ಸಾಹಿತ್ಯ : ಶ್ರೀ ಕನಕದಾಸರು
ಗಾಯಕರು: ಶ್ರೀ ವಿದ್ಯಾಭೂಷಣ
ಶ್ರೀ ರಾಜೀವ ರಮೇಶ್
ಗಾಯಕರು: ಶ್ರೀ ವಿದ್ಯಾಭೂಷಣ
ಶ್ರೀ ರಾಜೀವ ರಮೇಶ್
ಧ್ವನಿಸುರಳಿಯ ಕೊಂಡಿ / Hear the song
ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ
ನೀ
ದೇಹದೊಳಗೊ ನಿನ್ನೊಳು ದೇಹವೊ || ಪ ||
ಬಯಲು
ಆಲಯದೊಳಗೊ ಆಲಯವು ಬಯಲೊಳಗೊ
ಬಯಲು
ಆಲಯವೆರಡು ನಯನದೊಳಗೊ
ನಯನ
ಬುದ್ಧಿಯೊಳಗೊ ಬುದ್ಧಿ ನಯನದೊಳಗೊ
ನಯನ
ಬುದ್ಧಿಗಳೆರಡು ನಿನ್ನೊಳಗೊ ಹರಿಯೆ || ೧ ||
ಸವಿಯು
ಸಕ್ಕರೆಯೊಳಗೊ ಸಕ್ಕರೆಯು ಸವಿಯೊಳಗೊ
ಸವಿಯು
ಸಕ್ಕರೆಗಳೆರಡು ಜಿಹ್ವೆಯೊಳಗೊ
ಜಿಹ್ವೆ
ಮನಸಿನೊಳಗೊ ಮನಸು ಜಿಹ್ವೆಯೊಳಗೊ
ಜಿಹ್ವೆ
ಮನಸುಗಳೆರಡು ನಿನ್ನೊಳಗೊ ಹರಿಯೆ
|| ೨ ||
ಕುಸುಮದೊಳು
ಗಂಧವೊ ಗಂಧದೊಳು ಕುಸುಮವೊ
ಕುಸುಮ
ಗಂಧಗಳೆರಡು ಆಘ್ರಾಣದೊಳಗೊ
ಅಸಮಭವ
ಕಾಗಿನೆಲೆಯಾದಿಕೇಶವರಾಯ
ಉಸುರಲೆನ್ನಳವಲ್ಲ
ಎಲ್ಲ ನಿನ್ನೊಳಗೊ ಹರಿಯೆ || ೩ ||
ಪದಗಳಾರ್ಥ
:
ಆಘ್ರಾಣ = ಮೂಸುವಿಕೆ
ಅಸಮಭವ = ಅದ್ವಿತೀಯ, ಏಕಮಾತ್ರ, ಅಸಮಾನ
ಉಸುರು = ಹೇಳು,ನುಡಿ,ಉಚ್ಚರಿಸು
ಅಳವಲ್ಲ = ಅಸಾಧ್ಯ
ಉಸುರಲೆನ್ನಳವಲ್ಲ
= ಉಸುರಲಿ+ಎನ್ನ +ಅಳವಲ್ಲ = ಎನ್ನಿಂದ ವರ್ಣಿಸಲು ಅಸಾಧ್ಯ
=======================================================
Saahitya : Sri Kanakadaasaru
Singer : Sri Vidhyabhooshana
: Sri Raajeeva Ramesh
nI mAyeyoLago ninnoLu mAyeyo
nI dehadoLago ninnoLu dehavo || pa ||
bayalu AlayadoLago Alayavu bayaloLago
bayalu AlayaveraDu nayanadoLago
nayana buddhiyoLago buddhi nayanadoLago
nayana buddhigaLeraDu ninnoLago hariye || 1 ||
saviyu sakkareyoLago sakkareyu saviyoLago
saviyu sakkaregaLeraDu jihveyoLago
jihve manasinoLago manasu jihveyoLago
jihve manasugaLeraDu ninnoLago hariye || 2 ||
kusumadoLu gandhavo gandhadoLu kusumavo
kusuma gandhagaLeraDu AghrANadoLago
asamabhava kAgineleyAdikeshavarAya
usuralennaLavalla ella ninnoLago hariye || 3 ||
No comments:
Post a Comment