ಸಾಹಿತ್ಯ : ಶ್ರೀ ಪುರಂದರದಾಸರು
ಗಾಯಕರು : ಭಾರತರತ್ನ ಶ್ರೀಮತಿ ಎಂ.ಎಸ್.ಸುಬ್ಬಲಕ್ಷ್ಮೀ
ಧ್ವನಿಸುರಳಿಯ ಕೊಂಡಿ / Hear the song ಗಾಯಕರು : ಭಾರತರತ್ನ ಶ್ರೀಮತಿ ಎಂ.ಎಸ್.ಸುಬ್ಬಲಕ್ಷ್ಮೀ
ನಾರಾಯಣ ನಿನ್ನ ನಾಮದ ಸ್ಮರಣೆಯ || ಪ ||
ಸಾರಾಮೃತವು ಎನ್ನ ನಾಲಿಗೆಗೆ ಬರಲಿ || ಅ. ಪ ||
ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ
ಎಷ್ಟಾದರೂ ಮತಿಗೆಟ್ಟು ಇರಲಿ
ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ
ಅಷ್ಟಾಕ್ಷರ ಮಹಾ ಮಂತ್ರದ ನಾಮವ || ೧ ||
ಸಂತತ ಹರಿ ನಿನ್ನ ಸಾಸಿರದ ನಾಮವ
ಅಂತರಂಗದಲ್ಲಿ ಇರಿಸಿ
ಎಂತೋ ಪುರಂದರ ವಿಠಲ ರಾಯನ
ಅಂತ್ಯ ಕಾಲದಲ್ಲಿ ಚಿಂತಿಸೋ ಹಾಗೆ || ೨ ||
---------------------------------------------------
Saathiya : Sri Purandaradaasaru
Singer : Bharata Ratna Smt. MS Subbalakshmi
nArAyaNa ninna nAmada smaraNeya || pa ||
sArAmrutavu enna nAligege barali || a.pa ||
kashTadallirali utkrushTa-dallirali
eshTAdarU matigeTTu irali
krishNa krishNa endu shiShTaru pELuva
ashTAkshara mahA mantrada nAmava ||1||
santata hari ninna sAsirada nAmava
antarangadalli irisi
entO purandara viTala rAyana
antya kAladalli chintisO hAge ||2||
No comments:
Post a Comment