Sunday, December 16, 2018

ಬುದ್ಧಿ ಮಾತು ಹೇಳಿದರೆ ಕೇಳಬೇಕಮ್ಮ / Buddhi maatu helidare kelabekamma

ಸಾಹಿತ್ಯ: ಶ್ರೀ ಪುರಂದರದಾಸರು 
ಗಾಯಕರು: ಶ್ರೀ ಶಂಕರ್ ಶಾನಭೋಗ್ 


ಧ್ವನಿಸುರಳಿಯ ಕೊಂಡಿ / Hear the song 

 


ಬುದ್ಧಿ ಮಾತು ಹೇಳಿದರೆ ಕೇಳಬೇಕಮ್ಮ                       || ಪ ||
ಮನದಿ ಶುದ್ಧಳಾಗಿ ಗಂಡನೊಡನೆ ಬಾಳಬೇಕಮ್ಮ          || ಅ.ಪ || 

ಅತ್ತೆಮಾವಗಂಜಿಕೊಂಡು ನಡೆಯಬೇಕಮ್ಮ 
ಚಿತ್ತದೊಲ್ಲಭನ ಅಕ್ಕರೆಯನ್ನು ಪಡೆಯಬೇಕಮ್ಮ 
ಹೊತ್ತುಹೊತ್ತಿಗೆ ಮನೆಯ ಕೆಲಸ ಮಾಡಬೇಕಮ್ಮ 
ಹತ್ತು ಮಂದಿ ಒಪ್ಪುವ ಹಾಗೆ ನುಡಿಯಬೇಕಮ್ಮ              || ೧ ||

ಕೊಟ್ಟು ಕೊಂಬುವ ನೆಂಟರಲ್ಲಿ ದ್ವೇಷ ಬೇಡಮ್ಮ 
ಅಟ್ಟು ಉಂಬುವ ಕಾಲದಲ್ಲಿ ಆಟ ಬೇಡಮ್ಮ 
ಹಟ್ಟಿ ಬಾಗಿಲಲ್ಲಿ ಬಂದು ನಿಲ್ಲ ಬೇಡಮ್ಮ 
ಕಟ್ಟಿ ಆಳುವ ಗಂಡನೊಡನೆ ಸಿಟ್ಟು ಬೇಡಮ್ಮ                 || ೨ ||

ನೆರೆಹೊರೆಯವರಿಗೆ ನ್ಯಾಯವನ್ನು ಹೇಳಬೇಡಮ್ಮ 
ಗರ್ವ ಕೋಪ ಮತ್ಸರವನ್ನು ಮಾಡಬೇಡಮ್ಮ 
ಪರರ ನಿಂದಿಪ ಹೆಂಗಳೊಡನೆ ಬೇರೆಯಬೇಡಮ್ಮ 
ಗುರು ಪುರಂದರ ವಿಠ್ಠಲನ್ನ ಮರೆಯಬೇಡಮ್ಮ               || ೩ ||

No comments:

Post a Comment