ಗಾಯಕರು: ಶ್ರೀ ವಿದ್ಯಾಭೂಷಣ
ಜಾಲಿಯ ಮರದಂತೆ ದುರ್ಜನರು || ಪ ||
ಮೂಲಾಗ್ರ ಪರಿಯಂತ ಮುಳ್ಳು ಕೂಡಿಪ್ಪಂತೆ || ಅ.ಪ ||
ಬಿಸಿಲಲಿ ಬಳಲಿ ಬಂದವರಿಗೆ ನೆರಳಿಲ್ಲ
ಹಸಿದು ಬಂದವರಿಗೆ ಹಣ್ಣು ಇಲ್ಲ
ಕುಸುಮ ವಾಸನೆ ಇಲ್ಲ, ಕೂಡಲು ಸ್ಥಳವಿಲ್ಲ
ರಸದಲ್ಲಿ ಸ್ವಾದವು, ವಿಷದಂತೆ ಇರುತಿಹ || ೧ ||
ಊರ ಹಂದಿಗೆ ಷಡ್ರಸಾನ್ನ ಇಕ್ಕಲು
ನಾರುವ ದುರ್ಗಂಧ, ಬಿಡ ಬಲ್ಲುದೇ
ಘೋರ ಪಾಪಿಗೆ ತತ್ವಜ್ಞಾನ ಪೇಳಲು
ಕ್ರೂರ ಕರ್ಮವ ಬಿಟ್ಟು ಸುಜನನಾಗುವನೆ || ೨ ||
ತನ್ನಿಂದ ಉಪಕಾರ ತೊಟಕಾದರೂ ಇಲ್ಲ
ಬಿನ್ನಾಣ ಮಾತಿಗೆ ಕೊನೆಯಿಲ್ಲವೂ
ಅನ್ನಕ್ಕೆ ಸೇರಿದ ಕುನ್ನಿ ಮಾನವರಂತೆ
ಇನ್ನಿವರ ಕಾರ್ಯವು ಪುರಂದರವಿಠ್ಠಲಾ || ೩ ||
ತಾತ್ಪರ್ಯ:
No comments:
Post a Comment