Sunday, February 24, 2019

ಮನೆಯೊಳಗಾಡೊ ಗೋವಿಂದ / Maneyolagaado Govinda


ಸಾಹಿತ್ಯ     : ಶ್ರೀ ಪುರಂದರದಾಸರು 
ಗಾಯಕರು : ಶ್ರೀ ವಿದ್ಯಾಭೂಷಣ   



ಧ್ವನಿಸುರಳಿಯ ಕೊಂಡಿ / Hear the song 


ಮನೆಯೊಳಗಾಡೊ ಗೋವಿಂದ                                 || ಪ ||
ನೆರೆಮನೆಗಳಿಗೇಕೆ ಪೋಗುವೆಯೋ ಮುಕುಂದ               || ಅ.ಪ ||

ನೊಸಲಿಗೆ ತಿಲಕವ ಇಡುವೆ    
ಅಚ್ಛ ಹೊಸ ಬೆಣ್ಣೆಯನಿಕ್ಕಿ ಕಜ್ಜಾಯ ಕೊಡುವೆ 
ಹೊಸ ಆಭರಣಗಳ ಇಡುವೆ
ಮುದ್ದು ಹಸುಳೆ ನಿನ್ನನು ನೋಡಿ ಸಂತೋಷ ಪಡುವೆ        || ೧ ||

ಅಣ್ಣಯ್ಯ ಬಲರಾಮ ಸಹಿತ  
ನೀನಲ್ಲಲ್ಲಿ ತಿರುಗಾಡುವುದೇನೋ ವಿಹಿತ 
ಹೆಣ್ಣುಗಳೇಕೋ ಸಂಗಾತ
ಎನ್ನ ಬಿನ್ನಪವನು ಪರಿಪಾಲಿಸೋದಾತ                         || ೨ ||

ಚೋರನೆನಿಸಿಕೊಳಲೇಕೋ 
ಲಕ್ಷ್ಮೀನಾರಾಯಣನೆಂಬ ಬಿರುದು ನಿನಗೇಕೊ 
ವಾರಿಜಾಕ್ಷರ ಕೂಟ ಸಾಕೊ 
ನಮ್ಮ ಪುರಂದರವಿಠ್ಠಲ ನೀ ಮನೆಯೊಳಿರಬೇಕು           || ೩ ||

ಪದಗಳಾರ್ಥ

ಪೋಗು   : ಹೋಗು 
ಮು = ಮುಕ್ತಿ, ಮೋಕ್ಷ
ಕು   = ತಮಸ್ಸು, ಸಂಸಾರ, ಹುಟ್ಟು ಸಾವಿನ ಬಂಧ..
    = ದದಾತಿ, ಕೊಡುವವನು
ಮುಕುಂದ =
೧. ಜೀವರಿಗೆ ಹುಟ್ಟು ಸಾವುಗಳ ಪ್ರಕೃತಿ ಬಂಧ ಬಿಡಿಸಿ, 
    ಮೋಕ್ಷವನ್ನು ಕೊಡುವವನು ಯಾರೋ ಅವನೇ ಮುಕುಂದ
೨. ಸಾತ್ವಿಕರಿಗೆ ಪೂರ್ಣ ಸುಖ ಇರುವ ಮೋಕ್ಷ,
     ತಾಮಸರಿಗೆ ಪೂರ್ಣ ದುಃಖ ಇರುವ ತಮಸ್ಸನ್ನು ಕೊಡುವವನು ಯಾರೋ ಅವನೇ ಮುಕುಂದ

ನೊಸಲು   : ಹಣೆ, ಲಲಾಟ, ಫಾಲ
ವಿಹಿತ      : ಯೋಗ್ಯವಾದುದು, ಔಚಿತ್ಯಪೂರ್ಣ
ಹಸುಳೆ     : ಮಗು, ಶಿಶು 
ಬಿನ್ನಪ(ಹ) : ಪ್ರಾರ್ಥನೆ, ವಿಜ್ಞಾಪನೆ, ಅರಿಕೆ 
ವಾರಿಜ.    : ನೀರಿನಲ್ಲಿ ಹುಟ್ಟಿದ್ದು, ಕಮಲ 
ವಾರಿಜಾಕ್ಷ : ವಾರಿಜಾ೦ಬಕ
ವಾರಿಜಾ೦ಬಕ : ಕಮಲದಂತೆ ಕಣ್ಣುಳ್ಳವನು 


ಭಾವಾರ್ಥ, ವ್ಯಾಖ್ಯಾನದ ಕೃಪೆ : ಸಮೀರ್ ಜಗನ್ನಾಥ್, ನನ್ನ ನೆಚ್ಚಿನ ಸ್ನೇಹಿತರು
ಮನೆಯೊಳಗಾಡೊ ಗೋವಿಂದ:
ಮನೆಯೊಳಗಾಡೊ ಅಂದರೆ, ನಾನು ಕಟ್ಟಿ ವಾಸಮಾಡಿರುವ ಮನೆಯೊಳಗೇ  ಆಡಿಕೊಳ್ಳಪ್ಪ, ಬೇರೆಯವರ ಮನೆಗೆ ಹೋಗಬೇಡ ಎಂದರ್ಥವಲ್ಲ
ಏಶಂ ವೈ ದೇವರಥ ದೇಹವೇ ದೇವರ ರಥ.. ಹೃದಯ ಹರಿಯ ಮಂಟಪ,ಮಂದಿರ, ಮನೆ
ಮನೆಯೊಳಗೆ ಆಡೋ.. ಗೋವಿಂದ.. ಸರ್ವ ವೇದಗಳಿಂದ ಸ್ತುತ್ಯ..
"ಸದಾ ಎನ್ನ ಹೃದಯದಲ್ಲಿ ವಾಸಮಾಡೋ ಶ್ರೀಹರಿ",
ಪರ.. ಮನೆಯನ್ನು ಬಿಟ್ಟು ಬೇರೆಯಡೆಯೇಕೆ ಹೋಗುತಿ ?
ಅಂದ್ರೆ ದೇವರು ಕಾಣುವುದು ಜ್ಞಾನಿಗಳಿಗೆ ಮಾತ್ರ..
ಬೇರೆ ಜ್ಞಾನಿಗಳು ಸ್ತುತ್ಯರೆ.. ಅವರಲ್ಲಿ ಮಾತ್ರ ಹೋಗೋದು ಇಲ್ಲಿ ಬಾರದಿರುವು ತರವೇ?
ಎಲ್ಲ ಭಾವಗಳ ಪುಂಜ - ಒಂದು ಸಾಲು

-----------------------------------------------------------------------------------------------

Saahitya : Sri Purandaradaasaru
Singer     : Sri Vidhyabhooshana

maneyoLagADo govinda                                                         || pa ||
neremanegaLigeke poguvyo mukunda                                || a.pa ||

nosalige tilakava iDuve 
achCha hosa beNNyanikki kajjAya koDuve
hosa AbharaNagaLa iDuve
muddu hasuLe ninnanu noDi santoSha paDuve               || 1 ||

aNNayya balarAma sahita 
nInallalli tirugADuvudeno vihita 
heNNugaLeko sangAta
enna binnapavanu paripAlisodAta                                      || 2 ||

chorannisikoLaleko 
lakShmInArAyaNaneMba birudu ninageko 
vArijAkShara kUTa sAko 
namma purandaraviThThala nI maneyoLirabeku         || 3 ||

No comments:

Post a Comment