ಸಾಹಿತ್ಯ : ಶ್ರೀ ಪುರಂದರದಾಸರುಗಾಯಕರು : ಕು|| ದ್ಯುತಿ ಜಾಗೀರ್ದಾರ್ & ಕು|| ಸ್ನಿಗ್ಧ ಜಾಗೀರ್ದಾರ್
ಧ್ವನಿಸುರಳಿಯ ಕೊಂಡಿ / Hear the song
ಬಾರಯ್ಯ ಮನೆಗೆ ರಂಗಯ್ಯ ನೀನು || ಪ ||
ಬಾರಯ್ಯ ಮನೆಗೆ ಬಾಲಗೋಪಾಲ
ಜಾರ ಚೋರ ಕೃಷ್ಣ ಜಾನಕಿ ಪತಿ ರಾಮ || ಅ.ಪ ||
ನಂದನಂದನ ನವನೀತಚೋರ ಕೃಷ್ಣ
ಮಂದರೋದ್ಧಾರನೆ ಮಾಧವರಾಯರ ರಾಮ || ೧ ||
ಗೋಕುಲದಲ್ಲಿ ಗೋಪಿಯರ ಕೂಡಿ
ಲೋಕ ನೋಡಲವರ ಕಾಕು ಮಾಡಿ || ೨ ||
ಪಳ್ಳಿಪಳ್ಳಿಯೊಳೆಲ್ಲ ಮೊಸರು ಹಾಲು ಬೆಣ್ಣೆ
ಕೊಳ್ಳೆಯಾಡಿ ಗೋಪಿ ಮುಡಿಯನ್ನೇ ಪಿಡಿದ ಕೃಷ್ಣ || ೩ ||
ಅನಂತಪದ್ಮನಾಭ ಅಪ್ರಮೇಯ ಹೃಷಿಕೇಶ
ದಾನವಾಂತಕ ರಂಗ ದಶರಥ ಪುತ್ರ ರಾಮ || ೪ ||
ಪರಮಪವಿತ್ರ ರಾಮ ಭದ್ರಾಚಲಾಧೀಶ
ವರದ ಶ್ರೀಪುರಂದರವಿಠ್ಠಲನೇ ರಾಮ || ೫ ||
ಭಾವಾರ್ಥ:
ಶ್ರೀ ಪುರಂದರದಾಸರು ಭದ್ರಾಚಲಕ್ಷೇತ್ರವನ್ನು ಸಂದರ್ಶಿಸಿದಾಗ
ರಚಿಸಿದ ಶ್ರೀರಾಮದೇವರ ಪದವಿದು
ಜಾರ : ಇದು ಮೂಲತಃ ಸಂಸ್ಕೃತ ಪದ
ಮೂಲಾರ್ಥ "ಪ್ರಿಯ, ಆಪ್ತಸ್ನೇಹಿತ"
ಜಾರ ಚೋರ ಕೃಷ್ಣ : ಪ್ರಿಯ ಕಳ್ಳ ಕೃಷ್ಣ
ನಂದ : ಕೃಷ್ಣನ ಸಾಕು ತಂದೆ
ನಂದನ : ಮಗ
ನಂದನಂದನ : ಕೃಷ್ಣ
ನವನೀತ : ಬೆಣ್ಣೆ
ನವನೀತಚೋರ : ಬೆಣ್ಣೆ ಕಳ್ಳ
ಮಂದರೋದ್ಧಾರನೆ : ಕೂರ್ಮಾವತಾರಿ
: ಸಮುದ್ರ ಮಂಥನಕ್ಕಾಗಿ ಮಂದರ
ಪರ್ವತವನ್ನು ಎತ್ತಿದವನು
ಮಾಧವರಾಯ ರಾಮ –
ಮಾ : ರಮಾ
ಧವ : ಎಜಮಾನ
ರಾಮ : ಸುಂದರ
ಕಾಕು : ವ್ಯಂಗ್ಯ , ತಮಾಷೆ
ಪಳ್ಳಿ : ಹಳ್ಳಿ
ಕೊಳ್ಳೆ : ಕದ್ದು, ಕಳುವು
ಅನಂತಪದ್ಮನಾಭ :
ಅನಂತ : ಕೊನೆಯಿಲ್ಲದವ, ವಿಷ್ಣು
ಪದ್ಮ : ಕಮಲ
ನಾಭ : ಹೊಕ್ಕಳು
ಪದ್ಮನಾಭ : ಕಮಲನಾಭ
ಪದ್ಮನಾಭಃ ಪ್ರಜಾಪತಿಃ ಇತಿ:
ಹಿರಣ್ಯನಾಭಃ ಇತಿ : ಚಿನ್ನದ ಮೊಟ್ಟೆಯಂತಿರುವ ಕಮಲವನ್ನು ತನ್ನ ನಾಭಿಯಲ್ಲಿ ಹೊತ್ತವನು
ಯಾರ ನಾಭಿಯಿಂದ ಬ್ರಹ್ಮಾಂಡದ ಕಮಲವು
ಹೊರಹೊಮ್ಮಿತೋ ಅವನೇ ಪದ್ಮನಾಭ
ಋಗ್ವೇದದ ವಿಶ್ವಕರ್ಮಸೂಕ್ತದಲ್ಲಿ ...
ಅಜಸ್ಯ ನಾಮೌ ಅಧಿ ಏಕಮರ್ಪಿತಮ್
ಎಸ್ಮಿನ್ ವಿಶ್ವಃ ಭುವನಾನಿ ತಸ್ಥುಃ
ಅಜ : ಎಂದೂ ಹುಟ್ಟದವನು
ಎಂದೂ ಹುಟ್ಟದವನ ಹೊಕ್ಕಳಲ್ಲಿ ಒಂದು ಹುಟ್ಟಿತು ..
ಏನು ಹುಟ್ಟಿತು ? ಅದೇ ಬ್ರಹ್ಮಾಂಡ ..
ಆ ಒಂದರಲ್ಲಿ ಇಡೀ ವಿಶ್ವಾತ್ಮಕವಾದ ಕಮಲ ಒಳಗೊಂಡಿತ್ತು
ಪ್ರಳಯಕಾಲದಲ್ಲಿ ಹೊತ್ತವನೂ ನೀನೇ
ಈ ಬ್ರಹ್ಮಾಂಡವೆಂಬ ಕಮಲವನ್ನು ನಾಭಿಯಿಂದ ಹೆತ್ತವನೂ ನೀನೇ
ತ್ವಮೇವ ಮಾತಾ ಚ ಪಿತಾ ತ್ವಮೇವ
ಮಾತಾ ಚ ನಿರ್ಮಾತ
ಮಾತಾ ನರಸಿಂಹಶ್ಚ ಪಿತಾ ನರಸಿಂಹಃ
ಭ್ರಾತ ನರಸಿಂಹಶ್ಚ ಸಖಾ ನರಸಿಂಹಃ
ವಿದ್ಯಾ ನರಸಿಂಹಶ್ಚ ದ್ರವಿಣಂ ನರಸಿಂಹಃ
ಜಗತ್ತಿನ ತಾಯಿ ತಂದೆ
ಮೇಲೆ ಹೇಳಿರುವ ಎಲ್ಲವೂ ಪದ್ಮನಾಭ ಎಂಬ ಶಬ್ಧಕೆ ಮೂಲಾರ್ಥ
ಅಪ್ರಮೇಯ : ಅಳತೆಗೆ ಮೀರಿದ, ಪ್ರಮಾಣಗಳಿಗೆ ನಿಲುಕದವನು;ವಿಷ್ಣು ಪರಮಾತ್ಮ
ಹೃಷಿಕೇಶ : ಜ್ಞಾನೇಂದ್ರಿಯಗಳ ಒಡೆಯ, ವಿಷ್ಣು ಪರಮಾತ್ಮ
ಹೃಷೀಕ : ಜ್ಞಾನೇಂದ್ರಿಯಗಳು
ದಾನವಾಂತಕ : ರಾವಣನನ್ನು ಸಂಹರಿಸಿದವನು
ಭದ್ರಾಚಲಾಧೀಶ : ವನವಾಸದ ಸಮಯದಲ್ಲಿ ಭದ್ರಾಚಲವೆಂಬ ನಗರದಲ್ಲಿ ನೆಲೆಸಿದ್ದ ರಾಮ
**ಕಲಿಯುಗದಲ್ಲಿ ಹರಿನಾಮ ಸ್ಮರಣೆಯೊಂದೇ ಪರಮಮುಖ್ಯ ಸಾಧನ**
*** ಜೈ ಶ್ರೀರಾಮ್ ***
===================================================
Saahitya : Sri Purandaradaasaru Snigdha
Singer : Dyuthi Jahagirdhar & Snigdha Jahagirdhar
bArayya manege rangayya nInu || pa ||
bArayya manege bAlagopAla
jAra chora kRiShNa jAnaki pati rAma || a.pa ||
nandanandana navanItachora kRiShNa
mandaroddhArane mAdhavarAyara rAma || 1 ||
gokuladalli gopiyara kUDi
loka noDalavara kAku mADi || 2 ||
paLLipaLLiyoLella mosaru hAlu beNNe
koLLeyADi gopi muDiyanne piDida kRiShNa. || 3 ||
anaMtapadmanAbha aprameya hRiShikesha
dAnavAntaka ranga dasharatha putra rAma || 4 ||
paramapavitra rAma bhadrAchalAdhIsha
varada shrI purandara viTThalane rAma || 5 ||
*** Jai Sri Ram ***