Thursday, December 27, 2018

ಗೋವಿಂದ ನಿನ್ನ ನಾಮವೇ ಚೆಂದ / Govinda Ninna naamave Chenda

ಸಾಹಿತ್ಯ     : ಶ್ರೀ ಪುರಂದರದಾಸರು   
ಗಾಯಕರು : ದಿವ್ಯ ಅನಂತ & ಶ್ರೀನಿತ್ಯ ರವಿಚಂದ್ರನ್ (Cisco Sisters)



ಧ್ವನಿಸುರಳಿಯ ಕೊಂಡಿ / Hear the song 


ಗೋವಿಂದ ನಿನ್ನ ನಾಮವೇ ಚೆಂದ                     || ಪ ||

ಅಣುರೇಣುತೃಣಕಾಷ್ಟ ಪರಿಪೂರ್ಣ ಗೋವಿಂದ 
ನಿರ್ಮಲಾತ್ಮಕನಾಗಿ ಇರುವುದೇ ಆನಂದ            || ೧ ||

ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದ 
ಈ ಪರಿ ಮಹಿಮೆಯ ತಿಳಿಯುವುದಾನಂದ         || ೨ ||

ಮಂಗಳಮಹಿಮ ಶ್ರೀ ಪುರಂದರ ವಿಠಲನ 
ಹಿಂಗದೆ ಭಜಿಸುತ ಇರುವುದೇ ಆನಂದ             || ೩ ||      

----------------------------------------------------------------------

Saahitya : Sri Purandaradaasaru 
Singers    : Divya Anantha & Srinithya Ravichandran 



govinda ninna nAmave chenda                                   || pa ||

aNu reNu tRiNakAShTa paripUrNa govinda 
nirmalAtmakanAgi iruvude Ananda                          || 1 ||

sRuShTi sthiti laya kAraNa govinda 
Ee pari mahimeya tiLiyuvudAnanda                          || 2 ||

mangaLa mahima shrI purandara viThalana 
hingade bhajisuta iruvude Ananda                              || 3 ||

Wednesday, December 26, 2018

ಯಾರೇ ರಂಗನ ಯಾರೇ ಕೃಷ್ಣನ / Yaare Rangana Yaare Krishnana

ಸಾಹಿತ್ಯ: ಶ್ರೀ ಪುರಂದರದಾಸರು 
ಗಾಯಕರು: ಶ್ರೀ ವಿದ್ಯಾಭೂಷಣ  



ಧ್ವನಿಸುರಳಿಯ ಕೊಂಡಿ / Hear the song 




ಯಾರೇ ರಂಗನ ಯಾರೇ ಕೃಷ್ಣನ               || ಪ ||
ಯಾರೇ ರಂಗನ  ಕರೆಯ ಬಂದವರು         || ಅ.ಪ ||

ಗೋಪಾಲ ಕೃಷ್ಣನ, ಪಾಪ ವಿನಾಶನ  
ಈ ಪರಿಯಿಂದಲಿ ಕರೆಯ ಬಂದವರು        || ೧ ||

ವೇಣು ವಿನೋದನ, ಪ್ರಾಣ ಪ್ರಿಯನ 
ಜಾಣೆಯರಸರನ ಕರೆಯ ಬಂದವರು         || ೨ ||

ಕರಿರಾಜ ವರದನ ಪರಮಪುರುಷನ 
ಪುರಂದರ ವಿಠಲನ ಕರೆಯ ಬಂದವರು     || ೩ ||

-----------------------------------------------------------

yAre rangana yAre kriShNana                             || pa ||
yAre rangana kareya bandavaru                        || a.pa ||

gopAla kriShNana, pApa vinAshana 
Ee pariyindali kareya bandavaru                        || 1 ||

veNu vinodana, prANa priyana 
jANeyarasarana kareya bandavaru                     || 2 ||

karirAja varadana paramapuruShana 
purandara viThalana kareya bandavaru          || 3 ||

ಬಿಡುವೇನೇನಯ್ಯ ಹನುಮ / Biduvenenayya Hanuma

ಸಾಹಿತ್ಯ: ಶ್ರೀ ಪುರಂದರದಾಸರು 
ಗಾಯಕರು: ಶ್ರೀ ವಿದ್ಯಾಭೂಷಣ  






ಬಿಡುವೇನೇನಯ್ಯ ಹನುಮ, ಸುಮ್ಮನೆ ಬಿಡುವೇನೇನಯ್ಯ              || ಪ ||

ಬಿಡುವೆನೇನೋ ಹನುಮ ನಿನ್ನ ಅಡಿಗಳಿಗೆ ಶಿರವ ಕಟ್ಟಿ 
ಒಡೆಯನಲ್ಲಿ ಜ್ಞಾನ ಭಕುತಿಯ ಕೊಡುವ ತನಕ ಸುಮ್ಮನೇ ನಿನ್ನ       || ಅ.ಪ ||

ಹಸ್ತವನ್ನು ಎತ್ತಿದರೇನು ಹಾರಾಕಾಲನು ಇಟ್ಟರೇನು 
ಭೃತ್ಯನು ನಿನ್ನವನು ನಾನು ಹಸ್ತಿವರದನ ತೋರುವ ತನಕ               || ೧ ||

ಹಲ್ಲುಮುಡಿಯ ಕಚ್ಚಿದರೇನು ಅಂಜುವೆನೇ ನಿನಗೆ ನಾನು
ಫುಲ್ಲನಾಭನಲ್ಲಿ ಎನ್ನ ಮನಸ ನೀ ನಿಲ್ಲಿಸೊ ತನಕ                          || ೨ ||

ಡೊಂಕು ಮೋರೆ ಬಾಲವ ತಿದ್ದಿ ಹೂಂಕರಿಸಿದರೆ ಅಂಜುವನಲ್ಲ
ಕಿಂಕರ ನಿನ್ನವನು ನಾನು ಪುರಂದರವಿಠಲನ ತೋರುವ ತನಕ        || ೩ ||



ಪದಗಳಾರ್ಥ: 
=========

ಅಡಿಗಳಿಗೆ       : ಪಾದಗಳಿಗೆ
ಭೃತ್ಯ             : ಭಂಟ, ಬಂಟ, ಕೈಯಾಳು,ಅಂಗಸೇವಕ
ಹಾರಾಕಾಲನು : ಹಾರಲು ಆ ಕಾಲನು 

---------------------------------------------------------------------------------------------

Saahitya : Sri Purandaradaasaru
Singer      : Sri Vidyabhushana 

biDuvenenayya hanuma, summanE biDuvenenayya                          || pa ||

biDuvneno hanuma ninna aDigaLig shirava kaTTi 
oDyanalli gnAna bhakutiya koDuva tanaka summane ninna            || a.pa ||

hastavannu yettidarenu hArAkAlanu iTTarenu 
bhRutyanu ninnavanu nAnu hastivaradana toruva tanaka                || 1 ||

hallumuDiya kachchidarenu anjuvenE ninage nAnu
pullanAbhanalli yenna manasa nI nillis tanaka                                       || 2 ||

Donku morE bAlava tiddi hUMkarisidarE anjuvanalla
kiMkara ninnavanu nAnu purandaraviThalana toruva tanaka          || 3 ||

Tuesday, December 25, 2018

ಇನ್ನು ದಯ ಬಾರದೆ / Innu Daya Barade

ಸಾಹಿತ್ಯ     : ಶ್ರೀ ಪುರಂದರದಾಸರು   
ಗಾಯಕರು : ಶ್ರೀಮತಿ ಶೃತಿ ಕಣ್ಣನ್




ಧ್ವನಿಸುರಳಿಯ ಕೊಂಡಿ / Hear the song 




ಇನ್ನು ದಯ ಬಾರದೆ ದಾಸನ ಮೇಲೆ                        || ಪ ||
ಪನ್ನಗ ಶಯನ ಶ್ರೀ ಪರಮ ಪುರುಷ                          || ಅ.ಪ ||

ನಾನಾ ದೇಶಗಳಲ್ಲಿ ನಾನಾ ಕಾಲಗಳಲ್ಲಿ 
ನಾನಾ ಯೋನಿಗಳಲ್ಲಿ ನಲಿದು ಹುಟ್ಟಿ 
ನಾನು ನನ್ನದು ಎಂಬ ನರಕದೊಳಗೆ ಬಿದ್ದು
ನೀನೆ ಗತಿ ಎಂದು ನಂಬಿದ ದಾಸನ ಮೇಲೆ               || ೧ ||

ಮನೋವಾಕ್ಕಾಯದಿಂದ ಮಾಡುವ ಕರ್ಮಗಳೆಲ್ಲ
ದಾನವಾಂತಕ ನಿನಗೆ ದಾನವಿತ್ತೆ 
ಏನು ಮಾಡಿದರೇನು ಪ್ರಾಣ ನಿನ್ನದು ಸ್ವಾಮಿ
ಶ್ರೀನಾಥ ಪುರಂದರ ವಿಠಲನ ದಾಸನ ಮೇಲೆ            || ೨ ||

ಪದಗಳಾರ್ಥ: 
=========

ಮನೋವಾಕ್ಕಾಯ = ಮನ:+ವಾಕ್+ಕಾಯ = ಕಾಯಾವಾಚಾಮನಸಾ

------------------------------------------------------------------------

Saahitya : Sri Purandaradasaru
Singer     : Smt Shruti Kannan

innU daya bArade dAsana melE                         || pa ||
pannaga shayana shrI parama puruSha                   || a.pa ||

nAnA deshagaLalli nAnA kAlagaLalli
nAnA yonigaLalli nlidu huTTi
nAnu nannadu yeMba narakadoLagE biddu
nInE gati eMdu naMbida dAsana mEle                       || 1 ||

manOvakkAyadiMda mADuva karmagaLella
dAnavAMtaka ninag dAnavitt
enu mADidarenu prANa ninnadu svAmi
shrInAtha puraMdara viThalana dAsana mEle        || 2 ||


manOvakkAyadiMda = manaH + vaak + kAya = kAyA vAchA manasA

ರಾಮಚಂದ್ರಾಯ ಜನಕ / Ramachandraaya Janaka

ಸಾಹಿತ್ಯ   :  ಶ್ರೀ ಭದ್ರಾಚಲ ರಾಮದಾಸು / ಕಂಚರ್ಲ ಗೋಪಣ್ಣ 
ಗಾಯಕರು: ಶ್ರೀ ಬಾಲಮುರಳಿಕೃಷ್ಣ 


ಧ್ವನಿಸುರಳಿಯ ಕೊಂಡಿ / Hear the song 


ರಾಮಚಂದ್ರಾಯ ಜನಕ ರಾಜಜಾ ಮನೋಹರಾಯ
ಮಾಮಕಾಭೀಷ್ಟದಾಯ ಮಹಿತ ಮಂಗಳಂ ||

ಕೋಸಲೇಶಾಯ ಮಂದಹಾಸ ದಾಸ ಪೋಷಣಾಯ
ವಾಸವಾದಿ ವಿನುತ ಸದ್ವರಾಯ ಮಂಗಳಂ ||

ವಿಮಲರೂಪಾಯ ವಿವಿಧ ವೇದಾಂತ ವೇದ್ಯಾಯ
ಸುಮುಖಚಿತ್ತ ಕಾಮಿತಾಯ ಶುಭ್ರ ಮಂಗಳಂ ||

ರಾಮದಾಸಾಯ ಮೃದುಲ ಹೃದಯಕಮಲ ವಾಸಾಯ
ಸ್ವಾಮಿ ಭದ್ರಗಿರಿವರಾಯ ಸರ್ವಮಂಗಳಂ ||

**ಕಲಿಯುಗದಲ್ಲಿ ಹರಿನಾಮ ಸ್ಮರಣೆಯೊಂದೇ ಪರಮಮುಖ್ಯ ಸಾಧನ**
                                         ***  ಜೈ ಶ್ರೀರಾಮ್ ***
====================================================
rAmachaMdrAya janaka rAjajA manoharAya
mAmakAbhIShTadAya mahita maMgaLaM ||

kosaleshAya maMdahAsa dAsa poShaNAya
vAsavAdi vinuta sadvarAya maMgaLaM ||

vimalarUpAya vividha vedAMta vedyAya
sumukhachitta kAmitAya shubhra maMgaLaM ||

rAmadAsAya mRRidula hRRidayakamala vAsAya
svAmi bhadragirivarAya sarvamaMgaLaM ||

ಸಂಪೂರ್ಣ ಸಾಹಿತ್ಯ

ರಾಮಚಂದ್ರಾಯ ಜನಕ ರಾಜಜಾ ಮನೋಹರಾಯ
ಮಾಮಕಾಭೀಷ್ಟದಾಯ ಮಹಿತ ಮಂಗಳಂ ||

ಕೋಸಲೇಶಾಯ ಮಂದಹಾಸ ದಾಸ ಪೋಷಣಾಯ
ವಾಸವಾದಿ ವಿನುತ ಸದ್ವರಾಯ ಮಂಗಳಂ ||

ಚಾರುಮೇಘರೂಪಾಯ ಚಂದನಾದಿ ಚರ್ಚಿತಾಯ
ಹಾರಕಟಕ ಶೋಭಿತಾಯ ಭೂರಿ ಮಂಗಳಂ||

ಲಲಿತರತ್ನ ಕುಂಡಲಾಯ ತುಳಸಿ ವನಮಾಲಾಯ
ಜಲಜ ಸದೃಶ ದೇಹಾಯ ಚಾರು ಮಂಗಳಂ ||

ದೇವಕಿ ಸುಪುತ್ರಾಯ ದೇವದೇವೋತ್ತಮಾಯ
ಭಾವಜ ಗುರುವರಾಯ ಭವ್ಯ ಮಂಗಳಂ ||

ಪುಂಡರಿಕಾಕ್ಷಾಯ ಪೂರ್ಣಚಂದ್ರವದನಾಯ
ಆಂಡಜ ವಾಹನಾಯ ಅತುಲ ಮಂಗಳಂ ||

ವಿಮಲರೂಪಾಯ ವಿವಿಧ ವೇದಾಂತ ವೇದ್ಯಾಯ
ಸುಮುಖಚಿತ್ತ ಕಾಮಿತಾಯ ಶುಭ್ರ ಮಂಗಳಂ ||

ರಾಮದಾಸಾಯ ಮೃದುಲ ಹೃದಯಕಮಲ ವಾಸಾಯ
ಸ್ವಾಮಿ ಭದ್ರಗಿರಿವರಾಯ ಸರ್ವಮಂಗಳಂ ||

Lyrics : Bhadrachala Ramadaasu / Kancharla Gopanna 
Singer: Sri BalaMuraliKrishna

rAmachaMdrAya janaka rAjajA manoharAya 
mAmakAbhIShTadAya mahita maMgaLaM ||

kosaleshAya maMdahAsa dAsa poShaNAya
vAsavAdi vinuta sadvarAya maMgaLaM ||

chArumegharUpAya chaMdanAdi charchitAya
hArakaTaka shobhitAya bhUri maMgaLaM||

lalitaratna kuMDalAya tuLasi vanamAlAya
jalaja sadRRisha dehAya chAru maMgaLaM ||

devaki suputrAya devadevottamAya
bhAvaja guruvarAya bhavya maMgaLaM ||

puMDarikAkShAya pUrNachaMdravadanAya
AMDaja vAhanAya atula maMgaLaM ||

vimalarUpAya vividha vedAMta vedyAya
sumukhachitta kAmitAya shubhra maMgaLaM ||

rAmadAsAya mRRidula hRRidayakamala vAsAya
svAmi bhadragirivarAya sarvamaMgaLaM ||

                                  ***  Jai Sri Ram ***

Monday, December 24, 2018

ಆಂಜನೇಯನೆ ಅಮರ ವಂದಿತ / Anjaneyane Amara Vandita

ಸಾಹಿತ್ಯ     : ಶ್ರೀ ವಾದಿರಾಜ ತೀರ್ಥರು
ಗಾಯಕರು : ಶ್ರೀ ವಿದ್ಯಾಭೂಷಣ 

ಹಾಡಿನ ಕೊಂಡಿ 🔻




ಆಂಜನೇಯನೆ ಅಮರ ವಂದಿತ ಕಂಜನಾಭನ ದೂತನೆ             || ಪ ||
ಮಂಜಿನೋಲಗದಂತೆ ಶರಧಿಯ ದಾಟಿದ ಮಹಾ ಧೀರನೆ            || ಅ.ಪ || 

ಆಂಜನೇಯನೆ ನಿನ್ನ ಗುಣಗಳ ಪೊಗಳಲಳವೆ ಪ್ರಖ್ಯಾತನೆ 
ಸಂಜೀವನವ ತಂದು ಕಪಿಗಳ ನಂಜು ಕಳೆದ ಪ್ರಖ್ಯಾತನೆ             || ೧ ||

ಕಾಮನಿಗ್ರಹನೆನಿಸಿ ಸುರರಭಿಮಾನಿ ದೇವತೆ ಎನಿಸಿದೆ 
ರಾಮಪಾದಕ್ಕೆರಗಿ ನಡೆದು ನಿಸ್ಸೀಮ ನೀನೆಂದೆನಿಸಿದೆ                   || ೨ ||

ಸಿಂಧು ಹಾರಿದೆ ಶ್ರೀಘ್ರದಿಂದಲಿ ಬಂದು ಸೀತೆಗೆ ನಮಿಸಿದೆ 
ತಂದು ಮುದ್ರೆಯನಿತ್ತು ಮಾತೆಯ ಮನವ ಸಂತೋಷ ಪಡಿಸಿದೆ    || ೩ ||

ಜನಕ ತನುಜೆಯ ಮನವ ಹರುಷಿಸಿ ವನವ ತಿದ್ತೀಡಾಡಿದೆ 
ದನುಜರನ್ನು ಸದೆದು ಲಂಕೆಯ ಅನಲಾಗುಹುತಿ ಮಾಡಿದೆ           || ೪ ||

ರಾಮಕಾರ್ಯವ ವಹಿಸಿ ಅಕ್ಷಕುಮಾರನನು ಸಂಹರಿಸಿದೆ 
ಘೋರ ರಕ್ಕಸರೆಂಬುವರನು ಮಾರಿವಶವನು ಗೈಸಿದೆ                  || ೫ || 

ಭರದಿ ಬಂದು ರಾಮಪಾದಕ್ಕೆರಗಿ ಬಿನ್ನಹ ಮಾಡಿದೆ 
ಉರಗಗಿರಿ ಹಯವದನನ ಪರಮ ಭಕ್ತನೆಂದೆನಿಸಿದೆ                    || ೬ ||                    

ಪದಗಳಾರ್ಥ

ಪೊಗಳಲಳವೆ - ಪೊಗಳಲು ಅಳವೇ = ಹೊಗಳಲು ಸಾಧ್ಯವೇ
ಅಳವು - ಸಾಧ್ಯವಾದುದು, ಶಕ್ತಿ, ಅಳತೆ, ವಿವೇಕ    
ದನುಜ - ರಾಕ್ಷಸ 
ಅನಲು - ಬೆಂಕಿ 
ಸದೆದು - ಅಪ್ಪಳಿಸು
ಬಿನ್ನಹ - ಪ್ರಾರ್ಥನೆ 
ಉರಗ - ಸರ್ಪ
ಹಯ - ಕುದುರೆ, ಅಶ್ವ, ತೇಜಿ, ಘೋಟ

ರಾಮ ಮಂತ್ರವ ಜಪಿಸೋ / Rama Mantrava Japiso

ಸಾಹಿತ್ಯ     : ಶ್ರೀ ಪುರಂದರದಾಸರು 
ಗಾಯಕರು : ಶ್ರೀ ವಿದ್ಯಾಭೂಷಣ  



ಧ್ವನಿಸುರಳಿಯ ಕೊಂಡಿ / Hear the song



ರಾಮ ಮಂತ್ರವ ಜಪಿಸೋ ಹೇ ಮನುಜ             || ಪ ||

ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೇಡಬೇಡ
ಸೋಮಶೇಖರ ತಂದ ಸತಿಗೆ ಪೇಳಿದ ಮಂತ್ರ           || ಅ.ಪ ||

ಕುಲಹೀನನಾದರು ಕೂಗಿ ಜಪಿಸುವ ಮಂತ್ರ
ಸಲೆ ಬೀದಿ ಬೀದಿಯೊಳು ನುಡಿವ ಮಂತ್ರ
ಹಲವು ಪಾಪಂಗಳ ಹತಗೊಳಿಸುವ ಮಂತ್ರ
ಸುಲಭದಿಂದಲಿ ಸ್ವರ್ಗ ಸೂರೆಗೊಂಬುವ ಮಂತ್ರ      || ೧ ||

ಸ್ನಾನ ಮೌನಂಗಳಿಗೆ ಸಾಧನದ ಮಂತ್ರ
ಜ್ಞಾನಿಗಳು ಮನದಿ ಧ್ಯಾನಿಪ ಮಂತ್ರ
ಹೀನ ಗುಣಂಗಳ ಹಿಂಗಿಸುವ ಮಂತ್ರ
ಏನೆಂಬೆ ವಿಭೀಷಣಗೆ ಪಟ್ಟಗಟ್ಟಿದ ಮಂತ್ರ               || ೨ ||

ಸಕಲ ವೇದಂಗಳಿಗೆ ಸಾರವೆನಿಪ ಮಂತ್ರ
"ಮುಕುತಿ ಮಾರ್ಗಕೆ ಇದೆ ಮೂಲ ಮಂತ್ರ"
ಭಕುತಿ ರಸಕೆ ಬಟ್ಟೆ ಒಮ್ಮೆ ತೋರುವ ಮಂತ್ರ
ಸುಖ ನಿಧಿ ಪುರಂದರವಿಠಲನ ಮಂತ್ರ                 || ೩ ||

**ಕಲಿಯುಗದಲ್ಲಿ ಹರಿನಾಮ ಸ್ಮರಣೆಯೊಂದೇ ಪರಮಮುಖ್ಯ ಸಾಧನ**
                                         ***  ಜೈ ಶ್ರೀರಾಮ್ ***

Sunday, December 23, 2018

ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ / Hetta Taayi Tandegala Chittava Noyisi

ಸಾಹಿತ್ಯ    : ಶ್ರೀ ಪುರಂದರದಾಸರು 
ಗಾಯಕರು: ಶ್ರೀ ವಿದ್ಯಾಭೂಷಣ  
ಗಾಯಕರು: ಶ್ರೀ ಭರತೀಶ  



ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ
ನಿತ್ಯ ದಾನವ ಮಾಡಿ ಫಲವೇನು                       || ಪ ||

ಸತ್ಯ ಸದಾಚಾರ ಇಲ್ಲದವನು
ಜಪ ಹತ್ತುಸಾವಿರ ಮಾಡಿ ಫಲವೇನು                || ಅ.ಪ ||

ತನ್ನ ಸತಿ ಸುತರು ಬಂಧುಗಳ ನೋಯಿಸಿ
ಚಿನ್ನ ದಾನವ ಮಾಡಿ ಫಲವೇನು
ಬಿನ್ನಾಣದಿಂದಲಿ ದೇಶ ದೇಶವ ತಿರುಗಿ
ಅನ್ನ ದಾನವ ಮಾಡಿ ಫಲವೇನು                      || ೧ ||

ಗೋಪ್ಯ ಗುಣ ಗುಟ್ಟು ಇಲ್ಲದ ಹೆಣ್ಣಿಗೆ
ರೂಪ ಯೌವನವಿದ್ದು ಫಲವೇನು
ತಾಪತ್ರಯದಿ ಸಂಸಾರ ಕೆಡಿಸುವಂಥ
ಪಾಪಿ ಮಗನು ಇದ್ದು ಫಲವೇನು                      || ೨ ||

ತುಂಡು ಧನದಿಂದ ತಂದೆ ಮಾತು ಕೇಳದ
ತೊಂಡ ಮಗನು ಇದ್ದು ಫಲವೇನು
ಭಂಡು ಮಾಡಿ ಅತ್ತೆ ಮಾವನ ಬೈವ
ಪುಂಡು ಸೋಸೆಯಿದ್ದು ಫಲವೇನು                  || ೩ ||

ಸ್ನಾನಕ್ಕೆ ಪಾನಕ್ಕೆ ಆಗುವ ತಿಳಿ ನೀರು
ಕಾನನ ದೊಳಗಿದ್ದು ಫಲವೇನು
ಆನಂದ ಮೂರುತಿ ಪುರಂದರ ವಿಠ್ಠಲನ್ನ
ನೆನೆಯದ ತನುವಿದ್ದು ಫಲವೇನು                     || ೪ ||


ಪದಗಳಾರ್ಥ:
=========
ತೊಂಡ :  ಕಳ್ಳ, ಚೋರ, ಠಕ್ಕ
ಪುಂಡು : ಕಟ್ಟಲೆ ಮೀರಿದ, ಹತೋಟಿಗೆ ಸಿಗದ

ಹಾಡಿನ ಕೊಂಡಿ 🔻
ಗಾಯಕರು: ಶ್ರೀ ವಿದ್ಯಾಭೂಷಣ 

ಗಾಯಕರು: ಶ್ರೀ ಭರತೀಶ   

Saturday, December 22, 2018

ಜಗದೋದ್ಧಾರನ / Jagadhodhaarana

ಸಾಹಿತ್ಯ: ಶ್ರೀ ಪುರಂದರದಾಸರು 
ಗಾಯಕರು: ಶ್ರೀ ವಿದ್ಯಾಭೂಷಣ  



ಧ್ವನಿಸುರಳಿಯ ಕೊಂಡಿ / Hear the song 



ಜಗದೋದ್ಧಾರನ ಆಡಿಸಿದಳೆಶೋಧೆ          || ಪ ||

ಜಗದೋದ್ಧಾರನ ಮಗನೆಂದು ತಿಳಿಯುತ
ಸುಗುಣಾಂತ ರಂಗನ ಆಡಿಸಿದಳೆಶೋಧೆ    || ೧ ||

ನಿಗಮಕೆ ಸಿಲುಕದ ಅಗಣಿತ ಮಹಿಮನ
ಮಗುಗಳ ಮಾಣಿಕ್ಯನ ಆಡಿಸಿದಳೆಶೋಧೆ    || ೨ ||

ಅಣೋರಣೀಯನ ಮಹತೋ ಮಹೀಯ
ಅಪ್ರಮೇಯನ ಆಡಿಸಿದಳೆಶೋಧೆ             || ೩ ||

ಪರಮಪುರುಷನ ಪರವಾಸುದೇವನ 
ಪುರಂದರ ವಿಠಲನ ಆಡಿಸಿದಳೆಶೋಧೆ      || ೪ ||

ಕಂಡೆನ ನಾ ಗೋವಿಂದನ / Kande na Govindana

ಸಾಹಿತ್ಯ: ಶ್ರೀ ಪುರಂದರದಾಸರು 
ಗಾಯಕರು: ಶ್ರೀ ವಿದ್ಯಾಭೂಷಣ  



ಧ್ವನಿಸುರಳಿಯ ಕೊಂಡಿ / Hear the song 


ಕಂಡೆನ ನಾ ಗೋವಿಂದನ                     || ಪ ||
ಪುಂಡರೀಕಾಕ್ಷ ಪಾಂಡವಪಕ್ಷ ಕೃಷ್ಣನ        || ಅ.ಪ ||

ಕೇಶವ ನಾರಾಯಣ ಶ್ರೀ ಕೃಷ್ಣನ 
ವಾಸುದೇವ ಅಚ್ಯುತ ಅನಂತನ 
ಸಾಸಿರ ನಾಮದ ಶ್ರೀ ಹೃಷಿಕೇಶನ 
ಶೇಷಶಯನ ನಮ್ಮ ವಾಸುದೇವ ಸುತನ    || ೧ ||

ಪುರುಷೋತ್ತಮ ನರಹರಿ ಶ್ರೀ ಕೃಷ್ಣನ 
ಶರಣಾಗತ ಜನ ರಕ್ಷಕನ 
ಕರುಣಾಕರ ನಮ್ಮ ಪುರಂದರವಿಠಲನ 
ನೆರೆ ನಂಬಿದೆನು ಬೇಲೂರ ಚೆನ್ನಿಗನ         || ೨ ||


Sunday, December 16, 2018

ಜಾಲಿಯ ಮರದಂತೆ / Jaaliya Maradante

ಸಾಹಿತ್ಯ: ಶ್ರೀ ಪುರಂದರದಾಸರು 
ಗಾಯಕರು: ಶ್ರೀ ವಿದ್ಯಾಭೂಷಣ  



ಧ್ವನಿಸುರಳಿಯ ಕೊಂಡಿ / Hear the song 


ಜಾಲಿಯ ಮರದಂತೆ ದುರ್ಜನರು                        || ಪ ||
ಮೂಲಾಗ್ರ ಪರಿಯಂತ ಮುಳ್ಳು ಕೂಡಿಪ್ಪಂತೆ           || ಅ.ಪ ||

ಬಿಸಿಲಲಿ ಬಳಲಿ ಬಂದವರಿಗೆ ನೆರಳಿಲ್ಲ
ಹಸಿದು ಬಂದವರಿಗೆ ಹಣ್ಣು ಇಲ್ಲ
ಕುಸುಮ ವಾಸನೆ ಇಲ್ಲ, ಕೂಡಲು ಸ್ಥಳವಿಲ್ಲ
ರಸದಲ್ಲಿ ಸ್ವಾದವು, ವಿಷದಂತೆ ಇರುತಿಹ                || ೧ ||

ಊರ ಹಂದಿಗೆ ಷಡ್ರಸಾನ್ನ ಇಕ್ಕಲು
ನಾರುವ ದುರ್ಗಂಧ, ಬಿಡ ಬಲ್ಲುದೇ
ಘೋರ ಪಾಪಿಗೆ ತತ್ವಜ್ಞಾನ ಪೇಳಲು
ಕ್ರೂರ ಕರ್ಮವ ಬಿಟ್ಟು ಸುಜನನಾಗುವನೆ                  || ೨ ||

ತನ್ನಿಂದ ಉಪಕಾರ ತೊಟಕಾದರೂ ಇಲ್ಲ
ಬಿನ್ನಾಣ ಮಾತಿಗೆ ಕೊನೆಯಿಲ್ಲವೂ
ಅನ್ನಕ್ಕೆ ಸೇರಿದ ಕುನ್ನಿ ಮಾನವರಂತೆ
ಇನ್ನಿವರ ಕಾರ್ಯವು ಪುರಂದರವಿಠ್ಠಲಾ                  || ೩ ||

ತಾತ್ಪರ್ಯ: 

ಆಚಾರವಿಲ್ಲದ ನಾಲಿಗೆ / Aachaaravillada Naalige

ಸಾಹಿತ್ಯ: ಶ್ರೀ ಪುರಂದರದಾಸರು 
ಗಾಯಕರು: ಶ್ರೀಮತಿ ಎಸ್.ಜಾನಕಿ 




ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ                    || ಪ ||
ವಿಚಾರವಿಲ್ಲದೆ ಪರರ ದೂಷಿಸುವುದಕೆ ಚಾಚಿಕೊಂಡಿರುವಂತಹ ನಾಲಿಗೆ   || ಅ.ಪ || 

ಪ್ರಾತಃ ಕಾಲದೊಳೆದ್ದು ನಾಲಿಗೆ 
ಶ್ರೀಪತಿ ಎನ್ನಬಾರದೆ ನಾಲಿಗೆ
ಪತಿತಪಾವನ ನಮ್ಮ ರತಿಪತಿ ಜನಕನ 
ಸತತವು ನುಡಿ ಕಂಡ್ಯ ನಾಲಿಗೆ                                                        || ೧ ||

ಚಾಡಿಯ ಹೇಳಲು ಬೇಡ ನಾಲಿಗೆ 
ನಿನ್ನ ಬೇಡಿ ಕೊಂಬೆನು ನಾಲಿಗೆ
ರೂಢಿಗೊಡೆಯ ಶ್ರೀ ರಾಮನ ನಾಮವ 
ಪಾಡುತಲಿರು ಕಂಡ್ಯ ನಾಲಿಗೆ                                                         || ೨ ||

ಹರಿಯ ಸ್ಮರಣೆ ಮಾಡು ನಾಲಿಗೆ 
ನರಹರಿಯ ಭಜಿಸು ಕಂಡ್ಯ ನಾಲಿಗೆ
ವರದ ಪುರಂದರ ವಿಠ್ಠಲರಾಯನ 
ಚರಣ ಕಮಲ ನೆನೆ ನಾಲಿಗೆ                                                           || ೩ ||

ಧ್ವನಿಸುರಳಿಯ ಕೊಂಡಿ / Hear the song 



ದೃಷ್ಟಿ ನಿನ್ನ ಪಾದದಲ್ಲಿ / Drushti ninna paadadalli

ಸಾಹಿತ್ಯ: ಶ್ರೀ ಪುರಂದರದಾಸರು 
ಗಾಯಕರು: ಶ್ರೀ ಶಂಕರ್ ಶಾನಭೋಗ್ 


ಧ್ವನಿಸುರಳಿಯ ಕೊಂಡಿ / Hear the song 


ದೃಷ್ಟಿ ನಿನ್ನ ಪಾದದಲ್ಲಿ ನೆಡೋ ಹಾಂಗೆ ಕೃಷ್ಣ                    || ಪ ||
ದುಷ್ಟ ಜನ ಸಂಗವನ್ನು ಬಿಡೋ ಹಾಂಗೆ
ಕೆಟ್ಟ ಮಾತು ಕಿವಿಗೆ ಕೇಳಿಸದ್ಹಾಂಗೆ
ಮನ ಕಟ್ಟಿಸಯ್ಯ ನಿನ್ನ ಪಾದ ಬಿಡದ್ಹಾಂಗೆ                       || ೧ ||

ದಿಟ್ಟನಾಗಿ ಕೈಯಾನೆತ್ತಿ ಕೊಡೊ ಹಾಂಗೆ
ಕೃಷ್ಣ ನಿನ್ನ ಪೂಜೆಯನ್ನು ನಾ ಮಾಡೋ ಹಾಂಗೆ
ಭ್ರಷ್ಟನಾಗಿ ನಾಲ್ವರೊಳು ತಿರುಗದ್ಹಾಂಗೆ
ಶಿಷ್ಟ ಜನ ಸೇವೆಯನ್ನು ಮಾಡೋ ಹಾಂಗೆ                        || ೨ ||

ಹುಟ್ಟಿಸಿದ ತಾಯಿತಂದೆಯಲ್ಲೋ ನೀನು ಕೃಷ್ಣ
ಹೊಟ್ಟೆಗಾಗಿ ದೈನ್ಯಪಡಲಾರೆ ನಾನು
ಪಟ್ಟೆಪಟ್ಟಾವಳಿ ಬೇಡಲಿಲ್ಲ ನಾನು
ಗುಟ್ಟು ಅಭಿಮಾನಗಳ ಕಾಯೋ ನೀನು                         || ೩ ||

ನಟ್ಟ ನಡು ನೀರೊಳಗೆ ಈಸರಾಲೆ ನಾ
ಕಟ್ಟೆ ಸೇರಿಸಬೇಕಯ್ಯ ನೀನು
ಬೆಟ್ಟದಂತ ಪಾಪಗಳ ಹೊತ್ತಿರುವೆ ನಾನು
ಸುಟ್ಟು ಬಿಡು ಪುರಂದರ ವಿಠ್ಠಲ ನೀನು                          || ೪ ||

ಬುದ್ಧಿ ಮಾತು ಹೇಳಿದರೆ ಕೇಳಬೇಕಮ್ಮ / Buddhi maatu helidare kelabekamma

ಸಾಹಿತ್ಯ: ಶ್ರೀ ಪುರಂದರದಾಸರು 
ಗಾಯಕರು: ಶ್ರೀ ಶಂಕರ್ ಶಾನಭೋಗ್ 


ಧ್ವನಿಸುರಳಿಯ ಕೊಂಡಿ / Hear the song 

 


ಬುದ್ಧಿ ಮಾತು ಹೇಳಿದರೆ ಕೇಳಬೇಕಮ್ಮ                       || ಪ ||
ಮನದಿ ಶುದ್ಧಳಾಗಿ ಗಂಡನೊಡನೆ ಬಾಳಬೇಕಮ್ಮ          || ಅ.ಪ || 

ಅತ್ತೆಮಾವಗಂಜಿಕೊಂಡು ನಡೆಯಬೇಕಮ್ಮ 
ಚಿತ್ತದೊಲ್ಲಭನ ಅಕ್ಕರೆಯನ್ನು ಪಡೆಯಬೇಕಮ್ಮ 
ಹೊತ್ತುಹೊತ್ತಿಗೆ ಮನೆಯ ಕೆಲಸ ಮಾಡಬೇಕಮ್ಮ 
ಹತ್ತು ಮಂದಿ ಒಪ್ಪುವ ಹಾಗೆ ನುಡಿಯಬೇಕಮ್ಮ              || ೧ ||

ಕೊಟ್ಟು ಕೊಂಬುವ ನೆಂಟರಲ್ಲಿ ದ್ವೇಷ ಬೇಡಮ್ಮ 
ಅಟ್ಟು ಉಂಬುವ ಕಾಲದಲ್ಲಿ ಆಟ ಬೇಡಮ್ಮ 
ಹಟ್ಟಿ ಬಾಗಿಲಲ್ಲಿ ಬಂದು ನಿಲ್ಲ ಬೇಡಮ್ಮ 
ಕಟ್ಟಿ ಆಳುವ ಗಂಡನೊಡನೆ ಸಿಟ್ಟು ಬೇಡಮ್ಮ                 || ೨ ||

ನೆರೆಹೊರೆಯವರಿಗೆ ನ್ಯಾಯವನ್ನು ಹೇಳಬೇಡಮ್ಮ 
ಗರ್ವ ಕೋಪ ಮತ್ಸರವನ್ನು ಮಾಡಬೇಡಮ್ಮ 
ಪರರ ನಿಂದಿಪ ಹೆಂಗಳೊಡನೆ ಬೇರೆಯಬೇಡಮ್ಮ 
ಗುರು ಪುರಂದರ ವಿಠ್ಠಲನ್ನ ಮರೆಯಬೇಡಮ್ಮ               || ೩ ||

Wednesday, December 12, 2018

ನಿಂದಕರಿರಬೇಕು / Nindakarirabeku

ಸಾಹಿತ್ಯ: ಶ್ರೀ ಪುರಂದರದಾಸರು 
ಗಾಯಕರು: ಶ್ರೀ ಬಾಲಮುರಳಿಕೃಷ್ಣ 


ಧ್ವನಿಸುರಳಿಯ ಕೊಂಡಿ / Hear the song 


ನಿಂದಕರಿರಬೇಕು                                        || ಪ || 
ಹಂದಿಯಿದ್ದರೆ ಕೇರಿ ಹೇಗೆ, ಶುದ್ಧಿಯೋ ಹಾಗೆ      || ಅ.ಪ || 

ಅಂದಂದು ಮಾಡಿದ ಪಾಪವೆಂಬ ಮಲ 
ತಿಂದು ಹೋಗುವರಯ್ಯ ನಿಂದಕರು
ವಂದಿಸಿ ಸ್ತುತಿಸುವ ಜನರೆಲ್ಲರು 
ನಮ್ಮ ಪೊಂದಿಹ ಪುಣ್ಯವನು ಒಯ್ಯುವರಯ್ಯ       || ೧ ||

ದುಷ್ಟಜನರು ಈ ಸೃಷ್ಟಿಯೊಳಿದ್ದರೆ 
ಶಿಷ್ಟ ಜನರಿಗೆಲ್ಲ ಕೀರ್ತಿಗಳು
ಇಷ್ಟಪ್ರದ ಶ್ರೀಕೃಷ್ಣ ನಿನ್ನೊಳು 
ಇಷ್ಟೇ ವರವನು ಬೇಡುವೆನಯ್ಯ                       || ೨ ||

ದುರಳ ಜನಂಗಳು ಚಿರಕಾಲವಿರುವಂತೆ 
ಕರವ ಮುಗಿದು ವರ ಬೇಡುವೆನು 
ಪರಿಪರಿ ತಮಸಿಗೆ ಗುರಿಯಹರಲ್ಲದೆ 
ಪರಮ ದಯಾನಿಧೆ ಪುರಂದರವಿಠ್ಠಲ               || ೩ ||

ಪ್ರದ : ಕೊಡುವವನು

ಹೆಂಡತಿ ಪ್ರಾಣ ಹಿಂಡುತಿ / Hendati Praana Hinduti

ಸಾಹಿತ್ಯ: ಶ್ರೀ ಪುರಂದರದಾಸರು 
ಸಂಗೀತ ಸಂಯೋಜಕರು & ಗಾಯಕರು : ಶ್ರೀ ಸಿ.ಅಶ್ವಥ್ 


ಧ್ವನಿಸುರಳಿಯ ಕೊಂಡಿ / Hear the song 


ಹೆಂಡತಿ ಪ್ರಾಣ ಹಿಂಡುತಿ                                   || ಪ ||
ದೊಡ್ಡ ಕೊಂಡ ಕೋತಿಯಂತೆ ಕುಣಿಕುಣಿಸುತ್ತಿ          ||ಅ.ಪ ||

ಹೊತ್ತಾರೆ ಏಳುತ್ತಿ, ಹೊರಗೆ ತಿರುಗಾಡುತ್ತಿ
ಹೊತ್ತು ಹೋಯಿತು, ಭತ್ಯ ತಾ ಎನ್ನುತ್ತಿ
ಉತ್ತಮ ಗುರುಹಿರಿಯರ ಮಾತನ್ನು ಮೀರುತ್ತಿ
ಮೃತ್ಯು ದೇವತೆಯಂತೆ ಮನೆಯೊಳಗಿರುತಿ             || ೧ ||

ಇಲ್ಲದ್ದು ಬೇಡುತ್ತಿ, ಸುಳ್ಳನ್ನು ಮಾತಾಡುತ್ತಿ
ಒಳ್ಳೆ ಊಟವನುಂಡು ಕುಳಿತಿರ್ಪೆನಂತಿ
ಎಳ್ಳಿನಷ್ಟೂ ಕೆಲಸ ಮಾಡಲಾರೆನೆಂತಿ
ಎಲ್ಲೆಲ್ಲಿ ತಲೆ ಎತ್ತದ ಹಾಗೆ ಮಾಡುತ್ತಿ                        || ೨ ||

ಹಿರಿಯತನಕೆ ಹೋಗುತ್ತಿ, ಗರುವಿಕೆ ಮಾಡುತ್ತಿ
ನೆರೆಹೊರೆಯರ ಕೂಡ ಬಡಿದಾಡುತ್ತಿ
ದೊರೆ ಸಿರಿಪುರಂದರವಿಠಲನ ಸ್ಮರಿಸದೆ
ದುರಿತಕ್ಕೆ ಗುರಿಯಾಗಿ ನೀ ನಿಲ್ಲುತ್ತಿ                            || ೩ ||

ಕ್ಲಿಷ್ಟ ಪದಗಳ ಅರ್ಥ :
------------------
ಭತ್ಯ : allowance

Saturday, December 8, 2018

ವಂದೇ ವಂದ್ಯಂ ಸದಾನಂದಂ / Vande Vandyam Sadaanandam

ಸಾಹಿತ್ಯ    : ಶ್ರೀ ಮಧ್ವಾಚಾರ್ಯರು  
ಗಾಯಕರು: ಶ್ರೀ ಬಾಲಮುರಳಿಕೃಷ್ಣ
ಗಾಯಕರು: ಶ್ರೀ ವಿದ್ಯಾಭೂಷಣ



ಗಾಯಕರು: ಶ್ರೀ ಬಾಲಮುರಳಿಕೃಷ್ಣ : ಧ್ವನಿಸುರಳಿಯ ಕೊಂಡಿ / Hear the song 


ವಂದೇ ವಂದ್ಯಂ ಸದಾನಂದಂ ವಾಸುದೇವಂ ನಿರಂಜನಂ
ವಂದೇ ವಂದೇ ವಂದೇ ವಂದೇ                                       || ಪ || 

ವಂದೇ ವಂದ್ಯಂ ಸದಾನಂದಂ ವಾಸುದೇವಂ ನಿರಂಜನಂ
ಇಂದಿರಾಪತಿಮಾದ್ಯಾದಿ ವರದೇಶ ವರಪ್ರದಮ್                   || ೧.೧ ||

ನಮಾಮಿ ನಿಖಿಲಾಧೀಶ ಕಿರೀಟಾಘೃಷ್ಟಪೀಠವತ್ |
ಹೃತ್ತಮಃ ಶಮನೇsರ್ಕಾಭಂ ಶ್ರೀಪತೇಃ ಪಾದಪಂಕಜಮ್        || ೧.೨ ||

ಜಾಂಬೂನದಾಂಬರಾಧಾರಂ ನಿತಂಬಂ ಚಿಂತ್ಯಮೀಶಿತುಃ
ಸ್ವರ್ಣಮಂಜೀರಸಂವೀತಂ ಆರೂಢಂ ಜಗದಂಬಯಾ           || ೧.೩ ||

ಶಂಖಚಕ್ರಗದಾಪದ್ಮ ಧರಾಶ್ಚಿಂತ್ಯಾ ಹರೇರ್ಭುಜಾಃ |
ಪೀನವೃತ್ತಾ ಜಗದ್ರಕ್ಷಾ ಕೇವಲೋದ್ಯೋಗಿನೋsನಿಶಮ್           || ೧.೬ ||

ಸ್ಮರಾಮಿ ಭವಸಂತಾಪ ಹಾನಿದಾಮೃತಸಾಗರಮ್
ಪೂರ್ಣಾನಂದಸ್ಯ ರಾಮಸ್ಯ ಸಾನುರಾಗಾವಲೋಕನಮ್           || ೧.೧೦ ||

ಧ್ಯಾಯೇದಜಸ್ರಮೀಶಸ್ಯ ಪದ್ಮಜಾದಿಪ್ರತೀಕ್ಷಿತಮ್ |
ಭ್ರೂಭಂಗಂ ಪಾರಮೇಷ್ಠಯಾದಿ ಪದದಾಯಿ ವಿಮುಕ್ತಿದಮ್     || ೧.೧೧ ||

ಸಂತತಂ ಚಿಂತಯೇsನಂತಂ ಅಂತಕಾಲೇ ವಿಶೇಷತಃ
ನೈವೋದಾಪುಃ ಗೃಣಂತೋಂತಂ ಯದ್ಗುಣಾನಾಂ ಅಜಾದಯಃ || ೧.೧೨ ||

-----------------------------------------------------

ಗಾಯಕರು: ಶ್ರೀ ವಿದ್ಯಾಭೂಷಣ : ಧ್ವನಿಸುರಳಿಯ ಕೊಂಡಿ / Hear the song 



ವಂದೇ ವಂದ್ಯಂ                                                      ||  ||
ವಂದೇ ವಂದ್ಯಂ ಸದಾನಂದಂ ವಾಸುದೇವಂ ನಿರಂಜನಂ
ಇಂದಿರಾಪತಿಮಾದ್ಯಾದಿ ವರದೇಶ ವರಪ್ರದಮ್               || ೧.೧ ||

ನಮಾಮಿ ನಿಖಿಲಾಧೀಶ ಕಿರೀಟಾಘೃಷ್ಟಪೀಠವತ್ |
ಹೃತ್ತಮಃ ಶಮನೇsರ್ಕಾಭಂ ಶ್ರೀಪತೇಃ ಪಾದಪಂಕಜಮ್    || ೧.೨ ||

ಜಾಂಬೂನದಾಂಬರಾಧಾರಂ ನಿತಂಬಂ ಚಿಂತ್ಯಮೀಶಿತುಃ
ಸ್ವರ್ಣಮಂಜೀರಸಂವೀತಂ ಆರೂಢಂ ಜಗದಂಬಯಾ       || ೧.೩ ||

ಉದರಂ ಚಿಂತ್ಯಂ ಈಶಸ್ಯ ತನುತ್ವೇsಪಿ ಅಖಿಲಂಬರಮ್
ವಲಿತ್ರಯಾಂಕಿತಂ ನಿತ್ಯಂ ಆರೂಢಂ ಶ್ರಿಯೈಕಯಾ            || ೧.೪ ||

ಸ್ಮರಣೀಯಮುರೋ ವಿಷ್ಣೋಃ ಇಂದಿರಾವಾಸಮುತ್ತಮಮ್
ಅನಂತಂ ಅಂತವದಿವ ಭುಜಯೋರಂತರಂಗತಮ್          || ೧.೫ ||

ಶಂಖಚಕ್ರಗದಾಪದ್ಮ ಧರಾಶ್ಚಿಂತ್ಯಾ ಹರೇರ್ಭುಜಾಃ |
ಪೀನವೃತ್ತಾ ಜಗದ್ರಕ್ಷಾ ಕೇವಲೋದ್ಯೋಗಿನೋsನಿಶಮ್         || ೧.೬ ||

ಸಂತತಂ ಚಿಂತಯೇತ್ಕಂಠಂ ಭಾಸ್ವತ್ಕೌಸ್ತುಭಭಾಸಕಮ್
ವೈಕುಂಠಸ್ಯಾಖಿಲಾ ವೇದಾ ಉದ್ಗೀರ್ಯಂತೇsನಿಶಂ ಯತಃ     || ೧.೭ ||

ಸ್ಮರೇತ ಯಾಮಿನೀನಾಥ ಸಹಸ್ರಾಮಿತ ಕಾಂತಿಮತ್ |
ಭವತಾಪಾಪನೋದೀಡ್ಯಂ ಶ್ರೀಪತೇಃ ಮುಖಪಂಕಜಮ್          || ೧.೮ ||

ಪೂರ್ಣಾನನ್ಯಸುಖೋದ್ಭಾಸಿಂ ಅಂದಸ್ಮಿತಮಧೀಶಿತುಃ |
ಗೋವಿಂದಸ್ಯ ಸದಾ ಚಿಂತ್ಯಂ ನಿತ್ಯಾನಂದಪದಪ್ರದಮ್             || ೧.೯ ||

ಸ್ಮರಾಮಿ ಭವಸಂತಾಪ ಹಾನಿದಾಮೃತಸಾಗರಮ್
ಪೂರ್ಣಾನಂದಸ್ಯ ರಾಮಸ್ಯ ಸಾನುರಾಗಾವಲೋಕನಮ್            || ೧.೧೦ ||

ಧ್ಯಾಯೇದಜಸ್ರಮೀಶಸ್ಯ ಪದ್ಮಜಾದಿಪ್ರತೀಕ್ಷಿತಮ್ |
ಭ್ರೂಭಂಗಂ ಪಾರಮೇಷ್ಠಯಾದಿ ಪದದಾಯಿ ವಿಮುಕ್ತಿದಮ್      || ೧.೧೧ ||

ಸಂತತಂ ಚಿಂತಯೇsನಂತಂ ಅಂತಕಾಲೇ ವಿಶೇಷತಃ
ನೈವೋದಾಪುಃ ಗೃಣಂತೋಂತಂ ಯದ್ಗುಣಾನಾಂ ಅಜಾದಯಃ  || ೧.೧೨ ||

ಇತಿ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯ ವಿರಚಿತ ದ್ವಾದಶ ಸ್ತೋತ್ರೇಷು ಪ್ರಥಮ ಸ್ತೋತ್ರಂ ಸಂಪೂರ್ಣಮ್