾರೋ
ಹಡೆದ ಜನನಿಯ ತೆರದೆ ಸ್ವಾಮಿ ಹೊಣೆಗೀಡಾಗಿ
ಬಿಡದೆ ರಕ್ಷಿಪನಿದಕೆ ಸಂದೇಹ ಬೇಡ                    || ೨ ||

ಕಲ್ಲಿನಲಿ ಹುಟ್ಟಿ ತಾ ಕೂಗುವ ಕಪ್ಪೆಗೆ
ಅಲ್ಲಿ ಆಹಾರವನು ತಂದೀಯುವರ್ಯಾರೋ
ಬಲ್ಲಿದನು ಕಾಗಿನೆಲೆಯಾದಿಕೇಶವರಾಯ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ         || ೩ ||

3 comments:

  1. Replies
    1. ಧನ್ಯವಾದಾಗಳು ಶ್ರೀ ... ನಿಮ್ಮ ಸಹಕಾರ, ಪ್ರೋತ್ಸಾಹ ಇದಕ್ಕೆ ಕಾರಣ

      Delete
  2. ನವಿಲಿಂಗೆ ಚಿತ್ರ ಪತ್ರಗಳ ಬರೆದವರು ಯಾರು
    ಪವಳ ಲತೆಗೆ ಕೆಂಪು ಕೊಟ್ಟವರು ಯಾರು
    ಸವಿಮಾತಿನರಗಿಣಿಗೆ ಹಸಿರು ಬಲಿದವರಾರು
    ಇವು ಮಾಡಿಹನೆ ನಮ್ಮನೆಲ್ಲರನು ಸಲಹುವನೋ!!೨!!

    ReplyDelete