Sunday, December 16, 2018

ದೃಷ್ಟಿ ನಿನ್ನ ಪಾದದಲ್ಲಿ / Drushti ninna paadadalli

ಸಾಹಿತ್ಯ: ಶ್ರೀ ಪುರಂದರದಾಸರು 
ಗಾಯಕರು: ಶ್ರೀ ಶಂಕರ್ ಶಾನಭೋಗ್ 


ಧ್ವನಿಸುರಳಿಯ ಕೊಂಡಿ / Hear the song 


ದೃಷ್ಟಿ ನಿನ್ನ ಪಾದದಲ್ಲಿ ನೆಡೋ ಹಾಂಗೆ ಕೃಷ್ಣ                    || ಪ ||
ದುಷ್ಟ ಜನ ಸಂಗವನ್ನು ಬಿಡೋ ಹಾಂಗೆ
ಕೆಟ್ಟ ಮಾತು ಕಿವಿಗೆ ಕೇಳಿಸದ್ಹಾಂಗೆ
ಮನ ಕಟ್ಟಿಸಯ್ಯ ನಿನ್ನ ಪಾದ ಬಿಡದ್ಹಾಂಗೆ                       || ೧ ||

ದಿಟ್ಟನಾಗಿ ಕೈಯಾನೆತ್ತಿ ಕೊಡೊ ಹಾಂಗೆ
ಕೃಷ್ಣ ನಿನ್ನ ಪೂಜೆಯನ್ನು ನಾ ಮಾಡೋ ಹಾಂಗೆ
ಭ್ರಷ್ಟನಾಗಿ ನಾಲ್ವರೊಳು ತಿರುಗದ್ಹಾಂಗೆ
ಶಿಷ್ಟ ಜನ ಸೇವೆಯನ್ನು ಮಾಡೋ ಹಾಂಗೆ                        || ೨ ||

ಹುಟ್ಟಿಸಿದ ತಾಯಿತಂದೆಯಲ್ಲೋ ನೀನು ಕೃಷ್ಣ
ಹೊಟ್ಟೆಗಾಗಿ ದೈನ್ಯಪಡಲಾರೆ ನಾನು
ಪಟ್ಟೆಪಟ್ಟಾವಳಿ ಬೇಡಲಿಲ್ಲ ನಾನು
ಗುಟ್ಟು ಅಭಿಮಾನಗಳ ಕಾಯೋ ನೀನು                         || ೩ ||

ನಟ್ಟ ನಡು ನೀರೊಳಗೆ ಈಸರಾಲೆ ನಾ
ಕಟ್ಟೆ ಸೇರಿಸಬೇಕಯ್ಯ ನೀನು
ಬೆಟ್ಟದಂತ ಪಾಪಗಳ ಹೊತ್ತಿರುವೆ ನಾನು
ಸುಟ್ಟು ಬಿಡು ಪುರಂದರ ವಿಠ್ಠಲ ನೀನು                          || ೪ ||

No comments:

Post a Comment