ಸಾಹಿತ್ಯ : ಶ್ರೀ ಪುರಂದರದಾಸರು
ಗಾಯಕರು : ಶ್ರೀ ಬಾಲಮುರಳಿಕೃಷ್ಣ
ಧ್ವನಿಸುರಳಿಯ ಕೊಂಡಿ / Hear the song
ಅಲ್ಲಿ ನೋಡಲು ರಾಮ
ಇಲ್ಲಿ ನೋಡಲು ರಾಮ
ಎಲ್ಲೆಲ್ಲಿ ನೋಡಿದರಲ್ಲಿ ಶ್ರೀರಾಮ || ಪ ||
ರಾವಣನ ಮೂಲಬಲ ಕಂಡು ಕಪಿಸೇನೆ
ಆವಾಗಲೇ ಬೆದರಿ ಓಡಿದವು
ಈ ವೇಳೆ ನರನಾಗಿ ಇರಬಾರದೆಂದೆಣಿಸಿ
ದೇವ ರಾಮಚಂದ್ರ ಜಗವೆಲ್ಲ ತಾನಾದ || ೧ ||
ಅವನಿಗೆ ಇವ ರಾಮ ಇವನಿಗೆ ಅವ ರಾಮ
ಅವನಿಯೋಳ್ ಈ ಪರಿ ರೂಪ ಉಂಟೆ
ಲವಮಾತ್ರದಿ ಅಸುರ ದುರುಳರೆಲ್ಲರು
ಅವರವರೇ ಹೊಡೆದಾಡಿ ಹತರಾಗಿ ಪೋದರು || ೨ ||
ಹನುಮದಾದಿ ಸಾಧುಜನರು ಅಪ್ಪಿಕೊಂಡು
ಕುಣಿಕುಣಿದಾಡಿದರು ಹರುಷದಿಂದ
ಕ್ಷಣದಲಿ ಪುರಂದರ ವಿಠಲರಾಯನು
ಕೊನೆಗೊಡೆಯನು ತಾನೊಬ್ಬನಾಗಿ ನಿಂತ || ೩ ||
ಕ್ಲಿಷ್ಟ ಪದಗಳಾರ್ಥ:
ಲವ : ಅಲ್ಪ
ಮಾತ್ರ : ಕಾಲ
ಲವಮಾತ್ರದಿ : ಅಲ್ಪ ಕಾಲದಲ್ಲಿ
ದುರುಳ : ದುಷ್ಟ,ಕೆಟ್ಟ,ನೀಚ,ಪಾಪಿ,ಹಗೆ ಸಾಧಿಸುವ
**ಕಲಿಯುಗದಲ್ಲಿ ಹರಿನಾಮ ಸ್ಮರಣೆಯೊಂದೇ ಪರಮಮುಖ್ಯ ಸಾಧನ**
*** ಜೈ ಶ್ರೀರಾಮ್ ***
=================================================
Saahitya : Sri Purandaradaasaru
Singer : Sri Balamuralikrishna
alli noDalu rAma
illi noDalu rAma
ellelli noDidaralli shrIrAma || pa ||
rAvaNana mUlabala kanDu kapisene
AvAgale bedari oDidavu
I veLe naranAgi irabAradendeNisi
deva rAmachaMdra jagavella tAnAda || 1 ||
avanige iva rAma ivanige ava rAma
avaniyOL E pari rUpa unTe
lavamAtradi asura duruLarellaru
avaravare hoDedADi hatarAgi podaru || 2 ||
hanumAdadi sAdhujanaru appikonDu
kuNikuNidADidaru haruShadinda
kShaNadali purandara viThalarAyanu
konegoDeyanu tAnobbanAgi ninta || 3 ||
*** Jai Sri Ram ***