ಗಾಯಕರು : ಶ್ರೀಮತಿ ಶೃತಿ ಕಣ್ಣನ್
ಧ್ವನಿಸುರಳಿಯ ಕೊಂಡಿ / Hear the song
ಇನ್ನು ದಯ ಬಾರದೆ ದಾಸನ ಮೇಲೆ || ಪ ||
ಪನ್ನಗ ಶಯನ ಶ್ರೀ ಪರಮ ಪುರುಷ || ಅ.ಪ ||
ನಾನಾ ದೇಶಗಳಲ್ಲಿ ನಾನಾ ಕಾಲಗಳಲ್ಲಿ
ನಾನಾ ಯೋನಿಗಳಲ್ಲಿ ನಲಿದು ಹುಟ್ಟಿ
ನಾನು ನನ್ನದು ಎಂಬ ನರಕದೊಳಗೆ ಬಿದ್ದು
ನೀನೆ ಗತಿ ಎಂದು ನಂಬಿದ ದಾಸನ ಮೇಲೆ || ೧ ||
ಮನೋವಾಕ್ಕಾಯದಿಂದ ಮಾಡುವ ಕರ್ಮಗಳೆಲ್ಲ
ದಾನವಾಂತಕ ನಿನಗೆ ದಾನವಿತ್ತೆ
ಏನು ಮಾಡಿದರೇನು ಪ್ರಾಣ ನಿನ್ನದು ಸ್ವಾಮಿ
ಶ್ರೀನಾಥ ಪುರಂದರ ವಿಠಲನ ದಾಸನ ಮೇಲೆ || ೨ ||
ಪದಗಳಾರ್ಥ:
=========
ಮನೋವಾಕ್ಕಾಯ = ಮನ:+ವಾಕ್+ಕಾಯ = ಕಾಯಾವಾಚಾಮನಸಾ
------------------------------------------------------------------------
Saahitya : Sri Purandaradasaru
Singer : Smt Shruti Kannan
innU daya bArade dAsana melE || pa ||
pannaga shayana shrI parama puruSha || a.pa ||
nAnA deshagaLalli nAnA kAlagaLalli
nAnA yonigaLalli nlidu huTTi
nAnu nannadu yeMba narakadoLagE biddu
nInE gati eMdu naMbida dAsana mEle || 1 ||
manOvakkAyadiMda mADuva karmagaLella
dAnavAMtaka ninag dAnavitt
enu mADidarenu prANa ninnadu svAmi
shrInAtha puraMdara viThalana dAsana mEle || 2 ||
manOvakkAyadiMda = manaH + vaak + kAya = kAyA vAchA manasA
No comments:
Post a Comment