Wednesday, December 12, 2018

ನಿಂದಕರಿರಬೇಕು / Nindakarirabeku

ಸಾಹಿತ್ಯ: ಶ್ರೀ ಪುರಂದರದಾಸರು 
ಗಾಯಕರು: ಶ್ರೀ ಬಾಲಮುರಳಿಕೃಷ್ಣ 


ಧ್ವನಿಸುರಳಿಯ ಕೊಂಡಿ / Hear the song 


ನಿಂದಕರಿರಬೇಕು                                        || ಪ || 
ಹಂದಿಯಿದ್ದರೆ ಕೇರಿ ಹೇಗೆ, ಶುದ್ಧಿಯೋ ಹಾಗೆ      || ಅ.ಪ || 

ಅಂದಂದು ಮಾಡಿದ ಪಾಪವೆಂಬ ಮಲ 
ತಿಂದು ಹೋಗುವರಯ್ಯ ನಿಂದಕರು
ವಂದಿಸಿ ಸ್ತುತಿಸುವ ಜನರೆಲ್ಲರು 
ನಮ್ಮ ಪೊಂದಿಹ ಪುಣ್ಯವನು ಒಯ್ಯುವರಯ್ಯ       || ೧ ||

ದುಷ್ಟಜನರು ಈ ಸೃಷ್ಟಿಯೊಳಿದ್ದರೆ 
ಶಿಷ್ಟ ಜನರಿಗೆಲ್ಲ ಕೀರ್ತಿಗಳು
ಇಷ್ಟಪ್ರದ ಶ್ರೀಕೃಷ್ಣ ನಿನ್ನೊಳು 
ಇಷ್ಟೇ ವರವನು ಬೇಡುವೆನಯ್ಯ                       || ೨ ||

ದುರಳ ಜನಂಗಳು ಚಿರಕಾಲವಿರುವಂತೆ 
ಕರವ ಮುಗಿದು ವರ ಬೇಡುವೆನು 
ಪರಿಪರಿ ತಮಸಿಗೆ ಗುರಿಯಹರಲ್ಲದೆ 
ಪರಮ ದಯಾನಿಧೆ ಪುರಂದರವಿಠ್ಠಲ               || ೩ ||

ಪ್ರದ : ಕೊಡುವವನು

2 comments:

  1. ಬದುಕೋಕೆ ಉತ್ತಮ‌ ಸೂತ್ರಗಳು

    ಸೂಪರ್ ಗಿರಿ

    ReplyDelete
  2. ನಿಂದಕರಿರೋದಲಿಂದಲೇ ನಾವು ಬೆಳೆಯಬೇಕೆನ್ನುವ ಛಲ ನಮ್ಮಲ್ಲಿ ಮಾಡೋದು

    ReplyDelete