Monday, August 3, 2020

ಸುಮ್ಮನೆ ದೊರಕುವುದೇ ಶ್ರೀರಾಮನ ದಿವ್ಯನಾಮ / Summane Dorakuvude Sri Ramana Divyannama

ಸಾಹಿತ್ಯ     : ಶ್ರೀ ಪುರಂದರದಾಸರು 
ಗಾಯಕರು : ಶ್ರೀ ವಿದ್ಯಾಭೂಷಣರು   


ಧ್ವನಿಸುರಳಿಯ ಕೊಂಡಿ / Hear the song   
                 

ಸುಮ್ಮನೆ ದೊರಕುವುದೇ ಶ್ರೀರಾಮನ ದಿವ್ಯನಾಮ    || ಪ ||

ಜನ್ಮ-ಜನ್ಮಾಂತರದ ದುಷ್ಕರ್ಮ ಹೋದವಗಲ್ಲದೆ

 

ಭಕ್ತಿರಸದಲಿ ತನ್ನ ಚಿತ್ತ ಪರವಶವಾಗಿ

ಅಚ್ಯುತನ ನಾಮವ ಬಚ್ಚಿಟ್ಟುಕೊಂಡವಗಲ್ಲದೆ           || ೧ ||

 

ಕಂತುಪಿತನ ದಿವ್ಯನಾಮ ಅಂತರಂಗದಲ್ಲಿಟ್ಟು 

ಚಿಂತೆ ಎಲ್ಲ ಬಿಟ್ಟು ನಿಶ್ಚಿಂತನಾದವಗಲ್ಲದೆ               || ೨ ||

 

ಕಣ್ಣೊಳಗಿದ್ದ ಮೂರುತಿ ತನ್ನೊಳಗೆ ತಂದು

ಘನ್ನಪೂರ್ಣ ಪುರಂದರವಿಠಲನ ಭಜಿಸದೆ              || ೩ ||


ಭಾವಾರ್ಥ:

ಸುಮ್ಮನೆ ದೊರಕುವುದೇ ಶ್ರೀರಾಮನ ದಿವ್ಯನಾಮ   || ಪ ||

ಜನ್ಮ-ಜನ್ಮಾಂತರದ ದುಷ್ಕರ್ಮ ಹೋದವಗಲ್ಲದೆ

 

ಜನ್ಮ-ಜನ್ಮಾಂತರದ ದುಷ್ಕರ್ಮದ ಘನತಮ ನಿವಾರಿಸಿಕೊಳ್ಳದೇ

ಶ್ರೀರಾಮ ಎಂಬ ದಿವ್ಯನಾಮದ ಕೃಪಾಕಟಾಕ್ಷ ಅಷ್ಟು ಸುಲಭವಾಗಿ ದೊರಕುವುದಿಲ್ಲ

 

ಭಕ್ತಿರಸದಲಿ ತನ್ನ ಚಿತ್ತ ಪರವಶವಾಗಿ

ಅಚ್ಯುತನ ನಾಮವ ಬಚ್ಚಿಟ್ಟುಕೊಂಡವಗಲ್ಲದೆ         || ೧ ||

 

ಶ್ರೀರಾಮರ ಭಕ್ತಿಯ ರಸದಲ್ಲಿ ತನ್ನ ಚಿತ್ತವು ಮಿಂದು

ಪರವಶವಾಗಿ, ಅಚ್ಯುತನನು ತನ್ನೊಳಗೆ ಕಾಣದೆ

ಅಷ್ಟು ಸುಲಭವಾಗಿ ಶ್ರೀರಾಮರ ಕೃಪೆ ದೊರಕುವುದಿಲ್ಲ

 

ಕಂತುಪಿತನ ದಿವ್ಯನಾಮ ಅಂತರಂಗದಲ್ಲಿಟ್ಟು 

ಚಿಂತೆ ಎಲ್ಲ ಬಿಟ್ಟು ನಿಶ್ಚಿಂತನಾದವಗಲ್ಲದೆ                || ೨ ||

 

ಮನ್ಮಥನ ಪಿತನಾದ (ಕಂತುಪಿತ) ಶ್ರೀಮನ್ನಾರಾಯಣನ 

ನಾಮಸ್ಮರಣೆ ತನ್ನ ಅಂತರಂಗದೊಳಗೆ 

ಸ್ಮರಿಸುತ್ತಾ ಭಜಿಸುತ್ತಾ ಧ್ಯಾನಿಸುತ್ತಾ 

ಅನ್ಯ ವೃಥಾ ಚಿಂತೆಗಳನ್ನೂ ಬಿಟ್ಟು ನಿಶ್ಚಿಂತನಾಗದಿದ್ದರೆ...

ಶ್ರೀರಾಮರ ಕೃಪೆ ದೊರಕುವುದಿಲ್ಲ

 

ಕಣ್ಣೊಳಗಿದ್ದ ಮೂರುತಿ ತನ್ನೊಳಗೆ ತಂದು

ಘನ್ನಪೂರ್ಣ ಪುರಂದರವಿಠಲನ ಭಜಿಸದೆ               || ೩ ||

 

ಹೊರಗಣ್ಣಿನಿಂದ ನೋಡಿ, ಒಳಗಣ್ಣೊಳಿರಿಸಿದ

ಮೂರುತಿಯ ನ್ನಂತರಾಳದ ಹೃದಯವೆಂಬ

ಗರ್ಭಗುಡಿಯಲಿ ಪ್ರತಿಷ್ಠಾಪಿಸದೆ, ಈ ಸರ್ವಲೋಕಾಧೀಶ, 

ಸರ್ವಾಂತರ್ಯಾಮಿ ಶ್ರೀ ಪುರಂದರವಿಠಲನ ಮನದಿ 

ಧ್ಯಾನವೆಂಬ ಷೋಡಶೋಪಚಾರ ಪೂಜೆಯ ಸಲ್ಲಿಸದೆ, 

ಭಜಿಸದೆ ಕೌಸಲ್ಯಾಸುತ ಸಾಕೇತ ಪುರವಾಸಿ

ಶ್ರೀ ರಾಮನಾಮವೆಂಬ ದಿವ್ಯನಾಮ ತಾರಕನಾಮ

ಅಷ್ಟು ಸುಲಭವಾಗಿ ದೊರಕುವುದಿಲ್ಲ.


        **ಕಲಿಯುಗದಲ್ಲಿ ಹರಿನಾಮ ಸ್ಮರಣೆಯೊಂದೇ ಪರಮಮುಖ್ಯ ಸಾಧನ**
                                    
                                            ***  ಜೈ ಶ್ರೀರಾಮ್ ***
===========================================
Saahitya  : Sri Puradaradasaru

Singer     : Sri Vidyabhushanaru

summane dorakuvude shrIrAmana divyanAma    || pa ||

janma-janmAntarada duShkarma hodavagallade

 

bhaktirasadali tanna chitta paravashavAgi

achyutana nAmava bachchiTTukonDavagallade                 || 1 ||

 

kantupitana divyanAma antarangadalliTTu

chinte ella biTTu nishchintanAdavagallade                            || 2 ||

 

kaNNoLagidda mUruti tannoLage tandu

ghannapUrNa purandaraviThalana bhajisade                     || 3 ||


                                 ***  Jai Sri Ram ***

2 comments:

  1. Good work Giri..

    ಶ್ರೀ ರಾಮ ಸದಾ ಆಶೀರ್ವಾದ ಮಾಡುತ್ತಲೇ ಇರುತ್ತಾರೆ...ಶುಭವಾಗಲಿ!

    ReplyDelete
    Replies
    1. ತುಂಬಾ ಧನ್ಯವಾದಗಳು ಶ್ರೀ

      Delete