ಸಂಗೀತ ಸಂಯೋಜಕರು & ಗಾಯಕರು : ಶ್ರೀ ಸಿ.ಅಶ್ವಥ್
ಧ್ವನಿಸುರಳಿಯ ಕೊಂಡಿ / Hear the song
ದೊಡ್ಡ ಕೊಂಡ ಕೋತಿಯಂತೆ ಕುಣಿಕುಣಿಸುತ್ತಿ ||ಅ.ಪ ||
ಹೊತ್ತಾರೆ ಏಳುತ್ತಿ, ಹೊರಗೆ ತಿರುಗಾಡುತ್ತಿ
ಹೊತ್ತು ಹೋಯಿತು, ಭತ್ಯ ತಾ ಎನ್ನುತ್ತಿ
ಉತ್ತಮ ಗುರುಹಿರಿಯರ ಮಾತನ್ನು ಮೀರುತ್ತಿ
ಮೃತ್ಯು ದೇವತೆಯಂತೆ ಮನೆಯೊಳಗಿರುತಿ || ೧ ||
ಇಲ್ಲದ್ದು ಬೇಡುತ್ತಿ, ಸುಳ್ಳನ್ನು ಮಾತಾಡುತ್ತಿ
ಒಳ್ಳೆ ಊಟವನುಂಡು ಕುಳಿತಿರ್ಪೆನಂತಿ
ಎಳ್ಳಿನಷ್ಟೂ ಕೆಲಸ ಮಾಡಲಾರೆನೆಂತಿ
ಎಲ್ಲೆಲ್ಲಿ ತಲೆ ಎತ್ತದ ಹಾಗೆ ಮಾಡುತ್ತಿ || ೨ ||
ಹಿರಿಯತನಕೆ ಹೋಗುತ್ತಿ, ಗರುವಿಕೆ ಮಾಡುತ್ತಿ
ನೆರೆಹೊರೆಯರ ಕೂಡ ಬಡಿದಾಡುತ್ತಿ
ದೊರೆ ಸಿರಿಪುರಂದರವಿಠಲನ ಸ್ಮರಿಸದೆ
ದುರಿತಕ್ಕೆ ಗುರಿಯಾಗಿ ನೀ ನಿಲ್ಲುತ್ತಿ || ೩ ||
ಕ್ಲಿಷ್ಟ ಪದಗಳ ಅರ್ಥ :
------------------
ಭತ್ಯ : allowance
Beautiful...super efforts giri..keep going
ReplyDeleteಧನ್ಯವಾದಗಳು ಶ್ರೀ .. ಇದೇ ರೀತಿ ನಿಮ್ಮ ಪ್ರೋತ್ಸಾಹ ನನ್ನ ಮೇಲೆ ಸದಾ ಇರಲಿ
Delete