Sunday, December 23, 2018

ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ / Hetta Taayi Tandegala Chittava Noyisi

ಸಾಹಿತ್ಯ    : ಶ್ರೀ ಪುರಂದರದಾಸರು 
ಗಾಯಕರು: ಶ್ರೀ ವಿದ್ಯಾಭೂಷಣ  
ಗಾಯಕರು: ಶ್ರೀ ಭರತೀಶ  



ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ
ನಿತ್ಯ ದಾನವ ಮಾಡಿ ಫಲವೇನು                       || ಪ ||

ಸತ್ಯ ಸದಾಚಾರ ಇಲ್ಲದವನು
ಜಪ ಹತ್ತುಸಾವಿರ ಮಾಡಿ ಫಲವೇನು                || ಅ.ಪ ||

ತನ್ನ ಸತಿ ಸುತರು ಬಂಧುಗಳ ನೋಯಿಸಿ
ಚಿನ್ನ ದಾನವ ಮಾಡಿ ಫಲವೇನು
ಬಿನ್ನಾಣದಿಂದಲಿ ದೇಶ ದೇಶವ ತಿರುಗಿ
ಅನ್ನ ದಾನವ ಮಾಡಿ ಫಲವೇನು                      || ೧ ||

ಗೋಪ್ಯ ಗುಣ ಗುಟ್ಟು ಇಲ್ಲದ ಹೆಣ್ಣಿಗೆ
ರೂಪ ಯೌವನವಿದ್ದು ಫಲವೇನು
ತಾಪತ್ರಯದಿ ಸಂಸಾರ ಕೆಡಿಸುವಂಥ
ಪಾಪಿ ಮಗನು ಇದ್ದು ಫಲವೇನು                      || ೨ ||

ತುಂಡು ಧನದಿಂದ ತಂದೆ ಮಾತು ಕೇಳದ
ತೊಂಡ ಮಗನು ಇದ್ದು ಫಲವೇನು
ಭಂಡು ಮಾಡಿ ಅತ್ತೆ ಮಾವನ ಬೈವ
ಪುಂಡು ಸೋಸೆಯಿದ್ದು ಫಲವೇನು                  || ೩ ||

ಸ್ನಾನಕ್ಕೆ ಪಾನಕ್ಕೆ ಆಗುವ ತಿಳಿ ನೀರು
ಕಾನನ ದೊಳಗಿದ್ದು ಫಲವೇನು
ಆನಂದ ಮೂರುತಿ ಪುರಂದರ ವಿಠ್ಠಲನ್ನ
ನೆನೆಯದ ತನುವಿದ್ದು ಫಲವೇನು                     || ೪ ||


ಪದಗಳಾರ್ಥ:
=========
ತೊಂಡ :  ಕಳ್ಳ, ಚೋರ, ಠಕ್ಕ
ಪುಂಡು : ಕಟ್ಟಲೆ ಮೀರಿದ, ಹತೋಟಿಗೆ ಸಿಗದ

ಹಾಡಿನ ಕೊಂಡಿ 🔻
ಗಾಯಕರು: ಶ್ರೀ ವಿದ್ಯಾಭೂಷಣ 

ಗಾಯಕರು: ಶ್ರೀ ಭರತೀಶ   

No comments:

Post a Comment