Friday, November 29, 2019

ಇಳಿದು ಬಾ ತಾಯಿ / Ilidu Baa Taayi

ಸಾಹಿತ್ಯ : ವರಕವಿ ಡಾ.ದ.ರಾ.ಬೇಂದ್ರೆ
ಸಂಗೀತ : ವಿಜಯಭಾಸ್ಕರ್
ಗಾಯನ : ಡಾ.ಪಿ.ಬಿ.ಶ್ರೀನಿವಾಸ್


ಧ್ವನಿಸುರಳಿಯ ಕೊಂಡಿ / Hear the song 


ಓಂ ಓಂ ಓಂ

ಇಳಿದು ಬಾ ತಾಯಿ ಇಳಿದು ಬಾ
ಹರನ ಜಡೆಯಿಂದ, ಹರಿಯ ಅಡಿಯಿಂದ

ಋಷಿಯ ತೊಡೆಯಿಂದ ನುಸುಳಿ ಬಾ
ದೇವದೇವರನು ತಣಿಸಿ ಬಾ
ದಿಕ್ದಿಗಂತದಲಿ ಹಣಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ
ನಿನಗೆ ಪೊಡಮಡುವೆ, ನಿನ್ನ ನುಡುತೊಡುವೆ, ಏಕೆ ಎಡೆತಡೆವೆ ಸುರಿದು ಬಾ
ಸ್ವರ್ಗ ತೊರೆದು ಬಾ
ಬಯಲ ಜೆರೆದು ಬಾ
ನೆಲದಿ ಹರಿದು ಬಾ
ಬಾರೆ ಬಾ, ತಾಯಿ ಇಳಿದು ಬಾ

ದಯೆಯಿರಿದ ದೀನ
ಹರೆಯಳಿದ ಹೀನ
ನೀರಿರದ ಮೀನ ಕರೆಕರೆವ ಬಾ
ಕರು ಕಂಡ ಕರುಳೆ
ಮನ ಉಂಡ ಮರುಳೆ
ಉದ್ದಂಡ ಅರುಳೆ ಸುಳಿಸುಳಿದು ಬಾ
ಶಿವಶುಕ್ರ ತರುಣೆ
ಅತಿಕಿಂಚದರುಣೆ
ವಾತ್ಸಲ್ಯ ವರಣೆ ಇಳಿಇಳಿದು ಬಾ

ಸುರಸ್ವಪ್ನವಿದ್ದ ಪ್ರತಿಬಿಂಬ ಬಿದ್ದ
ಉತ್ಬುದ್ಧ ಶುದ್ಧ ನೀರೇ ನೀರೇ
ಎಚ್ಚೆದ್ದು ಎದ್ದ, ಆಕಾಶದುದ್ದ
ಧರೆಗಿಳಿಯಲಿದ್ದ ಧೀರೆ
ಸಿರಿ ವಾರಿಜಾತ ವರ ಪಾರಿಜಾತ
ತಾರಾ ಕುಸುಮದಿಂದೆ
ಬೃಂದಾರ ವಂಧೆ, ಮಂದಾರ ಗಂಧೆ
ನೀನೆ ತಾಯಿತಂದೆ
ರಸಪೂರ ಜನ್ಯೆ, ನೀನಲ್ಲ ಅನ್ಯೆ,
ಸಚ್ಚಿದಾನಂದ ಕನ್ಯೆ .. ಕನ್ಯೆ
ಇಳಿದು ಬಾ ತಾಯಿ ಇಳಿದು ಬಾ

ಬಂದಾರೆ ಬಾರೆ, ಒಂದಾರೆ ಸಾರೆ, ಕಣ್ಧಾರೆ ತಡೆವೆರೇನೆ
ಅವತಾರವೆಂದೆ, ಎಂದಾರೆ ತಾಯಿ ಈ ಅಧಃಪಾತವನ್ನೇ
ಹರಕೆ ಸಂದಂತೆ, ಮಮತೆ ಮಿಂದಂತೆ, ತುಂಬಿ ಬಂದಂತೆ
ಬಂದಾರೆ ಬಾರೆ, ಒಂದಾರೆ ಸಾರೆ, ಕಣ್ಧಾರೆ ತಡೆವೆರೇನೆ
ಅವತಾರವೆಂದೆ, ಎಂದಾರೆ ತಾಯಿ ಈ ಅಧಃಪಾತವನ್ನೇ
ಹರಕೆ ಸಂದಂತೆ, ಮಮತೆ ಮಿಂದಂತೆ, ತುಂಬಿ ಬಂದಂತೆ

ಧುಮ್ ಧುಮ್ ಎಂದಂತೇ ದುಡಿಕಿ ಬಾ
ನಿನ್ನ ಕಂದನ್ನ ಹುಡಿಕಿ ಬಾ 
ಹುಡಿಕಿ ಬಾ ತಾಯೆ ದುಡುಕಿ ಬಾ 
ಹರಣ ಹೊಸತಾಗೆ ಹೊಳೆದು ಬಾ 
ಬಾಳು ಬೆಳಕಾಗೆ ಬೆಳೆದು ಬಾ 
ಶಂಭು ಶಿವಹರನ ಚಿತ್ತೆ ಬಾ 
ದತ್ತ ನರಹರಿಯೆ ಮುತ್ತೆ ಬಾ
ಅಂಬಿಕಾತನೆಯನತ್ತೆ ಬಾ 
ಇಳಿದು ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ 
ಇಳಿದು ಬಾ

=====================================================

Sahitya  : Varakavi Dr. Daara Bendre
Music    : Sri Vijayabhaskar
Singer  : Dr.P.B.Srinivas

oM oM oM
iLidu bA tAyi iLidu bA
iLidu bA tAyi iLidu bA
harana jaDeyiMda, hariya aDiyinda
RiShiya toDyiMda nusuLi bA
devadevaranu taNisi bA
dikdigantadali haNisi bA
charAcharagaLige uNisi bA
ninage poDamaDuve, ninna nuDu toDuve, eke eDetaDeve suridu bA
svarga toredu bA
bayala jaredu bA
neladi haridu bA
bAre bA, tAyi iLidu bA

dayeyirida dIna
hareyaLida hIna
nIrirada mIna karekareva bA
karu kanDa karuLe
mana unDa maruLe
uddanDa aruLe suLisuLidu bA
shivashukra taruNe
atikinchadaruNe
vAtsalya varaNe iLiiLidu bA

surasvapnavidda pratibiMba bidda
utbuddha shuddha nIre nIre
echcheddu edda, AkAshadudda
dhargiLiyalidda dhIre
siri vArijAta vara pArijAta
tArA kusumadinde
bRindAra vandhe, mandAra gaMdhe
nIn tAyitande
rasapUra janye, nInalla anye,
sachchidAnaMda kanye .. kanye
iLidu bA tAyi iLidu bA

bandAre bAre, ondAre sAre, kaNdhAre taDeverEne
avatAravende, endAre tAyi I adhaHpAtavanne
harake sandante, mamate mindante, tuMbi bandante
bandAre bAre, ondAre sAre, kaNdhAre taDeverEne
avatAravende, endAre tAyi I adhaHpAtavanne
harake sandante, mamate mindante, tuMbi bandante


dhum dhum endaMte duDiki bA
ninna kaMdanna huDiki bA
huDiki bA tAye duDuki bA
haraNa hosatAge hoLedu bA
bALu beLakAge beLdu bA
shaMbhu shivaharana chitte bA
datta narahariye mutte bA
aMbikAtaneyanatte bA
iLidu bA tAyi iLidu bA
iLidu bA tAyi
iLidu bA

Thursday, November 21, 2019

ಕೃಷ್ಣ ಬಾರೊ / Krishna Baaro

ಸಾಹಿತ್ಯ     : ಶ್ರೀ ಪುರಂದರದಾಸರು
ಗಾಯಕರು : ಶ್ರೀಮತಿ ಕಸ್ತೂರಿ ಶಂಕರ್
                
ಧ್ವನಿಸುರಳಿಯ ಕೊಂಡಿ / Hear the song 
                                       

ಕೃಷ್ಣ ಬಾರೊ ಕೃಷ್ಣ ಬಾರೊ ಕೃಷ್ಣಯ್ಯ ನೀ ಬಾರಯ್ಯಾ    || ಪ ||
ಸಣ್ಣ ಹೆಜ್ಜೆಯನಿಟ್ಟು ಗೆಜ್ಜೆ ನಾದಗಳಿಂದ

ಮನ್ಮಥ ಜನಕನೆ ಬೇಗನೆ ಬಾರೊ
ಕಮಲಾಪತಿ ನೀ ಬಾರೊ
ಅಮಿತ ಪರಾಕ್ರಮ ಶಂಕರ ಬಾರೊ
ಕಮನೀಯಗಾತ್ರನೆ ಬಾರಯ್ಯ ದೊರೆಯೆ                   || ೧ ||

ಕುರುಳು ಕೇಶಗಳ ಒಲಿವ ಅಂದ
ಭರದ ಕಸ್ತೂರಿ ತಿಲಕದ ಚೆಂದ
ಶಿರದಿ ಒಪ್ಪುವ ನವಿಲು ಕಣ್ಣುಗಳಿಂದ
ಥರಥರಾಭರಣಗಳ ಧರಿಸಿ ನೀ ಬಾರೊ                      || ೨ ||

ಹಾಲು ಬೆಣ್ಣೆಗಳ ಕೈಯಲ್ಲಿ ಕೊಡುವೆ
ಮೇಲಾಗಿ ಭಕ್ಷ್ಯಗಳ ಮುಚ್ಚಿಟ್ಟು ತರುವೆ
ಜಾಲ ಮಾಡದೆ ನೀ ಬಾರಯ್ಯ ಮರಿಯೇ
ಬಾಲ ಎನ ತಂದೆ ಪುರಂದರವಿಠ್ಠಲ                          || ೩ ||


ಪದಗಳಾರ್ಥ: 

ಕಮನೀಯ              : ಸುಂದರ , ಮನೋಹರ 
ಕಮನೀಯಗಾತ್ರ       : ಸುಂದರವಾದ ಮುಖ ಉಳ್ಳವನು 
ಕುರುಳು                 : ಗುಂಗುರು ಕೂದಲು 
ಭರ                       : ಹೊತ್ತಿಕೊಂಡಿರುವ, ಆಸಕ್ತಿ, ತತ್ಪರತೆ,
ಕಸ್ತೂರಿ                   : ಕಸ್ತೂರಿ ಮೃಗದಿಂದ ಒದಗಿದ ಸುಗಂಧ ದ್ರವ್ಯ 
ಭರದ ಕಸ್ತೂರಿ ತಿಲಕ : ಹೊತ್ತಿರುವ  ಕಸ್ತೂರಿ ಪರಿಮಳದ ತಿಲಕ 
ಜಾಲ                     : ಉಪಾಯ, ಗರ್ವ, ಕೊಬ್ಬು, ಮೋಸ, ಕಪಟ, ಬಲೆ 
===============================================
Saahitya  : Sri Purandaradaasaru
Singer     : Smt Kasturi Shankar

krishNa bAro krishNa bAro krishNayya nI bArayyA    || pa ||
saNNa hejjeyaniTTu gejje nAdagaLinda

manmatha janakane begane bAro
kamalApati nI bAro
amita parAkrama shankara bAo
kamanIyagAtrane bArayya doreye                                    || 1 ||

kuruLu keshagaLa 
oliva anda
bharada kastUri tilakada chenda
shiradi 
oppuva navilu kaNNugaLinda
tharatharAbharaNagaLa dharisi nI bAro                         || 2 ||

hAlu beNNegaLa kaiyalli koDuve
melAgi bhakShyagaLa muchchiTTu taruve
jAla mADade nI bArayya mariye
bAla 
e
na tande purandara viThThala                                || 3 ||