ಸಾಹಿತ್ಯ : ಶ್ರೀ ಮಹಿಪತಿದಾಸರು
ಗಾಯಕರು : ಶ್ರೀ ವಿದ್ಯಾಭೂಷಣರು
ಶ್ರೀ ರಾಮ ರಾಮ || ಪ ||
ಜಯ ಜಯಾತ್ಮಾರಾಮ
ದಯ ಗುಣದಿ ನಿಸ್ಸೀಮ
ಮಾಯಾರಹಿತನುಪಮ
ಕಾಯೌ ಕೃಪಾನಿಧಿ ನಮ್ಮ || ೧ ||
ಮುನಿಜನರ ಪ್ರತಿಪಾಲ
ದೀನಬಂಧು ದಯಾಳ
ಘನಸುಖದ ಕಲ್ಲೋಳ
ನೀನಹುದೈ ಅಚಲ || ೨ ||
ಕರುಣಾಬ್ಧಿ ನೀನೆ ರಾಮ
ಹರಹೃದಯ ವಿಶ್ರಾಮ
ತರಳ ಮಹಿಪತಿ ನಿಮ್ಮ
ಸ್ಮರಿಸುವ ಪಾದ ಪದ್ಮ || ೩ ||
ಭಾವಾರ್ಥ :
ಆತ್ಮಾರಾಮ : ಸ್ವರೂಪಾನಂದಾವಿರ್ಭಾವ ಸದಾ ಉಳ್ಳವನು
ಸ್ವರೂಪ + ಆನಂದ + ಆವಿರ್ಭಾವ
ಸ್ವರೂಪ : ಸುಂದರವಾದ
ಆವಿರ್ಭಾವ : ಹುಟ್ಟುವುದು, ಪ್ರಕಟವಾಗುವುದು
ಜಯಾತ್ಮಾರಾಮ : ಆತ್ಮಾರಾಮನಿಗೆ ಜಯವಾಗಲಿ
ಕೃಪಾನಿಧಿ : ದಯಾಸಾಗರ : ವಿಷ್ಣು
ಮಾಯಾ : ಮೋಹ, ದೋಷ
ಅನುಪಮ : ಉಪಮೆ ಇಲ್ಲದವ, ಸರಿಸಮರಿಲ್ಲದವ
ಮಾಯಾರಹಿತನುಪಮ : ಸರಿಸಮರಿಲ್ಲದ ದೋಷರಹಿತನು
ಕಾಯೌ : ಕಾಪಾಡು
ಪ್ರತಿಪಾಲ : ಕಾಪಾಡುವವನು
ಘನಸುಖ : ದುಃಖ ರಹಿತ
ಕಲ್ಲೋಳ : ಪ್ರವಾಹ, ಅಲೆ, ತೆರೆ, ತರಂಗ
ಘನಸುಖದ ಕಲ್ಲೋಳ : ದುಃಖದ ಲೇಪವೇ ಇಲ್ಲದ, ಆನಂದ-ಪ್ರವಾಹ ಪರಿಪೂರ್ಣ ನು
ನೀನಹುದೈ : ನೀನು ಅಹುದು
ಅಚಲ : ತಲ್ಲಣಗೊಳ್ಳದವನು
ಅಬ್ಧಿ : ಸಾಗರ
ಕರುಣಾಬ್ಧಿ : ಕರುಣಾಸಾಗರ
ಹರಹೃದಯ ವಿಶ್ರಾಮ : ಶಿವನ ಹೃದಯಮಂದಿರದೊಳು ನೆಲಸಿರುವವನು ಶ್ರೀರಾಮ
ಹಾಗೆಯೇ ಶ್ರೀರಾಮನ ಹೃದಯಮಂದಿರದೊಳು ನೆಲಸಿರುವವನು ಶಿವ
ತರಳ : ಬಾಲಕ, ಹುಡುಗ
ತರಳ ಮಹಿಪತಿ ಸ್ಮರಿಸುವ ಪಾದ ಪದ್ಮ : ಬಾಲಕ, ಅತಿ ಅಲ್ಪನಾದ ಮಹಿಪತಿಯು
ನಿಮ್ಮ ಪಾದ ಕಮಲಗಳನ್ನು ಸ್ಮರಿಸುತ್ತೇನೆ
=========================================================
Saahitya : Sri Mahipatidaasaru
Singer : Sri Vidyabhushanaru
shrI rAma rAma || pa ||
jaya jayAtmaa rAma
daya guNadi nissIma
mAyArahitanupama
kAyau kRupAnidhi namma || 1 ||
munijanara pratipAla
dIna bandhu dayALa
dhana sukhada kalloLa
nInahudai achala || 2 ||
karuNAbdhi nIne rAma
harahRudaya vishrAma
taraLa mahipati nimma
smarisuva pAda Padma || 3 ||
*** Jai Sri Ram ***
sundara efforts Giri..keep going
ReplyDelete