ಸಾಹಿತ್ಯ : ಶ್ರೀ ಪುರಂದರದಾಸರು
ಗಾಯಕರು : ಶ್ರೀಮತಿ ಶ್ರೀನಿತ್ಯ ರವಿಚಂದ್ರನ್
: ಶ್ರೀ ಆರ್.ಕೆ. ಶ್ರೀಕಂಠನ್
ಗಾಯಕರು : ಶ್ರೀಮತಿ ಶ್ರೀನಿತ್ಯ ರವಿಚಂದ್ರನ್
: ಶ್ರೀ ಆರ್.ಕೆ. ಶ್ರೀಕಂಠನ್
ನಂದ ತನಯ ಗೋವಿಂದನ ಭಜಿಪುದಾನಂದವಾದ ಮಿಠಾಯಿ ||ಪ||
ಬಂಧಗಳನು ಭವರೋಗಗಳೆಲ್ಲನು ನಿಂದಿಪುದೀ ಮಿಠಾಯಿ ||ಅ.ಪ||
ದಧಿಘೃತಕ್ಷೀರಂಗಳಿಗಿಂತಲೂ ಬಹು ಅಧಿಕವಾದ ಮಿಠಾಯಿ
ಕದಳೀದ್ರಾಕ್ಷಿಖರ್ಜೂರ ರಸಗಳನು ಮೀರುವುದೀ ಮಿಠಾಯಿ ||೧||
ಪಂಚ ಭಕ್ಷ್ಯಗಳ ಷಡ್ರಸಾನ್ನಗಳ ಮಿಂಚಿಪುದೀ ಮಿಠಾಯಿ
ಕಂಚೀಶನೆ ರಕ್ಷಿಸು ಎಂದುಸುರುವರ ಅಂಜಿಕೆ ಬಿಡಿಪ ಮಿಠಾಯಿ ||೨||
ಜಪತಪಸಾಧನಗಳಿಗಿಂತಲೂ ಬಹು ಅಪರೂಪದ ಮಿಠಾಯಿ
ಜಿಪುಣ ಮತಿಗಳಿಗೆ ಸಾಧ್ಯವಲ್ಲದಿಹ ಪುರಂದರವಿಠಲ ಮಿಠಾಯಿ ||೩||
ಪದಗಳಾರ್ಥ:
ದಧಿ : ಮೊಸರು
ಘೃತ : ತುಪ್ಪ
ಕದಳೀ : ಬಾಳೆ
ಎಂದುಸುರು : ಎಂದು+ಉಸುರು
ಉಸುರು (ಕ್ರಿ) : ಹೇಳು,ನುಡಿ,ಉಚ್ಚರಿಸು
===============================================
Saathiya : Sri Purandaradaasaru
Singers : Srinithya Ravinchandran & R.K.Venkatesan
nanda tanaya govindana
bhajipudaanandavada mithayi ||pa||
bandhagalanu bhavarogagaLelllanu
nindipudi mithayi ||a.pa||
dadhighrutaksheerangaligintalu
bahu adhikavaada mithayi
kadalidraakshikharjura
rasagalanu meeruvudi mithayi ||1||
pancha bhakshyagala shadrasaannagala
minchipudi mithayi
kanchishane rakshisu endusuruvara anjike bidipa mithayi ||2||
japatapasadhanagaligintalu
bahu aparupada mithayi
jipuna matigalige saadhyavalladiha
purandaravithala mithayi ||3||
No comments:
Post a Comment