Sunday, December 16, 2018

ಆಚಾರವಿಲ್ಲದ ನಾಲಿಗೆ / Aachaaravillada Naalige

ಸಾಹಿತ್ಯ: ಶ್ರೀ ಪುರಂದರದಾಸರು 
ಗಾಯಕರು: ಶ್ರೀಮತಿ ಎಸ್.ಜಾನಕಿ 




ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ                    || ಪ ||
ವಿಚಾರವಿಲ್ಲದೆ ಪರರ ದೂಷಿಸುವುದಕೆ ಚಾಚಿಕೊಂಡಿರುವಂತಹ ನಾಲಿಗೆ   || ಅ.ಪ || 

ಪ್ರಾತಃ ಕಾಲದೊಳೆದ್ದು ನಾಲಿಗೆ 
ಶ್ರೀಪತಿ ಎನ್ನಬಾರದೆ ನಾಲಿಗೆ
ಪತಿತಪಾವನ ನಮ್ಮ ರತಿಪತಿ ಜನಕನ 
ಸತತವು ನುಡಿ ಕಂಡ್ಯ ನಾಲಿಗೆ                                                        || ೧ ||

ಚಾಡಿಯ ಹೇಳಲು ಬೇಡ ನಾಲಿಗೆ 
ನಿನ್ನ ಬೇಡಿ ಕೊಂಬೆನು ನಾಲಿಗೆ
ರೂಢಿಗೊಡೆಯ ಶ್ರೀ ರಾಮನ ನಾಮವ 
ಪಾಡುತಲಿರು ಕಂಡ್ಯ ನಾಲಿಗೆ                                                         || ೨ ||

ಹರಿಯ ಸ್ಮರಣೆ ಮಾಡು ನಾಲಿಗೆ 
ನರಹರಿಯ ಭಜಿಸು ಕಂಡ್ಯ ನಾಲಿಗೆ
ವರದ ಪುರಂದರ ವಿಠ್ಠಲರಾಯನ 
ಚರಣ ಕಮಲ ನೆನೆ ನಾಲಿಗೆ                                                           || ೩ ||

ಧ್ವನಿಸುರಳಿಯ ಕೊಂಡಿ / Hear the song 



No comments:

Post a Comment