ಸಾಹಿತ್ಯ : ಶ್ರೀ ಪ್ರಸನ್ನ ವೆಂಕಟದಾಸರು
ಗಾಯಕರು : ಶ್ರೀ ವಿದ್ಯಾಭೂಷಣರು
ಧ್ವನಿಸುರಳಿಯ ಕೊಂಡಿ / Hear the song
ಗಾನಕೆ ಸುಲಭವು ರಾಮ ನಾಮವು
ಗಾನಕೆ ಅತಿ ಸುಲಭ ರಾಮ || ಪ ||
ರಾಮ್ ರಾಮ್ ಜೈ ಜೈ ರಾಮ್
ರಾಮ್ ರಾಮ್ ಶ್ರೀರಾಮ್ ಶ್ರೀರಾಮ್ || ಅ.ಪ ||
ದೀನ ಜನಕೆ ಬಲು ಸಾನುರಾಗನಾದ
ಜಾನಕಿನಾಥನ ದಿವ್ಯನಾಮವು
ತಾಳ ತಂಬೂರಿ ಮೃದಂಗಗಳಿಂದಲಿ
ಪೇಳುವರಿಗೆ ರಘು ಮೌಳಿಯ ನಾಮವು || ೧ ||
ಘೋರ ಕಲುಶಗಳ ಪಾರಗಾಣಿಸಿ
ಮನ ಕೋರಿಕೆಗಳನೀವ ತಾರಕ ನಾಮವು
ತಾಪಸ ಸತಿಯಳ ಶಾಪವ ಬಿಡಿಸಿದ
ಭೂಪ ದಾಶರಥಿಯ ದಿವ್ಯ ನಾಮವು || ೨ ||
ಲಂಕೆಯ ಪೊಕ್ಕು ನಿಶಾಚರರನೇ ಕೊಂದು
ಪಂಕಜಾಕ್ಷಿಯ ಆತಂಕ ಕಳೆದ ನಾಮ
ಎನ್ನವರೆಲ್ಲರು ಬನ್ನಿರಿ ಎನ್ನುತ
ತನ್ನೊಡನೊಯ್ದ ಪ್ರಸನ್ನ ರಾಮನ ನಾಮ || ೩ ||
ಭಾವಾರ್ಥ :
ಸಾನುರಾಗನು : ಅನುರಾಗ / ಪ್ರೀತಿ ತೋರುವವನು
ಜಾನಕಿನಾಥ : ಸೀತೆಯ ಪತಿ, ಶ್ರೀ ರಾಮ
ಮೌಳಿ : ಕಿರೀಟ, ಮುಕುಟ
ರಘುಮೌಳಿ : ರಘುಕುಲ ಮುಕುಟ
ಪಾರಗಾಣಿಸಿ : ಮುಗಿಸಿ, ಕೊನೆ ಮುಟ್ಟಿಸಿ
ತಾರಕ ನಾಮ : ಮೋಕ್ಷದಾಯಕವಾದ ಮಂತ್ರ
ತಾಪಸ : ಋಷಿ, ಮುನಿ
ತಾಪಸ ಸತಿ : ಮುನಿ ಗೌತಮರ ಸತಿ : ಅಹಲ್ಯಾದೇವಿ
ದಾಶರಥಿ : ರಾಜ ದಶರಥನ ಮಗ, ಶ್ರೀ ರಾಮ
ಪೊಕ್ಕು : ಹೋಗಿ
ನಿಶಾಚರರು : ರಾಕ್ಷಸರು
ಪಂಕಜಾಕ್ಷಿ : ತಾವರೆದಲದಂಥ ಕಣ್ಣುಗಳುಳ್ಳವಳು : ಸೀತಾಮಾತೆ
ಎನ್ನವರೆಲ್ಲರು ಬನ್ನಿರಿ ಎನ್ನುತ ತನ್ನೊಡನೊಯ್ದ :
ಶ್ರೀ ರಾಮದೇವರು ಪರಂಧಾಮಕ್ಕೆ ತೆರಳುವಾಗ, ನನ್ನ ಜೊತೆ ಯಾರು ಬೇಕಾದರೂ ಬರಬಹುದು ಅಂದರು.. ಆಗ ಸಾಕಷ್ಟು ಜನ ಹೋದರು ಮುಕ್ತಿಗೆ.. ಇದು ರಾಮಾಯಣದ ಕೊನೆಯಲ್ಲಿ ನಡೆದದ್ದು..
ಪರಂಧಾಮ : ವೈಕುಂಠ
**ಕಲಿಯುಗದಲ್ಲಿ ಹರಿನಾಮ ಸ್ಮರಣೆಯೊಂದೇ ಪರಮಮುಖ್ಯ ಸಾಧನ**
*** ಜೈ ಶ್ರೀರಾಮ್ ***
Saahitya : Sri Prasanna Venkatadaasaru
Singer : Sri Vidyabhushanaru
gAnake sulabhavu rAma nAmavu
gAnake ati sulabha rAma || pa ||
rAm rAm jai jai rAm
rAm rAm shrIrAm shrIrAm || a.pa ||
dIna janake balu sAnurAganAda
jAnaki nAthana divya nAmavu
tALa taMbUri mRidangagaLindali
peLuvarige raghu mauLiya nAmavu || 1 ||
ghora kalushagaLa pAragANisi
mana korikegaLanIva tAraka nAmavu
tApasa satiyaLa shApava biDisida
bhUpa dAsharathiya divya nAmavu || 2 ||
lankeya pokku nishAchararane kondu
pankajAkShiya Atanka kaLeda nAma
ennavarellaru banniri ennuta
tannoDanoyda prasanna rAmana nAma || 3 ||
*** Jai Sri Ram ***
ನಿನ್ನ ಪ್ರಯತ್ನ ಸಂಗೀತ ಆಸಕ್ತರಿಗೆ ತಲುಪಿ ಯಶಸ್ವಿಯಾಗಲಿ ಎಂದು ಹಾರೈಸುತ್ತೀನಿ
ReplyDeleteಹೃದಯಪೂರ್ವಕ ಧನ್ಯವಾದಗಳು ಶ್ರೀ...
Deleteಹಾಡಿನೊಂದಿಗೆ ಭಾವಾರ್ಥವನ್ನೂ ಹಾಕಿ ಒಳ್ಳೆಯ ಕೆಲಸ ಮಾಡಿದ್ದೀರಿ.
ReplyDelete