Thursday, July 2, 2020

ರಾಮ ನಾಮ ಭಜಿಸಿದವಗೆ / Rama Naama Bhajisidavage

ಸಾಹಿತ್ಯ     : ಶ್ರೀ ಗೋಪಾಲದಾಸರು
ಗಾಯಕರು : ಶ್ರೀ ಬಿ..ನಾಗೇಂದ್ರ ಪ್ರಸಾದ್


ಧ್ವನಿಸುರಳಿಯ ಕೊಂಡಿ / Hear the song 


ರಾಮನಾಮ ಭಜಿಸಿದವಗೆ ಉಂಟೆ ಭವದ ಬಂಧನ                   || ||
ಕಾಮಹರನ ಸತಿಯು ಸದಾ ನೇಮದಿಂದ ಭಜಿಸುವ                 || ಅ. ||

ಶಿವನು ಧನ್ಯನಾದ ಮೌನಿ ಯುವತಿ ಪಾವನೆಯಾದಳು
ರವಿಯ ಸುತನು ಪದವಿ ಪಡೆದ, ಧ್ರುವನು ದಿವಿಜನೆನಿಸಿದ          || ||

ಕರಿವರ ಪ್ರಹ್ಲಾದ ದ್ರೌಪದಿ ವರವಿಭೀಷಣರೆಲ್ಲರೂ                      
ಹರಿಯ ಸ್ಮರಣೆ ಮಾಡಿ ಸುಖ ಭರಿತರಾಗಲಿಲ್ಲವೇ                     || ||

ಗಿರಿಜೆ ರಾಮ ಮಂತ್ರದಿಂದ ಪರಮ ಮಂಗಳೆಯಾದಳು
ವರದ ಗೋಪಾಲ ವಿಠಲ ನಾಮ ದುರಿತಕಾನನ ಪಾವಕ             || ||

ಭಾವಾರ್ಥ: 
ಕಾಮಹರನ ಸತಿಯು ಸದಾ ನೇಮದಿಂದ ಭಜಿಸುವ 
ಕಾಮ : ಮನ್ಮಥ
ಕಾಮಹರ : ಕಾಮನನ್ನು ಸಂಹರಿಸಿದ ಪರಮ ವೈರಾಗಿ : ಶಿವ
ಕಾಮಹರನ ಸತಿ : ಪಾರ್ವತಿ
ಪಾರ್ವತಿಯು ಶಿವನ ಪತ್ನಿಯಾದ್ದರಿಂದ, ಶಿವ ರಾಮದೇವರ ಉಪಾಸಕರಾದ್ದರಿಂದ, 
ಪಾರ್ವತಿಯೂ ಕೂಡ, ಶಿವನ ಅಂತರ್ಯಾಮಿ ರಾಮದೇವರ ಉಪಾಸಕರು

ಶಿವನು ಧನ್ಯನಾದ ಮೌನಿ, ಯುವತಿ ಪಾವನೆಯಾದಳು 
ಶಿವನು ಧನ್ಯನಾದ ಮೌನಿ : ರಾಮ ತಾರಕಮಂತ್ರದಿಂದ ಶಿವನಿಗೆ ಜ್ಞಾನ ಅಭಿವೃದ್ಧಿ ಆಯಿತು -
                                 - ಇನ್ನಷ್ಟು ಜ್ಞಾನಿ ಆದರು.. ಮೌನಿ-ಜ್ಞಾನಿ
                                   ಮೌನ ಅಂದರೆ ಮಾತಾಡದೆ ಇರುವುದು ರೂಢಿಯಲ್ಲಿರುವ ಅರ್ಥ -
                                 - ಮೌನ ಅಂದರೆ ಅಂತರ್ಮುಖಿ ಧ್ಯಾನ, ಭಗವಚ್ಚಿoತನೆ

ಯುವತಿ ಪಾವನೆಯಾದಳು :  ಅಹಲ್ಯದೇವಿ 
                                       ದಾಂಪತ್ಯ ದ್ರೋಹಕ್ಕಾಗಿ (ಇಂದ್ರನ ಮಾಯಾಜಾಲದಿಂದ) ,
                                       ತನ್ನ ಪತಿ ಮುನಿ ಗೌತಮರಿಂದ ಶಾಪಗ್ರಸ್ಥಳಾಗಿ ಶಿಲೆಯಾದ ನಂತರ,
                                       ತ್ರೇತಾಯುಗದಲ್ಲಿ ಪತಿಪಾವನ ಶ್ರೀರಾಮರಿಂದ, 
                                       ಶಾಪ ವಿಮೋಚನೆಗೊಂಡು ಅಹಲ್ಯಾದೇವಿ ಪಾವನೆಯಾಗುತ್ತಾಳೆ 
                                       
ಪತಿತಪಾವನ : ತಪ್ಪಿತಸ್ಥರನ್ನೂ ಕ್ಷಮಿಸುವ ಸಾಮರ್ಥ್ಯವಿರುವವನು : ಶ್ರೀರಾಮ  

ರವಿಯ ಸುತನು ಪದವಿ ಪಡೆದ, ಧ್ರುವನು ದಿವಿಜನೆನಿಸಿದ   
ರವಿಯ ಸುತನು ಪದವಿ ಪಡೆದ : ಸುಗ್ರೀವನು ರಾಮನ ಸೇವೆ ಮಾಡಿದ್ದರಿಂದ ಮೋಕ್ಷ ಪ್ರಾಪ್ತಿ ಆಯಿತು

ಧ್ರುವ   : ರಾಜ ಉತ್ತಾನಪಾದ ಮತ್ತು ರಾಣಿ ಸುನೀತಿಯ ಮಗ 
ದಿವಿಜ  : ದೇವತೆ
ಹರಿಯು ಬಾಲಕ ಧ್ರುವನ ದೃಢತೆ, ಹರಿಪ್ರೀತಿ, ಸತ್ವಗುಣಕ್ಕೆ ಪ್ರಸನ್ನನಾಗಿ, ಚಿರವಾದ ಧ್ರುವ ನಕ್ಷತನಾಗಿ ಕಂಗೊಳಿಸುವಂತಹ ದೈವತ್ವತೆಯನ್ನು ದಯಪಾಲಿಸುತ್ತಾನೆ, ಅಂದರೆ ಧ್ರುವ ದಿವಿಜನಾಗುತ್ತಾನೆ  

ಕರಿವರ : ಗಜೇಂದ್ರ ಮೋಕ್ಷ 

ಗಿರಿಜೆ ರಾಮ ಮಂತ್ರದಿಂದ ಪರಮ ಮಂಗಳೆಯಾದಳು
ಗಿರಿಜೆಯು ರಾಮ ಮಂತ್ರ ಉಪಾಸನೆ ಮಾಡಿದ್ದರಿಂದ ಶಿವನ ಜೊತೆ ವಿವಾಹವಾಯಿತು
-ಇದು ದಕ್ಷ ಯಜ್ಞದ ನಂತರ ನಡೆದದ್ದು 

ದುರಿತಕಾನನ : ಪಾಪವೆಂಬ ಕಾಡು 
ಪಾವಕ : ಬೆಂಕಿ, ಅಗ್ನಿ, ಕಾಡ್ಗಿಚ್ಚು 
ದುರಿತಕಾನನ ಪಾವಕ : ಸರ್ವಪಾಪ ನಿವಾರಕ, ತಾರಕ 
ತಾರಕ : ಸಂರಕ್ಷಿಸುವವನು, ದಾಟಿಸುವವನು

**ಕಲಿಯುಗದಲ್ಲಿ ಹರಿನಾಮ ಸ್ಮರಣೆಯೊಂದೇ ಪರಮಮುಖ್ಯ ಸಾಧನ**

========================================================

Saahitya  : Sri Gopala daasaru 
Singer      : Sri B.E.Nagendraprasad

rAmanAma bhajisidavage unTe bhavada bandhana             || pa ||
kAmaharana satiyu sadA nemadinda bhajisuva                     || a.pa ||

shivanu dhanyanAda mouni yuvati pAvaneyAdaLu
raviya sutanu padavi paDeda, dhruvanu divijanenisida      || 1 ||

karivara prahlAda draupadi varavibhIShaNarellarU
hariya smaraNe mADi sukha bharitarAgalillave                    || ||

girije rAma mantradinda parama mangaLeyAdaLu
varada gopAla viThala nAma duritakAnana pAvaka            || 3 ||

                                  ***  Jai Sri Ram ***

1 comment:

  1. ಸುಂದರ ಭಾವಾನುವಾದ..ಸುಂದರ ಸಂಗ್ರಹ..

    ಶುಭವಾಗಲಿ ಗಿರಿ!

    ReplyDelete