Thursday, February 21, 2013

ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ/Cheluveya andada mogake

ಸಾಹಿತ್ಯ: ಸಾಹಿತ್ಯ ರತ್ನ ಚಿ.ಉದಯಶಂಕರ್
ಗಾಯಕರು: ಎಸ್.ಪಿ.ಬಾಲಸುಬ್ರಮಣ್ಯಂ
ಚಲನಚಿತ್ರ: ದೇವರಗುಡಿ

ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ, ನಲಿಯುತ ಬಾಳುವ ಮನೆಗೆ ಹೆಣ್ಣೇ ಭೂಷಣ ।।।।
ಸುಖ ಸಂಸಾರಕೆ ಎಂದೂ ಸತಿಯೇ ಕಾರಣ
ಬಾನಿಗೆ ಎಂದೆಂದಿಗೂ ರವಿಯೇ ಭೂಷಣ, ಬಳುಕುವ ಲತೆಗೆ ಹೆಣ್ಣಿನ ಮುಡಿಗೆ ಹೂವೇ ಭೂಷಣ
ರಜನಿಗೆ ಎಂದೆಂದಿಗೂ ಶಶಿಯೇ ಭೂಷಣ,  ಅರಳಿದ ಮನಕೆ ಹವಳದ ತುಟಿಗೆ ನಗುವೇ ಭೂಷಣ
ನೋವಿಗೆ ನಲಿವಿಗೆ.......ನೋವಿಗೆ ನಲಿವಿಗೆ ಹೆಣ್ಣೇ ಕಾರಣ
ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ, ನಲಿಯುತ ಬಾಳುವ ಮನೆಗೆ ಹೆಣ್ಣೇ ಭೂಷಣ
ಸುಖ ಸಂಸಾರಕೆ ಎಂದೂ ಸತಿಯೇ ಕಾರಣ
ಮದುವೆಯ ಅನುಬಂಧವು ಎಂದೂ ಅಳಿಯದು, ಕೋಪದ ಕಿಡಿಗೆ, ರೋಷದ ಉರಿಗೆ ಒಲವು ಬಾಡದು
ದೇಹವು ದೂರಾದರು ಮನಸು ಮರೆಯದುಬೆರೆತಿಹ ಜೀವ ವಿರಹದ ನೋವ ಎಂದೂ ಸಹಿಸದು
ಒಲವಿನ ಜೀವನ .....ಒಲವಿನ ಜೀವನ ಸುಖಕೆ ಕಾರಣ
ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ, ನಲಿಯುತ ಬಾಳುವ ಮನೆಗೆ ಹೆಣ್ಣೇ ಭೂಷಣ
ಸುಖ ಸಂಸಾರಕೆ ಎಂದೂ ಸತಿಯೇ ಕಾರಣ

Monday, January 7, 2013

ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ/Baagilolu kai mugidu baa yaatrikane

ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ
ಸಾಹಿತ್ಯ: ರಾಷ್ಟ್ರಕವಿ ಕುವೆಂಪು  
ಗಾಯಕರು: ರಮ್ಯ ವಸಿಷ್ಠ, ಪಲ್ಲವಿ.ಎಂ.ಡಿ, ಹೇಮಂತ್, ಜಿ.ಜೆ.ಭರತ್
ಸಂಗೀತ ಸಂಯೋಜನೆ: ರಮ್ಯ ವಸಿಷ್ಠ

ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿಯು... ಕಲೆಯ ಬಲೆಯು ||2||
ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು, ಧನ್ಯತೆಯ ಕುಸುಮಗಳ ಅರ್ಪಿಸಿಲ್ಲಿ  
ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿಯು... ಕಲೆಯ ಬಲೆಯು

ಗಂಟೆಗಳ ದನಿಯಿಲ್ಲ, ಜಾಗಟೆಗಳಿಲ್ಲಿಲ್ಲ ||2||
ಕರ್ಪೂರದಾರತಿಯ ಜ್ಯೋತಿ ಇಲ್ಲ
ಗಂಟೆಗಳ ದನಿಯಿಲ್ಲ, ಜಾಗಟೆಗಳಿಲ್ಲಿಲ್ಲ, ಕರ್ಪೂರದಾರತಿಯ ಜ್ಯೋತಿ ಇಲ್ಲ
ಭಗವಂತನಾನಂದ .....
ಭಗವಂತನಾನಂದ ರೂಪುಗೊಂಡಿಹುದಿಲ್ಲಿ ರಸಿಕತೆಯ ಕಡಲುಕ್ಕಿ ಹರಿಹುದಿಲ್ಲಿ
ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿಯು... ಕಲೆಯ ಬಲೆಯು

{ ತತ್ತಿತ್ ತಕಣಕ ಝಂ, ತರಿಕಿಟತಕ ಝಂ, ತ ಝಂ
ತತ್, ತರಿಕಿಟ ತ, ದಣಕಿಟ ತ, ಝಣುಕಿಟ ತ, ಧಿಮಿಕಿಟತಕಧಿಂ ತಕಣಕ ಝಂ, ತರಿಕಿಟತಕ ಝಂ, ತ ಝಂ
ತತ್, ತರಿಕಿಟ ತ, ದಣಕಿಟ ತ, ಝಣುಕಿಟ ತ, ಧಿಮಿಕಿಟತಕಧಿಂ ತಕಣಕ ಝಂ, ತರಿಕಿಟತಕ ಝಂ, ತ ಝಂ
ತಕತತ್ತಿತ್ ತಕಣಕ ಝಂ, ತರಿಕಿಟತಕ ಝಂ, ತ ಝಂ, ತತ್ತಿತ್ ತಕಣಕ ಝಂ, ತರಿಕಿಟತಕ ತಕತ್ತಿತ್ ತಕಣಕ ಝಂ
ತರಿಕಿಟತಕ ತಧಿಂಕಿಣತು ತ, ತಕ ತಧಿಂಕಿಣತು ತಕ ತಧಿಂಕಿಣತು ತ, ತ ತಝಂ ತರಕಿಟತಂ, ತ ತಝಂ ತರಕಿಟತಂ, ತ ತಝಂ ತರಕಿಟತಂ }

ಸರಸದಿಂದುಲಿಯುತಿದೆ ಶಿಲೆಯು ರಾಮಾಯಣವನಿಲ್ಲಿ ......ಬಾದರಾಯಣನಂತೆ  ಭಾರತವ ಹಾಡುತಿಹುದಿಲ್ಲಿ 
ಸರಸದಿಂದುಲಿಯುತಿದೆ ಶಿಲೆಯು ರಾಮಾಯಣವನಿಲ್ಲಿ, ಬಾದರಾಯಣನಂತೆ  ಭಾರತವ ಹಾಡುತಿಹುದಿಲ್ಲಿ 
ಕುಶಲತೆಗೆ ಬೆರಗಾಗಿ ಮೂಕವಾಗಿದೆ ಕಾಲವಿಲ್ಲಿ ||2||
ಮೂರ್ಛೆಯಲಿ ಮೈಮರೆತು ತೇಲುವುದು ಭೂಭಾರವಿಲ್ಲಿ

Wednesday, December 19, 2012

ಹೋಗುವೆನುನಾ ಹೋಗುವೆನುನಾ ನನ್ನ ಒಲುಮೆಯ ಗೂಡಿಗೆ : Hoguvenuna Hoguvenuna nanna Olumeya Goodige

ಸಾಹಿತ್ಯ: ರಾಷ್ಟ್ರಕವಿ ಕುವೆಂಪು
ಗಾಯಕರು: ಹೇಮಂತ್
ಸಂಗೀತ ಸಂಯೋಜನೆ: ರಮ್ಯ ವಸಿಷ್ಠ



ಹೋಗುವೆನುನಾ ಹೋಗುವೆನುನಾ ಹೋಗುವೆನುನಾ ಹೋಗುವೆನುನಾ ನನ್ನ ಒಲುಮೆಯ ಗೂಡಿಗೆ
ಮಲೆಯ ನಾಡಿಗೆ, ಮಳೆಯ ಬೀಡಿಗೆ, ಸಿರಿಯ ಚೆಲುವಿನ ರೂಡಿಗೆ
ಹೋಗುವೆನುನಾ ಹೋಗುವೆನುನಾ ನನ್ನ ಒಲುಮೆಯ ಗೂಡಿಗೆ
ತಂದಾನಿತಾನಿನಾನಿ  ತಂದಾನಿತ್ತಾನ  ತಂದಾನಿತಾನಿನಾನಿ  ತಂದಾನಿತ್ತಾನ

ಬೇಸರಾಗಿದೆ ಬಯಲುಸೀಮೆಯ ಬೋಳು ಬಯಲಿನ  ಬಾಳಿದು
ಬಿಸುಲು ಬೇಸಿಗೆ ಬೀಸು ಉರಿಸೆಕೆ ತಾಳಲಾರದ ಗೋಳಿದು
ಹೋಗುವೆನುನಾ ಹೋಗುವೆನುನಾ ನನ್ನ ಒಲುಮೆಯ ಗೂಡಿಗೆ
ಬಿಳಿಯ ತಿಂಗಳ ಸಿರಿಬನಂಗಳ ಮಳೆಯ ಮಂಗಳ ನಾಡಿಗೆ
ಹೋಗುವೆನುನಾ ಹೋಗುವೆನುನಾ ನನ್ನ ಒಲುಮೆಯ ಗೂಡಿಗೆ

ಅಲ್ಲಿ ಇವೆ ಕಾಜಾಣ ಕೋಗಿಲೆ, ತೇನೆ ಗಿಳಿ ಕಾಮಳ್ಳಿಯು
ಕಂಪೆಸೆವ ಸೀತಾಳಿ ಕೇದಗೆ ಬಕುಳ ಮಲ್ಲಿಗೆ ಬಳ್ಳಿಯು
ನೀಲಿ ಬಾನಲಿ ಹಸಿರು ನೆಲದಲಿ ಕಂಗಳೆರಡನೆ ಬಲ್ಲವು
ಅಲ್ಲಿ ಸಕ್ಕರೆ ಸೂರೆ ಹೋಗಿದೆ ನಂದನವೆ ನಾಡೆಲ್ಲವು
ಹೋಗುವೆನುನಾ ಹೋಗುವೆನುನಾ ನನ್ನ ಒಲುಮೆಯ ಗೂಡಿಗೆ
ತಂದಾನಿತಾನಿನಾನಿ  ತಂದಾನಿತ್ತಾನ  ತಂದಾನಿತಾನಿನಾನಿ  ತಂದಾನಿತ್ತಾನ

ಅಲ್ಲಿಗೈದುವೆನಲ್ಲಿಗೈದುವೆ ನಿಲ್ಲಿ ಬೇಸರವಾಗಿದೆ ಕಾಡು ಮಲೆಗಳ ನಲೆವ ಹುಚ್ಚಿನ ಕಿಚ್ಚು ಹೃದಯದಿ ರೇಗಿದೆ || 2 ||
ಹೋಗುವೆನುನಾ ಹೋಗುವೆನುನಾ ನನ್ನ ಒಲುಮೆಯ ಗೂಡಿಗೆ
ಹಸಿರು ಸೊಂಪಿನ ಬಿಸಿಲು ತಂಪಿನ ಗಾನದಿಂಪಿನ ಗೂಡಿಗೆ

ಹೋಗುವೆನುನಾ ಹೋಗುವೆನುನಾ ಹೋಗುವೆನುನಾ ಹೋಗುವೆನುನಾ ನನ್ನ ಒಲುಮೆಯ ಗೂಡಿಗೆ,
ಮಲೆಯ ನಾಡಿಗೆ, ಮಳೆಯ ಬೀಡಿಗೆ, ಸಿರಿಯ ಚೆಲುವಿನ ರೂಡಿಗೆ
ಹೋಗುವೆನುನಾ ಹೋಗುವೆನುನಾ ಹೋಗುವೆನುನಾ ಹೋಗುವೆನುನಾ ನನ್ನ ಒಲುಮೆಯ ಗೂಡಿಗೆ
ತಂದಾನಿತಾನಿನಾನಿ  ತಂದಾನಿತ್ತಾನ  ತಂದಾನಿತಾನಿನಾನಿ  ತಂದಾನಿತ್ತಾನ ತಂದಾನಿತಾನಿನಾನಿ  ತಂದಾನಿತ್ತಾನ



Saturday, September 24, 2011

Hindustaanavu endu mareyada...Amrutaghalige

ಸಾಹಿತ್ಯ: ವಿಜಯನರಸಿಂಹ
ಗಾಯನ: ಪಿ.ಜಯಚಂದ್ರನ್
ಚಿತ್ರ: ಅಮೃತಘಳಿಗೆ

ಹಿಂದೂಸ್ಥಾನವು ಎಂದು ಮರೆಯದ ಭಾರತರತ್ನವು ಜನ್ಮಿಸಲಿ ||೨||
ಈ ಕನ್ನಡಮಾತೆಯ ಮಡಿಲಲ್ಲಿ, ಈ ಕನ್ನಡ ನುಡಿಯ ಗುಡಿಯಲ್ಲಿ
ಹಿಂದೂಸ್ಥಾನವು ಎಂದು ಮರೆಯದ ಭಾರತರತ್ನವು ಜನ್ಮಿಸಲಿ

ದೇಶ ಭಕ್ತಿಯ ಬಿಸಿಬಿಸಿ ನೆತ್ತರು ಧಮನಿಧಮನಿಯಲಿ ತುಂಬಿರಲಿ ||೨||
ವಿಶ್ವಪ್ರೇಮದ ಶಾಂತಿಮಂತ್ರದ ಘೋಶವ ಎಲ್ಲೆಡೆ ಮೊಳಗಿಸಲಿ
ಸಕಲ ಧರ್ಮದ ತತ್ವಸಮನ್ವಯ ತತ್ವಜ್ಯೋತಿಯ ಬೆಳಗಿಸಲಿ
ಹಿಂದೂಸ್ಥಾನವು ಎಂದು ಮರೆಯದ ಭಾರತರತ್ನವು ಜನ್ಮಿಸಲಿ

ಕನ್ನಡ ತಾಯಿಯ ಕೋಮಲ ಹೃದಯದ ಭವ್ಯ ಶಾಸನ ಬರೆಯಿಸಲಿ ||೨||
ಕನ್ನಡ ನಾಡಿನ ಎದೆದೆಯಲ್ಲೂ ಕನ್ನಡ ವಾಣಿಯ ಸ್ಥಾಪಿಸಲಿ
ಈ ಮಣ್ಣಿನ ಪುಣ್ಯದ ದಿವ್ಯ ಚರಿತ್ರೆಯ ಕಲ್ಲುಕಲ್ಲಿನಲಿ ಕೆತ್ತಿಸಲಿ
ಹಿಂದೂಸ್ಥಾನವು ಎಂದು ಮರೆಯದ ಭಾರತರತ್ನವು ಜನ್ಮಿಸಲಿ
ಈ ಕನ್ನಡಮಾತೆಯತಾಯಿಯಲಿ, ಈ ಕನ್ನಡ ನುಡಿಯ ಗುಡಿಯಲ್ಲಿ
ಹಿಂದೂಸ್ಥಾನವು ಎಂದು ಮರೆಯದ ಭಾರತರತ್ನವು ಜನ್ಮಿಸಲಿ

Haadu haadu haleyadaadarenu, Maanasa Sarovara

ಸಾಹಿತ್ಯ: ಶಿವರುದ್ರಪ್ಪ
ಗಾಯನ: ವಾಣಿ ಜಯರಾಂ
ಚಿತ್ರ: ಮಾನಸ ಸರೋವರ

ಹಾಡು ಹಾಡು ಹಾಡು ಹಳೆಯದಾದರೇನು ಭಾವ ನವನವೀನ ||೨||
ಎದೆಯ ಭಾವ ಹೊಮ್ಮುವುದಕೆ ಭಾಷೆ ಹೊರಟು ಯಾನ ||೨||

ಹಾಡು ಹಾಡು ಹಾಡು ಹಳೆಯದಾದರೇನು ಭಾವ ನವನವೀನ
ಎದೆಯ ಭಾವ ಹೊಮ್ಮುವುದಕೆ ಭಾಷೆ ಹೊರಟು ಯಾನ

ಹಳೆಯ ಹಾಡು ಮತ್ತೆ ಅದೇನೇ ಕೇಳಿ ತಣಿಯುವೆ ||೨||
ಹಳೆಯ ಹಾಡಿನಿಂದ ಹೊಸತು ಜೀವನ ಕಟ್ಟುವೆ ||೨||

ಹಮ್ಮು ಬಿಮ್ಮು ಒಂದೂ ಇಲ್ಲ ಹಾಡು ಹೃದಯ ತೆರೆದಿದೆ ||೨||
ಹಾಡಿನಲ್ಲಿ ಲೀನವಾಗಲೆನ್ನ ಮನವು ಕಾದಿದೆ ||೨||

ಹಾಡು ಹಾಡು ಹಾಡು ಹಳೆಯದಾದರೇನು ಭಾವ ನವನವೀನ
ಎದೆಯ ಭಾವ ಹೊಮ್ಮುವುದಕೆ ಭಾಷೆ ಹೊರಟು ಯಾನ
ಹಾಡು ಹಾಡು ಹಾಡು ಹಳೆಯದಾದರೇನು ಭಾವ ನವನವೀನ

ಕಣಕಣದೆ ಶಾರದೆ ಕಲೆತಿಹಳು ಕಾಣದೆ / Kanakanade Shaarade, Aaptamitra

ಸಾಹಿತ್ಯ: ಶ್ರೀ ಕವಿರಾಜ್
ಗಾಯಕರು: ಶ್ರೀ ಮಧು ಬಾಲಕೃಷ್ಣನ್
ಚಿತ್ರ: ಆಪ್ತಮಿತ್ರ















ಧ್ವನಿಸುರಳಿಯ ಕೊಂಡಿ / Hear the song 

ಕಣಕಣದೆ ಶಾರದೆ ಕಲೆತಿಹಳು ಕಾಣದೆ
ವನವನದಲ್ಲು ಕುಹುಕುಹು ಗಾನ
ಝಾರಿಝಾರಿಯಲ್ಲೂ ಝುಳುಝುಳು ಧ್ಯಾನ
ವಿದವಿದದಾ ನಾದ ಅವಳು ನುಡಿಸುತಿಹಳು
ಕಣಕಣದೆ ಶಾರದೆ ಕಲೆತಿಹಳು ಕಾಣದೆ

ಜನನಕು ಹಾಡು ಮರಣಕು ಹಾಡು ಲಾಲಿ ಚರಮಗಳು
ಪ್ರತಿ ಎದೆಯಾಳ ಧುಳು ಲಯ ತಾಳ ಗೀತೆ ಬದುಕಿನಲು
ಕೊರಳಿನಲಿ ಕೊಳಲಿನಲಿ ಚೆಲುವಿನಲಿ ಒಲವಿನಲಿ
ಒಲಿದು ನುಲಿದು ನಲಿದು ಹರಿದು ಬರುವುದು ಶ್ರುತಿ ಲಯವು
ಕಣಕಣದೆ ಶಾರದೆ ಕಲೆತಿಹಳು ಕಾಣದೆ

ಕುಲನೆಲದಾಚೆ ಅರಿಯುವ ಭಾಷೆ, ಒಂದೇ ಜಗದೊಳಗೆ
ಅವರಿವರಿಲ್ಲ ಸರಿಸಮರಿಲ್ಲ ಸಪ್ತ ಸ್ವರಗಳಿಗೆ
ನಿಪಮಪನಿ ಸನಿಪನಿಸ ಗಸನಿಸಗಾ ಮಪಮಪಗಾ
ನಿಪಮಪನಿ ಸನಿಪನಿಸ ಗಸನಿಸಗಾ ಆ ಆ ಆ ಆ

ಕಣಕಣದೆ ಶಾರದೆ ಕಲೆತಿಹಳು ಕಾಣದೆ
ವನವನದಲ್ಲು ಕುಹುಕುಹು ಗಾನ
ಝಾರಿಝಾರಿಯಲ್ಲೂ ಝುಳುಝುಳು ಧ್ಯಾನ
ವಿದವಿದದಾ ನಾದ ಅವಳು ನುಡಿಸುತಿಹಳು
ಕಣಕಣದೆ ಶಾರದೆ ಕಲೆತಿಹಳು ಕಾಣದೆ

Friday, March 25, 2011

Sneha ati madhura

ಸಾಹಿತ್ಯ: ನಾ.ಕೃ.ನಾರಾಯಣ
ಗಾಯಕರು: ರಾಜೇಶ್ ಕೃಷ್ಣನ್

ಸ್ನೇಹ ಅತಿ ಮಧುರ, ಸ್ನೇಹ ಅದು ಅಮರ ||೨||
ಸ್ನೇಹವೇ ಗುಡಿಯು, ಪ್ರೀತಿಯೇ ದೇವರು
ಕಾಲ ದೇಶ ಮೀರಿದ ಭಾವ
ಸ್ನೇಹ ಅತಿ ಮಧುರ

ಸ್ನೇಹಕೆ ವಯಸಿನ ಅಂತರವಿಲ್ಲ, ಸಿರಿತನ ಬಡತನ ಸೀಮೆಗಳಿಲ್ಲ ||೨||
ಸ್ನೇಹಕೆ ಸ್ವಾರ್ಥದ ಆಸೆಗಳಿಲ್ಲ, ಸಮತೆ ಮಮತೆ ಸ್ನೇಹದ ಗಾನ
ಸ್ನೇಹ ಅತಿ ಮಧುರ

ಓಡುವ ನದಿಗೆ ಮೋಡದ ಸ್ನೇಹ, ಅರುಳುವ ಹೂವಿಗೆ ಕಿರಣದ ಸ್ನೇಹ ||೨||
ಬಂಗಾರದ ಶಶಿಗೆ ಸಾಗರದ ಸ್ನೇಹ, ಒಲವು ನಲಿವು ಸ್ನೇಹದ ಚೆಲುವು
ಸ್ನೇಹ ಅತಿ ಮಧುರ

ಲೋಕದ ಜೀವನ ಸ್ನೇಹದ ಬಂಧನ, ಪಾವನ ಪ್ರೇಮ ಸ್ನೇಹದ ಸ್ಪಂದನ ||೨||
ಸ್ನೇಹವ ಬಯಸದ ಜನರೆಲ್ಲಿಹರು, ಹಾಲು ಜೇನು ಸ್ನೇಹದ ಸಂಗಮ

ಸ್ನೇಹ ಅತಿ ಮಧುರ, ಸ್ನೇಹ ಅದು ಅಮರ ||೨||
ಸ್ನೇಹವೇ ಗುಡಿಯು, ಪ್ರೀತಿಯೇ ದೇವರು
ಕಾಲ ದೇಶ ಮೀರಿದ ಭಾವ
ಸ್ನೇಹ ಅತಿ ಮಧುರ