Wednesday, November 20, 2019

ಮಾನವ ಜನ್ಮದ ಬೆಲೆ ತಿಳಿಯೋ / Maanava janmada bele tiLiyo

ಸಾಹಿತ್ಯ     : ಶ್ರೀ ಚಿ.ಉದಯಶಂಕರ್ 
ಗಾಯಕರು : ಶ್ರೀ ಡಾ. ಪಿ.ಬಿ.ಶ್ರೀನಿವಾಸ್ 
                

ಧ್ವನಿಸುರಳಿಯ ಕೊಂಡಿ / Hear the song 

ಮನುಜ ಮನುಜ
ಮಾನವ ಜನ್ಮದ ಬೆಲೆ ತಿಳಿಯೋ
ಜನುಮದ ಕಾರಣ ನೀ ಅರಿಯೋ
ಮನುಜ
ಹೊನ್ನಿನ ಆಸೆಯ ನೀ ಮರಿಯೋ
ಮಾನವ ಜನ್ಮದ ಬೆಲೆ ತಿಳಿಯೋ

ಏನನು ತಂದೆಯೋ ಬಂದಾಗ
ಏನನು ಒಯ್ಯುವೆ ಹೋದಾಗ
ದಾನ ಧರ್ಮವ ಬಿಡದೆ ಮಾಡು ಇದ್ದಾಗ
ಮಾನವ ಜನ್ಮದ ಬೆಲೆ ತಿಳಿಯೋ
ಜನುಮದ ಕಾರಣ ನೀ ಅರಿಯೋ

ಬಾಳನು ಕೆಡಿಸುವುದೇ ಹೊನ್ನು
ನೀಚನ ಮಾಡುವುದೇ ಹೊನ್ನು
ಧರ್ಮವ ಬಿಡಿಸುವುದೇ ಹೊನ್ನು
ದೇವನ ಮರೆಸುವುದೇ ಹೊನ್ನು
ಮಾನವ ಜನ್ಮದ ಬೆಲೆ ತಿಳಿಯೋ
ಜನುಮದ ಕಾರಣ ನೀ ಅರಿಯೋ
ಮನುಜ

===============================================

Saahitya  : Sri Chi Udayashankar
Singer      : Sri Dr P.B.Srinivas
                
manuja manuja
mAnava janmada bele tiLiyo
janumada kAraNa nI ariyo
manuja
honnina Aseya nI mariyo
mAnava janmada bele tiLiyo

enanu tandeyo bandAga
enanu oyyuve hodAga
dAna dharmava biDade mADu iddAga
mAnava janmada bele tiLiyo
janumada kAraNa nI ariyo

bALanu keDisuvude honnu
nIchana mADuvude honnu
dharmava biDisuvude honnu
devana maresuvude honnu
mAnava janmada bele tiLiyo
janumada kAraNa nI ariyo
manuja

No comments:

Post a Comment