ಕೊಡುವನು ನೀನು ಕೊಂಬುವನು ನಾನು ।। ಪ ।।
ಬಡ ಮನದ ಮನುಜನ ಬೇಡಿ ಫಲವೇನು ।। ಅ.ಪ ।।
ಹದಿನಾರು ಹಲ್ಲುಗಳ ಬಾಯ್ತೆರೆದು ಬೇಡಿದರೆ |
ಇದು ಸಮಯವಲ್ಲೆಂದು ಹೇಳಿ ತಾನು ।।
ಮದನ ಕೇಳಿಗೆ ನೂರನೊಂದಾಗಿ ನೋಡುವನು |
ಮದಡ ಮಾನವನೇನು ಕೊಡಬಲ್ಲ ಹರಿಯೇ ।।೧ ।।
ಗತಿಯಿಲ್ಲವೆಂತೆಂದು ನಾನಾ ಪ್ರಕಾರದಲಿ |
ಮತಿಗೆಟ್ಟು ಪೊಗಳಿದರೆ ಅವನು ತನ್ನ ।।
ಸತಿಸುತರ ಕೇಳಬೇಕೆಂದು ಮೊಗ ತಿರುಹುವ ।
ಅತಿ ದುರುಳ ಮತ್ತೇನು ಕೊಡಬಲ್ಲ ಹರಿಯೇ ।। ೨ ।।
ಹೀನ ವೃತ್ತಿಯ ಜನರಿಗಾಸೆಯನು ಬಡುವದು ।
ಗಾಣದೆತ್ತು ತಿರುಗಿ ಬಳಲಿದಂತೆ ।।
ಭಾನುಕೋಟಿ ತೇಜ ವಿಜಯ ವಿಠ್ಠಲರೇಯ ।
ನೀನಲ್ಲದನ್ಯತ್ರ ಕೊಡು ಕೊಂಬರುಂಟೆ ? ।। ೩ ।।
No comments:
Post a Comment