ಧ್ವನಿಸುರಳಿಯ ಕೊಂಡಿ / Hear the song
ನಡಿ ನಡಿ ಸುಪಥವ
ಜಗದೊಡೆಯನನೆನೆ ಮನವೇ || ಪ ||
ಬಿಡು ಬಿಡು ಮಾಯಾವನು ಕೆಡದಿರು ಕಪಟದಲಿ || ಅ.ಪ ||
ನಾನು ನನ್ನದು ಎಂಬೋ, ಹೀನ ವಚನ ಸಲ್ಲ
ಗೇಣೂದರ ಪೊರೆವುದಲ್ಲದೆ
ಮತ್ತೇನಾದರೂ ಉಂಟೆ || ೧ ||
ಮಡದಿ ಮಕ್ಕಳ ನೋಡಿ, ಕಡುಹಿಗ್ಗಿ ಕೆಡಬೇಡ
ಕಡುಮುನಿದೆಮನಾಳುಗಳು
ಪಿಡಿದೇಳೆದೊಯ್ಯುವಾಗ || ೨ ||
ಇರಳು ಹಗಲು ನೀನು ಹರಿಸ್ಮರಣೆ ಚಿತ್ತದಲಿ
ಸ್ಥಿರವಾಗಿ ಇರಿಸೋದು
ಅನಂತ ಜನ್ಮ ಪಾಪ ಪೋಗುವುದು || ೩ ||
ಜ್ಞಾನಮಾರ್ಗವಿಡಿದು ಆನಂದ ಮೂರುತಿಯ
ಧ್ಯಾನದಿಂದಲಿ ಕಾಣೋ ದೈನ್ಯ ವೃತ್ತಿಯ ಬಿಟ್ಟು
ಹಾನಿ ವೃದ್ಧಿಯ ಜರಿದು || ೪ ||
ಅತಿ ಕಾಮಾತುರನಾಗಿ, ರತಿಯಲ್ಲಿ ಸಿಗದಿರು
ಸತತ ಮಾಡಿದ ಕರ್ಮ ವ್ಯಾಳೆ ವ್ಯಾಳೆಗೆ ಶ್ರೀಪತಿಗರ್ಪಿತವೆಂದು || ೫ ||
ಸಂತೋಷಗಳು ಬರಲಿ, ಸಂತಾಪಗಳು ಇರಲಿ
ಇಂತು ಇವರಿಗೆಲ್ಲ ಪ್ರೇರಕ ಹರಿಜಗದಂತರ್ಯಾಮಿಯೆಂದು || ೬ ||
ಧನಕನಕ ವಸ್ತು ಮಾಲಿನಿ ನಂದನರು ಆರು
ತನುವೇ ನಿನ್ನದಲ್ಲ ತಿಳಿದುಕೊ, ಗತಿ ಸಾಧನಕೆ ವಿಜಯವಿಠ್ಠಲನೆಂದು || ೭ ||
ನಡಿ ನಡಿ ಸುಪಥವ
ಜಗದೊಡೆಯನನೆನೆ ಮನವೇ || ಪ ||
ಬಿಡು ಬಿಡು ಮಾಯಾವನು ಕೆಡದಿರು ಕಪಟದಲಿ || ಅ.ಪ ||
ನಾನು ನನ್ನದು ಎಂಬೋ, ಹೀನ ವಚನ ಸಲ್ಲ
ಗೇಣೂದರ ಪೊರೆವುದಲ್ಲದೆ
ಮತ್ತೇನಾದರೂ ಉಂಟೆ || ೧ ||
ಮಡದಿ ಮಕ್ಕಳ ನೋಡಿ, ಕಡುಹಿಗ್ಗಿ ಕೆಡಬೇಡ
ಕಡುಮುನಿದೆಮನಾಳುಗಳು
ಪಿಡಿದೇಳೆದೊಯ್ಯುವಾಗ || ೨ ||
ಇರಳು ಹಗಲು ನೀನು ಹರಿಸ್ಮರಣೆ ಚಿತ್ತದಲಿ
ಸ್ಥಿರವಾಗಿ ಇರಿಸೋದು
ಅನಂತ ಜನ್ಮ ಪಾಪ ಪೋಗುವುದು || ೩ ||
ಜ್ಞಾನಮಾರ್ಗವಿಡಿದು ಆನಂದ ಮೂರುತಿಯ
ಧ್ಯಾನದಿಂದಲಿ ಕಾಣೋ ದೈನ್ಯ ವೃತ್ತಿಯ ಬಿಟ್ಟು
ಹಾನಿ ವೃದ್ಧಿಯ ಜರಿದು || ೪ ||
ಅತಿ ಕಾಮಾತುರನಾಗಿ, ರತಿಯಲ್ಲಿ ಸಿಗದಿರು
ಸತತ ಮಾಡಿದ ಕರ್ಮ ವ್ಯಾಳೆ ವ್ಯಾಳೆಗೆ ಶ್ರೀಪತಿಗರ್ಪಿತವೆಂದು || ೫ ||
ಸಂತೋಷಗಳು ಬರಲಿ, ಸಂತಾಪಗಳು ಇರಲಿ
ಇಂತು ಇವರಿಗೆಲ್ಲ ಪ್ರೇರಕ ಹರಿಜಗದಂತರ್ಯಾಮಿಯೆಂದು || ೬ ||
ಧನಕನಕ ವಸ್ತು ಮಾಲಿನಿ ನಂದನರು ಆರು
ತನುವೇ ನಿನ್ನದಲ್ಲ ತಿಳಿದುಕೊ, ಗತಿ ಸಾಧನಕೆ ವಿಜಯವಿಠ್ಠಲನೆಂದು || ೭ ||
Nice
ReplyDeleteYou are doing really an impressive job. This shows your love towards language, vocabulary.
ReplyDeleteExcellent.Please keep up the good work.
ReplyDelete