ಸಾಮಾನ್ಯವಲ್ಲ
ಶ್ರೀ ಹರಿಯ ಸೇವೆ
ಪಾಮರ
ಜನರಿಗೆ ಸಾಮಾನ್ಯವಲ್ಲ || ಪ ||
ಸಾಮಜ
ವರದನ ಪ್ರೇಮದಿ ನೆನೆವುದು
ತಾಮಸ
ಬುದ್ಧಿಯ ತಾ ತಗ್ಗಿಸದೆ || ಅ. ಪ
||
ಅಂತರ
ಮಲಿನವು ಅಳಿಯಬೇಕು
ಶ್ರೀಕಾಂತನ
ಚರಿತೆ ಕೇಳಲುಬೇಕು
ಸಂತತವಿರಬೇಕು
ಸಂತ ಜನರ ಗುಣ
ನಿರಂತರದಲಿ
ತಾ ಚಿಂತಿಸಬೇಕು || ೧ ||
ಸರ್ವಾಂತರ್ಯಾಮಿ
ಶ್ರೀ ಹರಿಯೆಂದು
ಸರ್ವೇಶ್ವರನೆಂದು
ಸ್ವರಮಣನೆಂದು
ಸರ್ವಾನುಗನೆಂದು
ಪುರಂದರ ವಿಠಲನ
ಸರ್ವದಾ
ಧ್ಯಾನಿಸಿ ಗರ್ವವಳಿಯಬೇಕು || ೨ ||
ಪದಗಳಾರ್ಥ:
ಪಾಮರ : ತಿಳಿವಳಿಕೆಯಿಲ್ಲದವರು, ದಡ್ಡರು, ಮೂಢ, ಅಲ್ಪ, ನೀಚ, ಏನೂ ತಿಳಿಯದವ
ಸಾಮಜ : ಆನೆ
ಸಂತತ : ಸತತ, ಅನಾರತ, ಅಶ್ರಾಂತ, ಅವಿರತ, ಅನಿಶ, ನಿತ್ಯ, ಅನವರತ, ಅಜಸ್ರಮ
ಸರ್ವಾನುಗ : ಸಮಸ್ಥ ಜಗತ್ತಿನಿಂದ ಸೇವಿಸಲ್ಪಡುವವನು
ಸ್ವರಮಣ : ತನ್ನಲ್ಲಿ ತಾನೇ ರಮಿಸುವವನು
ರಮಿಸು : ಆನಂದ ಪಡು, ಸುಖಿಸು
ಸಂತತ : ಸತತ, ಅನಾರತ, ಅಶ್ರಾಂತ, ಅವಿರತ, ಅನಿಶ, ನಿತ್ಯ, ಅನವರತ, ಅಜಸ್ರಮ
ಸರ್ವಾನುಗ : ಸಮಸ್ಥ ಜಗತ್ತಿನಿಂದ ಸೇವಿಸಲ್ಪಡುವವನು
ಸ್ವರಮಣ : ತನ್ನಲ್ಲಿ ತಾನೇ ರಮಿಸುವವನು
ರಮಿಸು : ಆನಂದ ಪಡು, ಸುಖಿಸು
----------------------------------------------------------------
Saahitya : Sri
Purandaradaasaru
Singer
: Smt M.S.Sheela
sAmAnyavalla shrI hariya seve
pAmara janarige sAmAnyavalla || pa ||
sAmaja varadana premadi nenvudu
tAmasa buddhiya tA taggisade || a. pa ||
antara malinavu aLiyabeku
shrIkAntana charite keLalu beku
santatavirabeku santa janara guNa
nirantaradali tA chintisa beku || 1 ||
sarvAntaryAmi shrI hariyendu
sarveshvaranendu svaramaNanendu
sarvAnuganendu purandara viThalana
sarvadA dhyAnisi garvavaLiyabeku || 2 ||
ಶ್ರೀಕಾಂತನ ಚರಿತೆ ಕೇಳಲುಬೇಕು
ReplyDeleteಖುಷಿ ಆಯ್ತು ನನ್ನ ಹೆಸರು ನೋಡಿ..
Jokes apart..ಸುಂದರ ಸರಳ ಸಾಹಿತ್ಯ ದಾಸರದು...ಉತ್ತಮ ಕೆಲಸ ಮಾಡುತ್ತಿರುವೆ...ಅಭಿನಂದನೆಗಳು ಗಿರಿ