ಸಾಹಿತ್ಯ : ಶ್ರೀ ಪುರಂದರದಾಸರು
ಗಾಯಕರು : ಶ್ರೀ ವಿದ್ಯಾಭೂಷಣ
ಧ್ವನಿಸುರಳಿಯ ಕೊಂಡಿ / Hear the song
ಮನೆಯೊಳಗಾಡೊ ಗೋವಿಂದ
|| ಪ
||
ನೆರೆಮನೆಗಳಿಗೇಕೆ ಪೋಗುವೆಯೋ ಮುಕುಂದ
|| ಅ.ಪ ||
ನೊಸಲಿಗೆ ತಿಲಕವ ಇಡುವೆ
ಅಚ್ಛ ಹೊಸ ಬೆಣ್ಣೆಯನಿಕ್ಕಿ ಕಜ್ಜಾಯ ಕೊಡುವೆ
ಹೊಸ ಆಭರಣಗಳ ಇಡುವೆ
ಮುದ್ದು ಹಸುಳೆ ನಿನ್ನನು ನೋಡಿ ಸಂತೋಷ ಪಡುವೆ
|| ೧ ||
ಅಣ್ಣಯ್ಯ ಬಲರಾಮ ಸಹಿತ
ನೀನಲ್ಲಲ್ಲಿ ತಿರುಗಾಡುವುದೇನೋ ವಿಹಿತ
ಹೆಣ್ಣುಗಳೇಕೋ ಸಂಗಾತ
ಎನ್ನ ಬಿನ್ನಪವನು ಪರಿಪಾಲಿಸೋದಾತ
|| ೨
||
ಚೋರನೆನಿಸಿಕೊಳಲೇಕೋ
ಲಕ್ಷ್ಮೀನಾರಾಯಣನೆಂಬ ಬಿರುದು ನಿನಗೇಕೊ
ವಾರಿಜಾಕ್ಷರ ಕೂಟ ಸಾಕೊ
ನಮ್ಮ ಪುರಂದರವಿಠ್ಠಲ ನೀ ಮನೆಯೊಳಿರಬೇಕು || ೩ ||
ಪದಗಳಾರ್ಥ:
ಪೋಗು
: ಹೋಗು
ಮು = ಮುಕ್ತಿ, ಮೋಕ್ಷ
ಕು
= ತಮಸ್ಸು, ಸಂಸಾರ, ಹುಟ್ಟು ಸಾವಿನ ಬಂಧ..
ದ
= ದದಾತಿ, ಕೊಡುವವನು
ಮುಕುಂದ =
೧. ಜೀವರಿಗೆ ಹುಟ್ಟು ಸಾವುಗಳ ಪ್ರಕೃತಿ ಬಂಧ
ಬಿಡಿಸಿ,
ಮೋಕ್ಷವನ್ನು ಕೊಡುವವನು ಯಾರೋ ಅವನೇ ಮುಕುಂದ
೨. ಸಾತ್ವಿಕರಿಗೆ ಪೂರ್ಣ ಸುಖ ಇರುವ ಮೋಕ್ಷ,
ತಾಮಸರಿಗೆ ಪೂರ್ಣ ದುಃಖ ಇರುವ ತಮಸ್ಸನ್ನು ಕೊಡುವವನು
ಯಾರೋ ಅವನೇ ಮುಕುಂದ
ನೊಸಲು : ಹಣೆ, ಲಲಾಟ, ಫಾಲ
ವಿಹಿತ : ಯೋಗ್ಯವಾದುದು,
ಔಚಿತ್ಯಪೂರ್ಣ
ಹಸುಳೆ : ಮಗು, ಶಿಶು
ಬಿನ್ನಪ(ಹ) : ಪ್ರಾರ್ಥನೆ, ವಿಜ್ಞಾಪನೆ, ಅರಿಕೆ
ವಾರಿಜ. : ನೀರಿನಲ್ಲಿ ಹುಟ್ಟಿದ್ದು, ಕಮಲ
ವಾರಿಜಾಕ್ಷ : ವಾರಿಜಾ೦ಬಕ
ವಾರಿಜಾ೦ಬಕ : ಕಮಲದಂತೆ ಕಣ್ಣುಳ್ಳವನು
ವಾರಿಜಾ೦ಬಕ : ಕಮಲದಂತೆ ಕಣ್ಣುಳ್ಳವನು
ಭಾವಾರ್ಥ, ವ್ಯಾಖ್ಯಾನದ
ಕೃಪೆ : ಸಮೀರ್ ಜಗನ್ನಾಥ್, ನನ್ನ ನೆಚ್ಚಿನ ಸ್ನೇಹಿತರು
ಮನೆಯೊಳಗಾಡೊ ಗೋವಿಂದ:
ಮನೆಯೊಳಗಾಡೊ ಅಂದರೆ, ನಾನು ಕಟ್ಟಿ ವಾಸಮಾಡಿರುವ ಮನೆಯೊಳಗೇ
ಆಡಿಕೊಳ್ಳಪ್ಪ, ಬೇರೆಯವರ ಮನೆಗೆ ಹೋಗಬೇಡ ಎಂದರ್ಥವಲ್ಲ
ಏಶಂ ವೈ ದೇವರಥ: ಈ ದೇಹವೇ ದೇವರ ರಥ.. ಹೃದಯ ಹರಿಯ ಮಂಟಪ,ಮಂದಿರ, ಮನೆ
ಈ ಮನೆಯೊಳಗೆ ಆಡೋ.. ಗೋವಿಂದ.. ಸರ್ವ ವೇದಗಳಿಂದ ಸ್ತುತ್ಯ..
"ಸದಾ ಎನ್ನ ಹೃದಯದಲ್ಲಿ ವಾಸಮಾಡೋ ಶ್ರೀಹರಿ",
ಪರ.. ಈ ಮನೆಯನ್ನು ಬಿಟ್ಟು ಬೇರೆಯಡೆಯೇಕೆ ಹೋಗುತಿ ?
ಅಂದ್ರೆ ದೇವರು ಕಾಣುವುದು ಜ್ಞಾನಿಗಳಿಗೆ ಮಾತ್ರ..
ಬೇರೆ ಜ್ಞಾನಿಗಳು ಸ್ತುತ್ಯರೆ.. ಅವರಲ್ಲಿ ಮಾತ್ರ ಹೋಗೋದು ಇಲ್ಲಿ ಬಾರದಿರುವು ತರವೇ?
ಈ ಎಲ್ಲ ಭಾವಗಳ ಪುಂಜ - ಒಂದು ಸಾಲು
-----------------------------------------------------------------------------------------------
Saahitya : Sri Purandaradaasaru
Singer : Sri Vidhyabhooshana
maneyoLagADo govinda || pa ||
neremanegaLigeke poguvyo mukunda || a.pa ||
nosalige tilakava iDuve
achCha hosa beNNyanikki kajjAya koDuve
hosa AbharaNagaLa iDuve
muddu hasuLe ninnanu noDi santoSha paDuve || 1 ||
aNNayya balarAma sahita
nInallalli tirugADuvudeno vihita
heNNugaLeko sangAta
enna binnapavanu paripAlisodAta || 2 ||
chorannisikoLaleko
lakShmInArAyaNaneMba birudu ninageko
vArijAkShara kUTa sAko
namma purandaraviThThala nI maneyoLirabeku || 3 ||
Singer : Sri Vidhyabhooshana
maneyoLagADo govinda || pa ||
neremanegaLigeke poguvyo mukunda || a.pa ||
nosalige tilakava iDuve
achCha hosa beNNyanikki kajjAya koDuve
hosa AbharaNagaLa iDuve
muddu hasuLe ninnanu noDi santoSha paDuve || 1 ||
aNNayya balarAma sahita
nInallalli tirugADuvudeno vihita
heNNugaLeko sangAta
enna binnapavanu paripAlisodAta || 2 ||
chorannisikoLaleko
lakShmInArAyaNaneMba birudu ninageko
vArijAkShara kUTa sAko
namma purandaraviThThala nI maneyoLirabeku || 3 ||