ಸಾಹಿತ್ಯ : ಶ್ರೀ ಪುರಂದರದಾಸರು
ಗಾಯಕರು : ಶ್ರೀಮತಿ ಸಂಗೀತಾ ಕಟ್ಟಿ
ಧ್ವನಿಸುರಳಿಯ ಕೊಂಡಿ / Hear the song
ರಾಮ ನಾಮ ಪಾಯಸಕ್ಕೆ, ಕೃಷ್ಣ ನಾಮ ಸಕ್ಕರೆ || ಪ ||
ವಿಠಲ ನಾಮ ತುಪ್ಪವ ಕಲೆಸಿ, ಬಾಯಿ ಚಪ್ಪರಿಸಿರೊ || ಅ.ಪ ||
ಒಮ್ಮನ ಗೋಧಿಯ ತಂದು, ವೈರಾಗ್ಯ ಕಲ್ಲಲಿ ಬೀಸಿ
ಸುಮ್ಮನೆ ಸಜ್ಜಿಗೆ ತೆಗೆದು, ಸಣ್ಣನೆ ಶಾವಿಗೆ ಹೊಸೆದು || ೧ ||
ಹೃದಯವೆಂಬ ಮಡಿಕೆಯಲ್ಲಿ, ಭಾವವೆಂಬ ಎಸರನಿಟ್ಟು
ಬುದ್ಧಿಯಿಂದ ಪಾಕ ಮಾಡಿ, ಹರಿವಾಣಕೆ ಬಡಿಸಿಕೊಂಡು || ೨ ||
ಆನಂದ ಆನಂದವೆಂಬೊ ಎರಡು ತೇಗು ಬಂದಾಗ
ಆನಂದ ಮೂರುತಿ ಪುರಂದರವಿಠಲನನ್ನು ನೆನೆಯಿರೊ || ೩ ||
ಕ್ಲಿಷ್ಟ ಪದಗಳಾರ್ಥ:
ಒಮ್ಮನ : ಏಕಚಿತ್ತವುಳ್ಳವರಾಗಿ
ಎಸರು : ಅಡಿಗೆಗಾಗಿ ಕುದಿಯಲಿಟ್ಟ ನೀರು
ಸಜ್ಜಿಗೆ : ರವೆ
===============================================
Saahitya : Sri Purandaradaasaru
Singer : Smt Sangeetha Katti
rAma nAma pAyasakke, kRiShNa nAma sakkare || pa ||
viThala nAma tuppava kalesi, bAyi chapparisiro || a.pa ||
ommana godhiya tandu, vairAgya kallali bIsi
summane sajjige tegdu, saNNane shAvige hosedu || 1 ||
hRudayaveMba maDikeyalli, bhAvavemba esaraniTTu
buddhiyinda pAka mADi, harivANake baDisikonDu || 2 ||
Ananda Anandavembo eraDu tegu bandAga
Ananda mUruti purandara viThalanannu neneyiro || 3 ||

*** Jai Sri Ram ***
No comments:
Post a Comment