Friday, July 24, 2020

ಜಯತು ಕೋದಂಡರಾಮ / Jayatu Kodanda Rama

ಸಾಹಿತ್ಯ     : ಶ್ರೀ ಪುರಂದರದಾಸರು 
ಗಾಯಕರು : ಶ್ರೀ ವಿದ್ಯಾಭೂಷಣರು   

ಧ್ವನಿಸುರಳಿಯ ಕೊಂಡಿ / Hear the song 
                                         
                                          
ಕಪಿಕಟಧುರೀಣಃ ಕಾರ್ಮುಕನ್ಯಸ್ತ ಬಾಣಃ
ಕ್ಷಪಿತದಿತಿಜಸೈನ್ಯಃ ಕ್ಷತಿಯೇಷು ಅಗ್ರಗಣ್ಯಃ ।
ಜಲಧಿರಚಿತಸೇತುಃ ಜಾನಕೀತೋಷಹೇತುಃ
ಪಥಿ ಪಥಿ ಗುಣಸಾಂದ್ರಃ ಪಾತು ಮಾಂ ರಾಮಚಂದ್ರಃ ||

ಜಯತು ಕೋದಂಡರಾಮ ಜಯತು ದಶರಥರಾಮ
ಜಯತು ಸೀತಾರಾಮ ಜಯತು ರಘುರಾಮ.             || ಪ ||

ತಮದೈತ್ಯನನು ಮಡುಹಿ ಮಂದರಾಚಲ ನೆಗಹಿ
ಪ್ರೀತಿಯಿಂದಲೇ ತಂದು ಸಕಲ ಭೂತಳವ
ಕ್ಷೇತ್ರದಿಂದುದ್ಭವಿಸಿ ಮೊರೆಯಿಡುವ ಬಾಲಕನ
ಭೀತಿಯನು ಬಿಡಿಸಿ ನೆರೆ ಕಾಯ್ದ ರಘುರಾಮ.              || ೧ ||

ಬಲಿಯೊಳು ದಾನವ ಬೇಡಿ ನೆಲನ ಈರಡಿ ಮಾಡಿ
ಛಲದಿಂದ ಕ್ಷತ್ರಿಯರ ಕುಲವ ಹೋಗಾಡಿ
ಲಲನೆಗೋಸುಗ ಬಂದ ನೆವದಿಂದ ರಾವಣನ
ತಲೆಗಳನು ಚೆಂಡಾಡಿ ಮೆರೆದ ರಘುರಾಮ                 || ೨ ||

ವಸುದೇವ ಸುತನೆನಿಸಿ ವನಿತೆಯರ ವ್ರತಗೆಡಿಸಿ
ಎಸೆವ ತುರಗವನೇರಿ ಮಲ್ಲರನು ಸವರಿ
ವಸುಧೆಯೊಳು ಪುರಂದರ ವಿಠಲನೀ ಪಾಲಿಸೈ
ಬಿಸಜಾಕ್ಷಯೋಧ್ಯ ಪುರವಾಸ ರಘುರಾಮ                 || ೩ ||

ಭಾವಾರ್ಥ:

* ಇದು ರಾಮದೇವರ / ವಿಷ್ಣುವಿನ ದಶಾವತಾರ ಸ್ತುತಿ *

ಜಯತು ಕೋದಂಡರಾಮ ಜಯತು  ದಶರಥರಾಮ
ಜಯತು ಸೀತಾರಾಮ ಜಯತು ರಘುರಾಮ.          

ಜಯತು           : ಜಯವಾಗಲಿ 
ಕೋದಂಡ         : ಬಿಲ್ಲು, ಧನಸ್ಸು
ಕೋದಂಡರಾಮ : ಬಿಲ್ಲನು ಹಿಡಿದಿರುವ ರಾಮ
ದಶರಥರಾಮ    : ದಶರಥ ರಾಜರ ಮಗ ರಾಮ
ಸೀತಾರಾಮ      : ಸೀತಾ ಪತಿ ರಾಮ
ರಘುರಾಮ        : ರಘುವಂಶ ರಾಮ
                      : ಇಕ್ಷ್ವಾಕು ವಂಶಿ (ಸೂರ್ಯವಂಶಿ) ರಘು -> ಅಜ -> ದಶರಥ -> ಶ್ರೀರಾಮ 

ತಮದೈತ್ಯನನು ಮಡುಹಿ: ಮತ್ಸ್ಯಾವತಾರ
ಬ್ರಹ್ಮನಿಂದ ವೇದಗಳನ್ನು ಅಪಹರಿಸಿದ ಹಯಗ್ರೀವಾಸುರ ನಾಮಕ ದೈತ್ಯನ ಸಂಹರಿಸಿದವನು
ಮತ್ಸ್ಯ : ಮೀನು

ಮಂದರಾಚಲ ನೆಗಹಿ : ಕೂರ್ಮಾವತಾರ
ಸಮುದ್ರ ಮಂಥನದ ಸಮಯದಲ್ಲಿ ಕೂರ್ಮಾವತಾರದಿ ಮಂದರಗಿರಿಯನೆತ್ತಿದವನು
ಮಂದರ : ದಟ್ಟವಾದ, ಸಾಂದ್ರವಾದ 
ಅಚಲ    : ಕದಲದ,ಅಲುಗದ, ಬೆಟ್ಟ, ಗಿರಿ 
ಕೂರ್ಮಾ : ಆಮೆ

ಪ್ರೀತಿಯಿಂದಲೇ ತಂದು ಸಕಲ ಭೂತಳವ: ವರಾಹಾವತಾರ
ವರಾಹಾವತಾರದಿ ಹಿರಣ್ಯಾಕ್ಷನನ್ನು ಸಂಹರಿಸಿ ಭೂಮಿಯನ್ನು ಉದ್ಧರಿಸಿದವನು
ವರಾಹ : ಹಂದಿ

ಕ್ಷೇತ್ರದಿಂದುದ್ಭವಿಸಿ ಮೊರೆಯಿಡುವ ಬಾಲಕನ
ಭೀತಿಯನು ಬಿಡಿಸಿ ನೆರೆ ಕಾಯ್ದ ರಘುರಾಮ.  : ನರಸಿಂಹಾವತಾರ      
ಕಂಬದಿಂದ ಹೊರಗೆ ಬಂದು ಪ್ರಹ್ಲಾದನ ಭೀತಿ ಬಿಡಿಸಿದ ನರಸಿಂಹನು

ಬಲಿಯೊಳು ದಾನವ ಬೇಡಿ ನೆಲನ ಈರಡಿ ಮಾಡಿ: ವಾಮನಾವತಾರ
ಈರಡಿ : ಇಡೀ ಭೂಮಿಯನ್ನು ತನ್ನ ಎರಡು ಹೆಜ್ಜೆಗಳಿಂದ ಅಳೆದು
ವಾಮನನು ಬಲಿ ಚಕ್ರವರ್ತಿಯ ಹತ್ತಿರ 
ಮೂರು ಹೆಜ್ಜೆಯಷ್ಟು ದಾನವ ಬೇಡಿ, ಮೂರು ಹೆಜ್ಜೆಗಳನು ಇಡುತ್ತಾನೆ 

೧. ಭೂಮಿಯಿಂದ ಕೆಳಗಿನ ೭ ಲೋಕಗಳು
೨. ಭೂಮಿಯಿಂದ ಮೇಲಿನ ೭ ಲೋಕಗಳು
೩. ಬಲಿಯ ತಲೆ

ಬಲಿಯಲ್ಲಿ ಜೀವದ್ವಯ ಆವೇಶ ಇರುತ್ತದೆ 
ಬಲಿ ಎಂಬ ರಾಕ್ಷಸ ಹಾಗು ಬಲಿ ಎಂಬ ದೇವತೆ.. 
ರಾಕ್ಷಸನನ್ನು ತಮಸಿಗೆ ಅಟ್ಟಿ,
ಬಲಿಯನುದ್ಧರಿಸಿದ ವಾಮನನಾವತಾರಿ ಶ್ರೀಹರಿ 

ಛಲದಿಂದ ಕ್ಷತ್ರಿಯರ ಕುಲವ ಹೋಗಾಡಿ : ಪರಶುರಾಮಾವತಾರ
ತನ್ನ ತಂದೆ ಜಮದಗ್ನಿಯನ್ನು ಕೊಂದ ದುರಾಚಾರಿ ಕ್ಷತ್ರಿಯರನ್ನು (ರಾಜ ಕಾರ್ತವೀರ್ಯ) ಇಲ್ಲವಾಗಿಸಿದ ಪರಶುರಾಮ

ಲಲನೆಗೋಸುಗ ಬಂದ ನೆವದಿಂದ ರಾವಣನ
ತಲೆಗಳನು ಚೆಂಡಾಡಿ ಮೆರೆದ ರಘುರಾಮ : ಶ್ರೀರಾಮಾವತಾರ          

ಮಾರುವೇಷದಿ ಬಂದು, ಲಕ್ಷ್ಮಣರೇಖೆಯ ದಾಟುವನಂತೆ ಮಾಡಿ, 
ಸೀತಾಮಾತೆಯನು ಅಪಹರಿಸಿದ ದಶಮುಖ ರಾವಣನ 
ಚೆಂಡಾಡಿ ಅಸುನೀಗಿಸಿದ ಕೋದಂಡರಾಮ : ಶ್ರೀರಾಮ   

ಲಲನೆಗೋಸುಗ = ಲಲನೆಗೆ + ಓಸುಗ
ಲಲನೆಗೆ : ಹೆಣ್ಣಿಗೆ: ಸೀತೆಗೆ
ಓಸುಗ   : ಓಸ್ಕರ, ಸಲುವಾಗಿ
ಲಲನೆಗೋಸುಗ : ಸೀತೆಗೋಸ್ಕರ

ವಸುದೇವ ಸುತನೆನಿಸಿ : ಶ್ರೀಕೃಷ್ಣಾವತಾರ
ವಸುದೇವ ಸುತ : ವಸುದೇವನ ಮಗ 
ದುಷ್ಟ ಶಿಕ್ಷಣಾರ್ಥ, ಶಿಷ್ಟ ರಕ್ಷಣಾರ್ಥ  
ಅಧರ್ಮ ನಾಶಾರ್ಥ, ಧರ್ಮಸಂಸ್ಥಾಪನಾರ್ಥ  
ಅವತರಿಸಿದ ಪಾರ್ಥಸಾರಥಿ : ಶ್ರೀಕೃಷ್ಣ

ವನಿತೆಯರ ವ್ರತಗೆಡಿಸಿ : ಬೌದ್ಧಾವತಾರ
ವನಿತೆ : ಸ್ತ್ರೀ 
ತ್ರಿಪುರಾಸುರರ ಮಹಾ ಪತಿವ್ರತೆ ಪತ್ನಿಯರನ್ನು ಮೋಹಿಸಿ, 
ಅವರ ಪತಿಯಂದಿರ ರಕ್ಷಣೆಯ ಸಲುವಾಗಿ ನೆಡೆಸುತ್ತಿದ್ದ ವ್ರತವ ಕೆಡಿಸಿ
ರುದ್ರದೇವರಿಗೆ ತ್ರಿಪುರಾಸುರರ ವಧಿಸಲು ಸಹಾಯ ಮಾಡಿದವ 

ಎಸೆವ ತುರಗವನೇರಿ ಮಲ್ಲರನು ಸವರಿ: ಕಲ್ಕಿ ಅವತಾರ
ತುರಗ   : ಕುದುರೆ
ಮಲ್ಲರು : ದುರಾಚಾರಿಗಳು
ಸವರು  : ಕತ್ತರಿಸು (ಈ ದೇವರನಾಮಕ್ಕೆ)

ವಸುಧೆಯೊಳು ಪುರಂದರ ವಿಠಲನೀ ಪಾಲಿಸೈ
ವಸುಧೆ : ಭೂಮಿ
ಈ ಭೂಮಿಯಲ್ಲಿ ನೀನೇ ನಮ್ಮನ್ನು ಪಾಲಿಸಬೇಕು ಕಾಪಾಡಬೇಕು ಪುರಂದರವಿಠಲ

ಬಿಸಜಾಕ್ಷಯೋಧ್ಯ ಪುರವಾಸ ರಘುರಾಮ         
ಬಿಸಜ     : ಕಮಲ
ಬಿಸಜಾಕ್ಷ : ಕಮಲದ ಕಣ್ಣುಳ್ಳವನು : ಶ್ರೀರಾಮ

ಅಯೋಧ್ಯ ಪುರವಾಸ ನಾದ ಬಿಸಜಾಕ್ಷ ರಘುರಾಮ..
ಈ ದೇವರನಾಮ ಶ್ರೀಪುರಂದರದಾಸರು ಅಯೋಧ್ಯಾ ಕ್ಷೇತ್ರ ಸಂದರ್ಶಿಸಿದಾಗ
ಅಂತರಂಗದಲ್ಲಿ ಕಂಡ ಶ್ರೀರಾಮದೇವರ ರೂಪಗಳನ್ನು ವರ್ಣಿಸಿದ ಪರಿ.

**ಕಲಿಯುಗದಲ್ಲಿ ಹರಿನಾಮ ಸ್ಮರಣೆಯೊಂದೇ ಪರಮಮುಖ್ಯ ಸಾಧನ**
                                     
                                        ***  ಜೈ ಶ್ರೀರಾಮ್ ***
========================================================

Saahitya  : Sri Purandaradaasaru
Singer     : Sri Vidyabhushanaru

kapikaTadhurINaH kArmukanyasta bANaH
kShapitaditijasainyaH kShatriyeShu agragaNyaH |
jaladhirachitasetuH jAnakItoShahetuH
pathi pathi guNasAMdraH pAtu mAM rAmachaMdraH ||

jayatu kodanDa rAma jayatu Dasharatha rAma
jayatu sItArAma jayatu raghurAma                                      || pa ||

tamadaityananu maDuhi mandarAchala negahi
prItiyindale tandu sakala bhUtaLava
kShetradindudbhavisi moryiDuva bAlakana
bhItiyanu biDisi nere kAyda raghurAma                               || 1 ||

baliyoLu dAnava beDi nelana IraDi mADi
Chaladinda kShatriyara kulava hogADi
lalangosuga banda nevadinda rAvaNana
talegaLanu chenDADi mereda raghurAma                            || 2 ||

vasudeva sutanenisi vaniteyara vratageDisi
eseva turagavaneri mallaranu savari
vasudheyoLu purandara viThalanI pAlisai
bisajAkShayodhya puravAsa raghurAma                               || 3 ||

                                  ***  Jai Sri Ram ***

Wednesday, July 8, 2020

ಶ್ರೀರಾಮ ರಾಮ ಜಯ ಜಯಾತ್ಮ ರಾಮ / Srirama rama Jaya Jayaatma rama

ಸಾಹಿತ್ಯ     : ಶ್ರೀ ಮಹಿಪತಿದಾಸರು
ಗಾಯಕರು : ಶ್ರೀ ವಿದ್ಯಾಭೂಷಣರು


ಧ್ವನಿಸುರಳಿಯ ಕೊಂಡಿ / Hear the song 



                                     ಶ್ರೀ ರಾಮ ರಾಮ              || ಪ ||

                                     ಜಯ ಜಯಾತ್ಮಾರಾಮ
                                     ದಯ ಗುಣದಿ ನಿಸ್ಸೀಮ
                                     ಮಾಯಾರಹಿತನುಪಮ
                                     ಕಾಯೌ ಕೃಪಾನಿಧಿ ನಮ್ಮ    || ೧ ||

                                     ಮುನಿಜನರ ಪ್ರತಿಪಾಲ
                                     ದೀನಬಂಧು ದಯಾಳ
                                     ಘನಸುಖದ ಕಲ್ಲೋಳ
                                     ನೀನಹುದೈ ಅಚಲ            || ೨ ||

                                     ಕರುಣಾಬ್ಧಿ ನೀನೆ ರಾಮ
                                     ಹರಹೃದಯ ವಿಶ್ರಾಮ
                                     ತರಳ ಮಹಿಪತಿ ನಿಮ್ಮ
                                     ಸ್ಮರಿಸುವ ಪಾದ ಪದ್ಮ        || ೩ ||
ಭಾವಾರ್ಥ :

ಆತ್ಮಾರಾಮ : ಸ್ವರೂಪಾನಂದಾವಿರ್ಭಾವ ಸದಾ ಉಳ್ಳವನು
                   ಸ್ವರೂಪ + ಆನಂದ + ಆವಿರ್ಭಾವ
ಸ್ವರೂಪ      : ಸುಂದರವಾದ
ಆವಿರ್ಭಾವ  : ಹುಟ್ಟುವುದು, ಪ್ರಕಟವಾಗುವುದು
ಜಯಾತ್ಮಾರಾಮ : ಆತ್ಮಾರಾಮನಿಗೆ ಜಯವಾಗಲಿ 
ಕೃಪಾನಿಧಿ   : ದಯಾಸಾಗರ : ವಿಷ್ಣು
ಮಾಯಾ    : ಮೋಹ, ದೋಷ
ಅನುಪಮ   : ಉಪಮೆ ಇಲ್ಲದವ, ಸರಿಸಮರಿಲ್ಲದವ
ಮಾಯಾರಹಿತನುಪಮ : ಸರಿಸಮರಿಲ್ಲದ ದೋಷರಹಿತನು
ಕಾಯೌ      : ಕಾಪಾಡು
ಪ್ರತಿಪಾಲ   : ಕಾಪಾಡುವವನು
ಘನಸುಖ    : ದುಃಖ ರಹಿತ
ಕಲ್ಲೋಳ     : ಪ್ರವಾಹ, ಅಲೆ, ತೆರೆ, ತರಂಗ
ಘನಸುಖದ ಕಲ್ಲೋಳ : ದುಃಖದ ಲೇಪವೇ ಇಲ್ಲದ, ಆನಂದ-ಪ್ರವಾಹ ಪರಿಪೂರ್ಣನು
ನೀನಹುದೈ  : ನೀನು ಅಹುದು
ಅಚಲ        : ತಲ್ಲಣಗೊಳ್ಳದವನು
ಅಬ್ಧಿ           : ಸಾಗರ
ಕರುಣಾಬ್ಧಿ    : ಕರುಣಾಸಾಗರ
ಹರಹೃದಯ ವಿಶ್ರಾಮ : ಶಿವನ ಹೃದಯಮಂದಿರದೊಳು ನೆಲಸಿರುವವನು ಶ್ರೀರಾಮ
ಹಾಗೆಯೇ ಶ್ರೀರಾಮನ ಹೃದಯಮಂದಿರದೊಳು ನೆಲಸಿರುವವನು ಶಿವ
ತರಳ         : ಬಾಲಕ, ಹುಡುಗ
ತರಳ ಮಹಿಪತಿ ಸ್ಮರಿಸುವ ಪಾದ ಪದ್ಮ : ಬಾಲಕ, ಅತಿ ಅಲ್ಪನಾದ ಮಹಿಪತಿಯು 
ನಿಮ್ಮ ಪಾದ ಕಮಲಗಳನ್ನು ಸ್ಮರಿಸುತ್ತೇನೆ

=========================================================
                       
                       Saahitya  : Sri Mahipatidaasaru
                      Singer       : Sri Vidyabhushanaru
  
                         shrI rAma rAma                             || pa ||

                        jaya jayAtmaa rAma
                        daya guNadi nissIma
                        mAyArahitanupama
                        kAyau kRupAnidhi namma           || 1 ||

                        munijanara pratipAla
                        dIna bandhu dayALa
                        dhana sukhada kalloLa
                        nInahudai achala                             || 2 ||

                        karuNAbdhi nIne rAma
                        harahRudaya vishrAma
                        taraLa mahipati nimma
                        smarisuva pAda Padma                 || 3 ||

                                    ***  Jai Sri Ram ***

Monday, July 6, 2020

ಗಾನಕೆ ಸುಲಭವು ರಾಮ ನಾಮವು / Ganake sulabhavu Rama namavu

ಸಾಹಿತ್ಯ     : ಶ್ರೀ ಪ್ರಸನ್ನ ವೆಂಕಟದಾಸರು
ಗಾಯಕರು : ಶ್ರೀ ವಿದ್ಯಾಭೂಷಣರು


ಧ್ವನಿಸುರಳಿಯ ಕೊಂಡಿ / Hear the song 


ಗಾನಕೆ ಸುಲಭವು ರಾಮ ನಾಮವು
ಗಾನಕೆ ಅತಿ ಸುಲಭ ರಾಮ                          || ಪ ||

ರಾಮ್ ರಾಮ್ ಜೈ ಜೈ ರಾಮ್
ರಾಮ್ ರಾಮ್ ಶ್ರೀರಾಮ್ ಶ್ರೀರಾಮ್              || ಅ.ಪ ||

ದೀನ ಜನಕೆ ಬಲು ಸಾನುರಾಗನಾದ
ಜಾನಕಿನಾಥನ ದಿವ್ಯನಾಮವು                          
ತಾಳ ತಂಬೂರಿ ಮೃದಂಗಗಳಿಂದಲಿ
ಪೇಳುವರಿಗೆ ರಘು ಮೌಳಿಯ ನಾಮವು            || ೧ || 

ಘೋರ ಕಲುಶಗಳ ಪಾರಗಾಣಿಸಿ
ಮನ ಕೋರಿಕೆಗಳನೀವ ತಾರಕ ನಾಮವು         
ತಾಪಸ ಸತಿಯಳ ಶಾಪವ ಬಿಡಿಸಿದ
ಭೂಪ ದಾಶರಥಿಯ ದಿವ್ಯ ನಾಮವು                || ೨ || 

ಲಂಕೆಯ ಪೊಕ್ಕು ನಿಶಾಚರರನೇ ಕೊಂದು
ಪಂಕಜಾಕ್ಷಿಯ ಆತಂಕ ಕಳೆದ ನಾಮ              
ಎನ್ನವರೆಲ್ಲರು ಬನ್ನಿರಿ ಎನ್ನುತ
ತನ್ನೊಡನೊಯ್ದ ಪ್ರಸನ್ನ ರಾಮನ ನಾಮ            || ೩ || 

ಭಾವಾರ್ಥ :
ಸಾನುರಾಗನು : ಅನುರಾಗ / ಪ್ರೀತಿ ತೋರುವವನು
ಜಾನಕಿನಾಥ   : ಸೀತೆಯ ಪತಿ, ಶ್ರೀ ರಾಮ
ಮೌಳಿ           : ಕಿರೀಟ, ಮುಕುಟ
ರಘುಮೌಳಿ     : ರಘುಕುಲ ಮುಕುಟ
ಪಾರಗಾಣಿಸಿ   : ಮುಗಿಸಿ, ಕೊನೆ ಮುಟ್ಟಿಸಿ
ತಾರಕ ನಾಮ : ಮೋಕ್ಷದಾಯಕವಾದ ಮಂತ್ರ
ತಾಪಸ         : ಋಷಿ, ಮುನಿ
ತಾಪಸ ಸತಿ   : ಮುನಿ ಗೌತಮರ ಸತಿ : ಅಹಲ್ಯಾದೇವಿ
ದಾಶರಥಿ       : ರಾಜ ದಶರಥನ ಮಗ, ಶ್ರೀ ರಾಮ
ಪೊಕ್ಕು          : ಹೋಗಿ
ನಿಶಾಚರರು   : ರಾಕ್ಷಸರು
ಪಂಕಜಾಕ್ಷಿ     : ತಾವರೆದಲದಂಥ ಕಣ್ಣುಗಳುಳ್ಳವಳು : ಸೀತಾಮಾತೆ
ಎನ್ನವರೆಲ್ಲರು ಬನ್ನಿರಿ ಎನ್ನುತ ತನ್ನೊಡನೊಯ್ದ : 
ಶ್ರೀ ರಾಮದೇವರು ಪರಂಧಾಮಕ್ಕೆ ತೆರಳುವಾಗ, ನನ್ನ ಜೊತೆ ಯಾರು ಬೇಕಾದರೂ ಬರಬಹುದು ಅಂದರು.. ಆಗ ಸಾಕಷ್ಟು ಜನ ಹೋದರು ಮುಕ್ತಿಗೆ.. ಇದು ರಾಮಾಯಣದ ಕೊನೆಯಲ್ಲಿ ನಡೆದದ್ದು..
ಪರಂಧಾಮ   : ವೈಕುಂಠ

**ಕಲಿಯುಗದಲ್ಲಿ ಹರಿನಾಮ ಸ್ಮರಣೆಯೊಂದೇ ಪರಮಮುಖ್ಯ ಸಾಧನ**
                                         ***  ಜೈ ಶ್ರೀರಾಮ್ ***
========================================================

Saahitya  : Sri Prasanna Venkatadaasaru 
Singer      : Sri Vidyabhushanaru

gAnake sulabhavu rAma nAmavu
gAnake ati sulabha rAma                                      || pa ||

rAm rAm jai jai rAm
rAm rAm shrIrAm shrIrAm                                  || a.pa ||

dIna janake balu sAnurAganAda
jAnaki nAthana divya nAmavu                            
tALa taMbUri mRidangagaLindali
peLuvarige raghu mauLiya nAmavu                  || 1 ||

ghora kalushagaLa pAragANisi
mana korikegaLanIva tAraka nAmavu              
tApasa satiyaLa shApava biDisida
bhUpa dAsharathiya divya nAmavu                   || 2 || 

lankeya pokku nishAchararane kondu
pankajAkShiya Atanka kaLeda nAma                 
ennavarellaru banniri ennuta
tannoDanoyda prasanna rAmana nAma            || 3 ||    

                                  ***  Jai Sri Ram ***

Thursday, July 2, 2020

ರಾಮ ನಾಮ ಭಜಿಸಿದವಗೆ / Rama Naama Bhajisidavage

ಸಾಹಿತ್ಯ     : ಶ್ರೀ ಗೋಪಾಲದಾಸರು
ಗಾಯಕರು : ಶ್ರೀ ಬಿ.ಇ.ನಾಗೇಂದ್ರ ಪ್ರಸಾದ್


ಧ್ವನಿಸುರಳಿಯ ಕೊಂಡಿ / Hear the song 


ರಾಮನಾಮ ಭಜಿಸಿದವಗೆ ಉಂಟೆ ಭವದ ಬಂಧನ                   || ಪ ||
ಕಾಮಹರನ ಸತಿಯು ಸದಾ ನೇಮದಿಂದ ಭಜಿಸುವ                 || ಅ.ಪ ||

ಶಿವನು ಧನ್ಯನಾದ ಮೌನಿ ಯುವತಿ ಪಾವನೆಯಾದಳು
ರವಿಯ ಸುತನು ಪದವಿ ಪಡೆದ, ಧ್ರುವನು ದಿವಿಜನೆನಿಸಿದ          || ೧ ||

ಕರಿವರ ಪ್ರಹ್ಲಾದ ದ್ರೌಪದಿ ವರವಿಭೀಷಣರೆಲ್ಲರೂ                      
ಹರಿಯ ಸ್ಮರಣೆ ಮಾಡಿ ಸುಖ ಭರಿತರಾಗಲಿಲ್ಲವೇ                     || ೨ ||

ಗಿರಿಜೆ ರಾಮ ಮಂತ್ರದಿಂದ ಪರಮ ಮಂಗಳೆಯಾದಳು
ವರದ ಗೋಪಾಲ ವಿಠಲ ನಾಮ ದುರಿತಕಾನನ ಪಾವಕ             || ೩ ||

ಭಾವಾರ್ಥ: 
ಕಾಮಹರನ ಸತಿಯು ಸದಾ ನೇಮದಿಂದ ಭಜಿಸುವ 
ಕಾಮ : ಮನ್ಮಥ
ಕಾಮಹರ : ಕಾಮನನ್ನು ಸಂಹರಿಸಿದ ಪರಮ ವೈರಾಗಿ : ಶಿವ
ಕಾಮಹರನ ಸತಿ : ಪಾರ್ವತಿ
ಪಾರ್ವತಿಯು ಶಿವನ ಪತ್ನಿಯಾದ್ದರಿಂದ, ಶಿವ ರಾಮದೇವರ ಉಪಾಸಕರಾದ್ದರಿಂದ, 
ಪಾರ್ವತಿಯೂ ಕೂಡ, ಶಿವನ ಅಂತರ್ಯಾಮಿ ರಾಮದೇವರ ಉಪಾಸಕರು

ಶಿವನು ಧನ್ಯನಾದ ಮೌನಿ, ಯುವತಿ ಪಾವನೆಯಾದಳು 
ಶಿವನು ಧನ್ಯನಾದ ಮೌನಿ : ರಾಮ ತಾರಕಮಂತ್ರದಿಂದ ಶಿವನಿಗೆ ಜ್ಞಾನ ಅಭಿವೃದ್ಧಿ ಆಯಿತು -
                                 - ಇನ್ನಷ್ಟು ಜ್ಞಾನಿ ಆದರು.. ಮೌನಿ-ಜ್ಞಾನಿ
                                   ಮೌನ ಅಂದರೆ ಮಾತಾಡದೆ ಇರುವುದು ರೂಢಿಯಲ್ಲಿರುವ ಅರ್ಥ -
                                 - ಮೌನ ಅಂದರೆ ಅಂತರ್ಮುಖಿ ಧ್ಯಾನ, ಭಗವಚ್ಚಿoತನೆ

ಯುವತಿ ಪಾವನೆಯಾದಳು :  ಅಹಲ್ಯದೇವಿ 
                                       ದಾಂಪತ್ಯ ದ್ರೋಹಕ್ಕಾಗಿ (ಇಂದ್ರನ ಮಾಯಾಜಾಲದಿಂದ) ,
                                       ತನ್ನ ಪತಿ ಮುನಿ ಗೌತಮರಿಂದ ಶಾಪಗ್ರಸ್ಥಳಾಗಿ ಶಿಲೆಯಾದ ನಂತರ,
                                       ತ್ರೇತಾಯುಗದಲ್ಲಿ ಪತಿತಪಾವನ ಶ್ರೀರಾಮರಿಂದ, 
                                       ಶಾಪ ವಿಮೋಚನೆಗೊಂಡು ಅಹಲ್ಯಾದೇವಿ ಪಾವನೆಯಾಗುತ್ತಾಳೆ 
                                       
ಪತಿತಪಾವನ : ತಪ್ಪಿತಸ್ಥರನ್ನೂ ಕ್ಷಮಿಸುವ ಸಾಮರ್ಥ್ಯವಿರುವವನು : ಶ್ರೀರಾಮ  

ರವಿಯ ಸುತನು ಪದವಿ ಪಡೆದ, ಧ್ರುವನು ದಿವಿಜನೆನಿಸಿದ   
ರವಿಯ ಸುತನು ಪದವಿ ಪಡೆದ : ಸುಗ್ರೀವನು ರಾಮನ ಸೇವೆ ಮಾಡಿದ್ದರಿಂದ ಮೋಕ್ಷ ಪ್ರಾಪ್ತಿ ಆಯಿತು

ಧ್ರುವ   : ರಾಜ ಉತ್ತಾನಪಾದ ಮತ್ತು ರಾಣಿ ಸುನೀತಿಯ ಮಗ 
ದಿವಿಜ  : ದೇವತೆ
ಹರಿಯು ಬಾಲಕ ಧ್ರುವನ ದೃಢತೆ, ಹರಿಪ್ರೀತಿ, ಸತ್ವಗುಣಕ್ಕೆ ಪ್ರಸನ್ನನಾಗಿ, ಚಿರವಾದ ಧ್ರುವ ನಕ್ಷತನಾಗಿ ಕಂಗೊಳಿಸುವಂತಹ ದೈವತ್ವತೆಯನ್ನು ದಯಪಾಲಿಸುತ್ತಾನೆ, ಅಂದರೆ ಧ್ರುವ ದಿವಿಜನಾಗುತ್ತಾನೆ  

ಕರಿವರ : ಗಜೇಂದ್ರ ಮೋಕ್ಷ 

ಗಿರಿಜೆ ರಾಮ ಮಂತ್ರದಿಂದ ಪರಮ ಮಂಗಳೆಯಾದಳು
ಗಿರಿಜೆಯು ರಾಮ ಮಂತ್ರ ಉಪಾಸನೆ ಮಾಡಿದ್ದರಿಂದ ಶಿವನ ಜೊತೆ ವಿವಾಹವಾಯಿತು
-ಇದು ದಕ್ಷ ಯಜ್ಞದ ನಂತರ ನಡೆದದ್ದು 

ದುರಿತಕಾನನ : ಪಾಪವೆಂಬ ಕಾಡು 
ಪಾವಕ : ಬೆಂಕಿ, ಅಗ್ನಿ, ಕಾಡ್ಗಿಚ್ಚು 
ದುರಿತಕಾನನ ಪಾವಕ : ಸರ್ವಪಾಪ ನಿವಾರಕ, ತಾರಕ 
ತಾರಕ : ಸಂರಕ್ಷಿಸುವವನು, ದಾಟಿಸುವವನು

**ಕಲಿಯುಗದಲ್ಲಿ ಹರಿನಾಮ ಸ್ಮರಣೆಯೊಂದೇ ಪರಮಮುಖ್ಯ ಸಾಧನ**

========================================================

Saahitya  : Sri Gopala daasaru 
Singer      : Sri B.E.Nagendraprasad

rAmanAma bhajisidavage unTe bhavada bandhana             || pa ||
kAmaharana satiyu sadA nemadinda bhajisuva                     || a.pa ||

shivanu dhanyanAda mouni yuvati pAvaneyAdaLu
raviya sutanu padavi paDeda, dhruvanu divijanenisida      || 1 ||

karivara prahlAda draupadi varavibhIShaNarellarU
hariya smaraNe mADi sukha bharitarAgalillave                    || 2 ||

girije rAma mantradinda parama mangaLeyAdaLu
varada gopAla viThala nAma duritakAnana pAvaka            || 3 ||

                                  ***  Jai Sri Ram ***