ಸಾಹಿತ್ಯ : ಶ್ರೀ ಪುರಂದರದಾಸರು
ಗಾಯಕರು : ಶ್ರೀ ಸುಧೀರ್ ಕೇಶವ್
ಗಾಯಕರು : ಶ್ರೀ ಸುಧೀರ್ ಕೇಶವ್
ಧ್ವನಿಸುರಳಿಯ ಕೊಂಡಿ / Hear the song
ಗೆದ್ಯೊ ಹನುಮಂತ ಅಸುರರ ವದ್ಯೊ ಬಲವಂತ
|| ಪ ||
ಬದ್ಧಾಂಜಲಿಯಿಂದ ರಘುಪತಿ ಪಾದವ,
ಹೃದದಿ ಭಜನೆ ಮಾಡುವ ಬುದ್ಧಿವಂತ
|| ಅ.ಪ ||
ಅಂಜನ ಸುತನೀತನು ಲಂಕಾಪುರದಿ ಅಕ್ಷಯನ ಕೊಂದಾತನು
ಕಂಜಾಕ್ಷಿ ಸೀತೆಯನು ಕಂಡು ಮುದ್ರಿಕೆಯಿಟ್ಟು
ಮಂಜುಳ ವಾರ್ತೆಯ ತಂದ್ಯೊ ಬುದ್ಧಿವಂತ
|| ೧ ||
ಈರೇಳು ಲೋಕದೊಳು ಇನ್ನು ಮತ್ತೆ ಯಾರು ಸರಿ ನಿನಗೆ
ವೀರ ಮಹಾಬಲ ಶೂರ ಪರಾಕ್ರಮ
ಧೀರ ಸಮೀರ ಉದಾರ ಗಂಭೀರ
|| ೨ ||
ವಾಂಛಿತ ಫಲವೀವನಾಥ ಮುಖ್ಯಪ್ರಾಣ ಮಹಾನುಭಾವ
ಕಿಂಚಿತ್ ಕಷ್ಟವ ಪಡಲಿಸ ಭಕ್ತಗೆ
ಪಾಂಚಜನ್ಯ ಥರ ಪುರಂದರವಿಠಲ
|| ೩ ||
ಗೆದ್ಯೊ ಹನುಮಂತ ಬಲವಂತ ಧೀಮಂತ
ಪದಗಳಾರ್ಥ:
ಬದ್ಧಾಂಜಲಿ : ಮುಗಿದ ಕೈ, ಜೋಡಿಸಿದ ಕೈ
ಅಕ್ಷಯ : ರಾವಣನ ಮಗ - ಅಕ್ಷಯ ಕುಮಾರ
ಅಕ್ಷಯ : ರಾವಣನ ಮಗ - ಅಕ್ಷಯ ಕುಮಾರ
ಈರೇಳು ಲೋಕ : ೧೪ ಲೋಕಗಳು
ವಾಂಛಿತ : ಅಪೇಕ್ಷಿಸಿದ್ದು
ಪಾಂಚಜನ್ಯ : ವಿಷ್ಣುವಿನ ಶಂಖ
ಕಂಜಾಕ್ಷಿ : ಕಮಲದಳದಂತಹ ಕಣ್ಣುಳ್ಳ
ವಾಂಛಿತ : ಅಪೇಕ್ಷಿಸಿದ್ದು
ಪಾಂಚಜನ್ಯ : ವಿಷ್ಣುವಿನ ಶಂಖ
ಕಂಜಾಕ್ಷಿ : ಕಮಲದಳದಂತಹ ಕಣ್ಣುಳ್ಳ
--------------------------------------------------------------------------------
Saahitya : Sri Purandaradaasaru
Singer : Sri Sudheer Keshav
gedyo hanumanta asurara vadyo balavanta || pa ||
baddhAnjaliyinda raghupati pAdava,
hRRidadi bhajane mADuva buddhivanta || a.pa ||
anjana sutanItanu lankApuradi akShayana kondAtanu
kanjAkShi sItyanu kanDu mudrikeyiTTu
manjuLa vArteya tandyo buddhivanta || 1 ||
IreLu lokadoLu innu matte yAru sari ninage
vIra mahAbala shUra parAkrama
dhIra samIra udAra gaMbhIra || 2 ||
vAnChita falavIvanAtha mukhyaprANa mahAnubhAva
kinchit kaShTava paDalisa bhaktage
pAnchajanya thara purandaraviThala || 3 ||
gedyo hanumanta balavanta dhImanta
Ee hadu heli kottiruva nanna divangata gurugalaada Shri Gudibande Kumaraswamy Avarige nanna koti namanagalu
ReplyDelete