Monday, August 3, 2020

ರಾಮ : ಜಯ ಜಾನಕಿ ಕಾಂತ / Rama : Jaya Janaki Kantha

ಸಾಹಿತ್ಯ     : ಶ್ರೀ ಪುರಂದರದಾಸರು 
ಗಾಯಕರು : ಶ್ರೀ ವಿದ್ಯಾಭೂಷಣರು   

ಧ್ವನಿಸುರಳಿಯ ಕೊಂಡಿ / Hear the song                    
                                         
ಜಯ ಜಾನಕಿ ಕಾಂತ ಜಯ ಸಾಧುಜನ ವಿನುತ
ಜಯತು ಮಹಿಮಾನಂತ ಜಯ ಭಾಗ್ಯವಂತ            ||ಪ||

ದಶರಥಾತ್ಮಜ ವೀರ ದಶಕಂಠ ಸಂಹಾರ 
ಪಶುಪತೀಶ್ವರ ಮಿತ್ರ ಪಾವನ ಚರಿತ್ರ
ಕುಸುಮ ಬಾಣ ಸ್ವರೂಪ ಕುಶಲ ಕೀರ್ತಿ ಕಲಾಪ 
ಅಸಮ ಸಾಹಸ ಶಿಕ್ಷ ಅಂಬುಜದಳಾಕ್ಷ                    ||೧||

ಸಾಮಗಾನ ವಿಲೋಲ ಸಾಧುಜನ ಪರಿಪಾಲ 
ಕಾಮಿತಾರ್ಥ ಪ್ರದಾತ ಕೀರ್ತಿ ಸಂಜಾತ
ಸೋಮ ಸೂರ್ಯ ಪ್ರಕಾಶ ಸಕಲ ಲೋಕಾಧೀಶ 
ಶ್ರೀ ಮಹಾ ರಘುವೀರ ಸಿಂಧು ಗಂಭೀರ                   ||೨||

ಸಕಲ ಶಾಸ್ತ್ರ ವಿಚಾರ ಶರಣಜನ ಮಂದಾರ 
ವಿಕಸಿತಾಂಬುಜ ವದನ ವಿಶ್ವಮಯ ಸದನ
ಸುಕೃತ ಮೋಕ್ಷಾಧೀಶ ಸಾಕೇತ ಪುರವಾಸ 
ಭಕುತವತ್ಸಲ ರಾಮ ಪುರಂದರ ವಿಠಲ                  ||೩||

ಭಾವಾರ್ಥ:

ಜಾನಕಿ                   : ಸೀತಾಮಾತೆ

ಕಾಂತ                   : ಪತಿ, ನಂದನ

ಜಾನಕಿ ಕಾಂತ         : ಶ್ರೀ ರಾಮ

ಜಯ ಜಾನಕಿ ಕಾಂತ : ಶ್ರೀ ರಾಮನಿಗೆ ಜಯವಾಗಲಿ

ಸಾಧುಜನ ವಿನುತ    : ಮುನಿವೃಂದದಿಂದ ಸ್ತುತಿಸಲ್ಪಡುವವನು

ಮಹಿಮಾನಂತ        : ಮಹಿಮ + ಅನಂತ

                            : ಎಣಿಕೆಯಿಲ್ಲದ ಹಿರಿಮೆಯುಳ್ಳವನು

ದಶರಥಾತ್ಮಜ ವೀರ

ದಶರಥಾತ್ಮಜ = ದಶರಥ + ಆತ್ಮಜ : ಶ್ರೀ ರಾಮ

ಆತ್ಮಜ : ಮಗ

ದಶರಥಾತ್ಮಜ ವೀರ  : ವೀರ ಶ್ರೀರಾಮ

ದಶಕಂಠ ಸಂಹಾರ   : ರಾವಣನನ್ನು ವಧಿಸಿದವನು

ಪಶುಪತೀಶ್ವರ ಮಿತ್ರ  : ರುದ್ರದೇವರ; ಶಿವನ ಆಪ್ತಮಿತ್ರ

ಪಾವನ ಚರಿತ್ರ         : ನಿಷ್ಕಲ್ಮಶ, ನಿಷ್ಕಳಂಕ ಸ್ವಭಾವದ ಚಾರಿತ್ರ್ಯವುಳ್ಳವನು

ಚಾರಿತ್ರ್ಯ                 : ನಡತೆ, ಜೀವನಕಥೆ;ಇತಿಹಾಸ

ಕುಸುಮ ಬಾಣ ಸ್ವರೂಪ :

ಅತಿಸುಂದರ ಜಗನ್ಮೋಹಕ ರೂಪ; ಮನ್ಮಥನಿಗೂ ಸುಂದರತ್ವ ಕೊಟ್ಟ ಅವನ ಬಿಂಬ ಮೂರುತಿ

ಕುಶಲ ಕೀರ್ತಿ ಕಲಾಪ  :

ವಿಶೇಷವಾದ, ನಿರ್ದುಷ್ಟ ಕೀರ್ತಿಯ ಇತಿಹಾಸ/ಚರಿತ್ರೆ ಉಳ್ಳವನು

ಕಲಾಪ                    : ಕಥೆ, ಚರಿತ್ರೆ, ಇತಿಹಾಸ

ನಿರ್ದುಷ್ಟ                  : ದೋಷರಹಿತವಾದುದು, ತಪ್ಪೇ ಇಲ್ಲದದು

ಅಸಮ ಸಾಹಸ ಶಿಕ್ಷ    : ಸರಿಸಾಟಿಯಿಲ್ಲದ ಸಾಹಸ ವಿದ್ಯೆಯುಳ್ಳವನು

ಅಂಬುಜದಳಾಕ್ಷ        : ಕಮಲದ ಕಣ್ಣುಳ್ಳವನು

ಸಾಮಗಾನ ವಿಲೋಲ  : ಸಾಮವೇದ ಮಂತ್ರಗಳಿಂದ ಪಾಡಿ ಹೊಗಳಲ್ಪಡುವವನು

ಸಾಧುಜನ ಪರಿಪಾಲ   : ಸಜ್ಜನ/ಸಾತ್ವಿಕ ಜೀವರುಗಳ ರಕ್ಷಕ

ಕಾಮಿತಾರ್ಥ ಪ್ರದಾತ  : ಬೇಡಿದ ಇಷ್ಟಗಳ ಈಡೇರಿಸಿ, ಮೊಕ್ಷದೆಡೆಗೆ ಕೊಂಡೊಯ್ಯುವವನು

ಕೀರ್ತಿ ಸಂಜಾತ         : ಹುಟ್ಟುತ್ತಲೇ ಕೀರ್ತಿ ಎಂಬ ಕಲಶವನ್ನು ಧರಿಸಿ ಧರೆಗೆ ಬಂದವನು

ಸೋಮ ಸೂರ್ಯ ಪ್ರಕಾಶ :

ಸೂರ್ಯ ಚಂದ್ರರ ಪ್ರಕಾಶವನ್ನು ತನ್ನ ಮುಖಾರವಿಂದದಲೇ ಹೊಂದಿರುವವನು

ಸಕಲ ಲೋಕಾಧೀಶ        : ಸಮಸ್ತ ೧೪ ಲೋಕಗಳಿಗೂ ಒಡೆಯನು

ಶ್ರೀ ಮಹಾ ರಘುವೀರ       : ರಘುವಂಶದ ಮಹಾವೀರನು

ಸಿಂಧು ಗಂಭೀರ             : ಸಾಗರದಷ್ಟು ಗಾಂಭೀರ್ಯ ಹೊಂದಿರುವವನು               

ಸಕಲ ಶಾಸ್ತ್ರ ವಿಚಾರ        : ಸಕಲಶಾಸ್ತ್ರ ನಿಪುಣನು, ವಿದ್ಯಾವಂತನು

ಶರಣಜನ ಮಂದಾರ       : ಶರಣ ಬಂದವರಿಗೆ , ಸ್ವರ್ಗಲೋಕದ ಕಲ್ಪವೃಕ್ಷನಿವನು

ಮಂದಾರ                     : ಸ್ವರ್ಗಲೋಕದ ಕಲ್ಪವೃಕ್ಷ, ಕಮಲದ ಹೂವು

ವಿಕಸಿತಾಂಬುಜ ವದನ    : ಸಂಪೂರ್ಣವಾಗಿ ಅರಳಿದ ಕಮಲದ ಹೂವಿನ ಮೊಗವುಳ್ಳವನು

ವಿಶ್ವಮಯ ಸದನ :

ಇಡೀ ಬ್ರಹ್ಮಾಂಡವನ್ನೇ ತನ್ನ ಮನೆಯಾಗಿಸಿಕೊಂಡಿರುವ, ಬ್ರಹ್ಮಾಂಡಕ್ಕೇ ಮನೆಯಾಗಿರುವವ.

ಸುಕೃತ ಮೋಕ್ಷಾಧೀಶ :

ಸತ್ಕಾರ್ಯಗಳಲ್ಲಿ ಔನತ್ಯ ಸಾಧಿಸಿದವರಿಗೆ ಮೋಕ್ಷ ಪ್ರದಾಯಕನು

ಸಾಕೇತ ಪುರವಾಸ :

ಅಯೋಧ್ಯಾ ನಗರಿಯೊಳು ರಾಜ್ಯವಾಳುತ ನೆಲೆಸಿಹ ದಶರಥರಾಮ

ಸಾಕೇತ : ಕೋಸಲ ದೇಶದ ರಾಜಧಾನಿ; ಅಯೋಧ್ಯೆ ನಗರ

ಭಕುತವತ್ಸಲ ರಾಮ ಪುರಂದರ ವಿಠಲ :               

ನನ್ನ ಅಂತರಂಗದ ಭಕ್ತರಿಗೆ ಅಕ್ಕರೆ, ಪ್ರೀತಿ ತೋರುವವ ಪುರಂದರ ವಿಠಲ ಶ್ರೀರಾಮ

ವತ್ಸಲ : ಅಕ್ಕರೆ, ಪ್ರೀತಿಯುಳ್ಳವನು


        **ಕಲಿಯುಗದಲ್ಲಿ ಹರಿನಾಮ ಸ್ಮರಣೆಯೊಂದೇ ಪರಮಮುಖ್ಯ ಸಾಧನ**
                                    
                                            ***  ಜೈ ಶ್ರೀರಾಮ್ ***
===========================================
Saahitya  : Sri Puradaradasaru
Singer     : Sri Vidyabhushanaru

jaya jAnaki kAnta jaya sAdhu jana vinuta
jayatu mahimAnanta jaya bhAgyavanta                       ||pa||

dasharathAtmaja vIra dashakanTha saMhAra
pashupatIshvara mitra pAvana charitra
kusuma bANa swarUpa kushala kIrti kalApa
asama sAhasa shikSha aMbujadaLAkSha                      ||1||

sAmagAna vilola sAdhujana paripAla
kAmitArtha pradAta kIrti sanjAta
soma sUrya prakAsha sakala lokAdhIsha
shrI mahA raghuvIra sindhu gaMbhIra                         ||2||

sakala shAstra vichAra sharaNajana mandAra
vikasitAMbuja vadana vishvamaya sadana
sukRuta mokShAdhIsha sAketa puravAsa
bhakutavatsala rAma purandara viThala                     ||3||

                                   ***  Jai Sri Ram ***

No comments:

Post a Comment